ಎಸ್ ಬಿ ಐ ಪ್ರೊಬೆಷನರಿ ಆಫೀಸರ್ ಹುದ್ದೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇನ್ನು ಒಂದೇ ವಾರ ಬಾಕಿ !

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನು ಕೇವಲ ಒಂದು ವಾರ ಮಾತ್ರ ಸಮಯಾವಕಾಶ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನು ಕೇವಲ ಒಂದು ವಾರ ಮಾತ್ರ ಸಮಯಾವಕಾಶ ಇದೆ.
ಮಾರ್ಚ್ 06, 2017 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುವುದರಿಂದ ಆಸಕ್ತ ಅಭ್ಯರ್ಥಿಗಳು ಎಸ್ ಬಿ ಐ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಮಾರ್ಚ್ 06 ಅರ್ಜಿ ಸಲ್ಲಿಸಲು ಕೊನೆ ದಿನ

ಅರ್ಜಿ ಸಲ್ಲಿಸುವ ವಿಧಾನ

ಎಸ್ ಬಿ ಐ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ , https://www.sbi.co.in/careers/ongoing-recruitment.html
ಆನ್ಲೈನ್ ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ
ಅರ್ಜಿ ತುಂಬಿದ ನಂತರ ಪರಿಶೀಲಿಸಿ
submit ಬಟನ್ ಕ್ಲಿಕ್ ಮಾಡಿ
ಅರ್ಜಿಯನ್ನು ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 600 ರೂ. ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ್ದ ದಿನಾಂಕ
ಫೆಬ್ರವರಿ.07 ,2017 ರಿಂದ ಮಾರ್ಚ್ 06 , 2017
ಶುಲ್ಕ ಪಾವತಿಸಲು ನಿಗದಿ ಪಡಿಸಿದ್ದ ದಿನಾಂಕ
ಫೆಬ್ರವರಿ.07 ,2017 ರಿಂದ ಮಾರ್ಚ್ 06 , 2017
ಆನ್ಲೈನ್ ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ
ಏಪ್ರಿಲ್ 15 ರ ನಂತರ
ಆನ್ಲೈನ್ ಪರೀಕ್ಷೆ-ಪೂರ್ವಭಾವಿ (ಪ್ರಿಲಿಮ್ಸ್)
ಏಪ್ರಿಲ್ 29 , 30 ಮತ್ತು ಮೇ 06 , 07
ಪ್ರಿಲಿಮ್ಸ್ ಫಲಿತಾಂಶ
ಮೇ 15 , 2017
ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ
ಮೇ 22 , 2017
ಮುಖ್ಯ ಪರೀಕ್ಷೆ ನಡೆಯುವ ದಿನಾಂಕ
ಜೂನ್ 04 ,2017
ಮುಖ್ಯ ಪರೀಕ್ಷೆಯ ಫಲಿತಾಂಶ
ಜೂನ್ 19 , 2017
ಸಂದರ್ಶನ ಪತ್ರ ಪಡೆಯುವ ದಿನಾಂಕ
ಜೂನ್ 26 , 2017
ಸಂದರ್ಶನ ಮತ್ತು ಗುಂಪು ಚರ್ಚೆ ನಡೆಯುವ ದಿನಾಂಕ
ಜುಲೈ 10 ,2017
ಅಂತಿಮ ಫಲಿತಾಂಶದ ದಿನಾಂಕ
ಆಗಸ್ಟ್ 04 ,2017

ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆ

  • ನಿಗದಿ ಪಡಿಸಿದ ದಿನಾಂಕದಂದು ಮೊದಲ ಹಂತದ ಪೂರ್ವಭಾವಿ (ಪ್ರಿಲಿಮ್ಸ್‌) ಪರೀಕ್ಷೆ ನಡೆಯಲಿದೆ.
  • ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು, ಬೀದರ್‌, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ.
  • ಈ ಪರೀಕ್ಷೆಯಲ್ಲಿ ಬ್ಯಾಂಕ್‌ ನಿಗದಿಪಡಿಸಿದಷ್ಟು ಅಂಕ ಪಡೆದು ತೇರ್ಗಡೆಯಾದವರು ಮುಖ್ಯ (ಮೇನ್‌) ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ.

ಎರಡೂ ಮಾದರಿಯ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯಲಿದ್ದು, ವಸ್ತುನಿಷ್ಠ ಮತ್ತು ವಿವರಣಾತ್ಮಕ ಮಾದರಿಯ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದಲ್ಲಿ ನಡೆಯಲಿರುವ ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಭಾಗವಹಿಸಿ ನೇಮಕಕ್ಕೆ ಅರ್ಹತೆ ಪಡೆಯಬೇಕಾಗುತ್ತದೆ. ಪ್ರೊಬೆಷನರಿ ಆಫೀಸರ್‌ ಆಗಿ ಆಯ್ಕೆಯಾದವರು ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಎರಡು ವರ್ಷದ ತರಬೇತಿಯ ನಂತರ ಅಭ್ಯರ್ಥಿಗಳನ್ನು ಆಫೀಸರ್‌ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
There is only one more week left for the last date to register in the SBI PO exams
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X