ಸುಪ್ರೀಂ ಆದೇಶ: ಡೀಮ್ಡ್ ಶಿಕ್ಷಣ ಸಂಸ್ಥೆಗಳು 'ವಿಶ್ವವಿದ್ಯಾಲಯ' ಪದ ಬಳಸುವಂತಿಲ್ಲ

ಡೀಮ್ಡ್ ಶಿಕ್ಷಣ ಸಂಸ್ಥೆಗಳು ಪದವಿ ನೀಡಬಹುದು ಆದರೆ ಯುಜಿಸಿ ಕಾಯ್ದೆಯ ಕಲಂ 23ರನ್ವಯ ತಮ್ಮ ಹೆಸರಿನ ಮುಂದೆ ‘ವಿಶ್ವವಿದ್ಯಾಲಯ' ಎಂದು ಹಾಕಿಕೊಳ್ಳುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಡೀಮ್ಡ್ ಶಿಕ್ಷಣ ಸಂಸ್ಥೆಗಳು ತಮ್ಮ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಹಾಕಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಆದೇಶವನ್ನು ತಿಂಗಳೊಳಗೆ ಜಾರಿಗೊಳಿಸುವಂತೆ ಕೋರ್ಟ್ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ಆದೇಶಿಸಿದೆ.

ಡೀಮ್ಡ್ ಶಿಕ್ಷಣ ಸಂಸ್ಥೆಗಳು ಪದವಿ ನೀಡಬಹುದು ಆದರೆ ಯುಜಿಸಿ ಕಾಯ್ದೆಯ ಕಲಂ 23ರನ್ವಯ ತಮ್ಮ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಹಾಕಿಕೊಳ್ಳುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಡೀಮ್ಡ್ ಶಿಕ್ಷಣ ಸಂಸ್ಥೆಗಳು 'ವಿಶ್ವವಿದ್ಯಾಲಯ'  ಪದ ಬಳಸುವಂತಿಲ್ಲ

ದೂರ ಶಿಕ್ಷಣ ಮಾದರಿಯಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಆರಂಭಿಸಲು ಮತ್ತು ಪದವಿ ನೀಡಲು ಡೀಮ್ಡ್ ಶಿಕ್ಷಣ ಸಂಸ್ಥೆಗಳ ಅರ್ಹತೆ ಕುರಿತ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

ದೇಶಾದ್ಯಂತ ಸುಮಾರು 117 ಡೀಮ್ಡ್ ವಿವಿಗಳಿವೆ. ಇವುಗಳಲ್ಲಿ ಬಹುತೇಕ ವಿವಿಗಳು ಪೂರ್ಣ ಪ್ರಮಾಣದ ಖಾಸಗಿ ವಿವಿ ಸ್ಥಾನಮಾನ ಬಯಸುತ್ತಿವೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಶಾದ್ಯಂತ ಇರುವ ನೂರಕ್ಕೂ ಅಧಿಕ ಡೀಮ್ಡ್ ವಿವಿಗಳಿಗೆ ಹಿನ್ನಡೆಯಾಗಿದೆ.

ಡೀಮ್ಡ್ ಶಿಕ್ಷಣ ಸಂಸ್ಥೆ

ಡೀಮ್ಡ್ ಸ್ಥಾನಮಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ನಿಯಂತ್ರಣದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಇರುವಷ್ಟೇ ಹಕ್ಕು ಮತ್ತು ಅಧಿಕಾರಗಳಿರುತ್ತವೆ.

ಡೀಮ್ಡ್ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರದ ಯಾವ ನಿಯಂತ್ರಣವೂ ಇರುವುದಿಲ್ಲ. ಅದು ಆಡಳಿತಾತ್ಮಕ ವ್ಯವಹಾರವಿರಬಹುದು, ವ್ಯವಸ್ಥೆ ಇರಬಹುದು, ಸಂಬಳ ನಿರ್ಧಾರ, ನೀಡಿಕೆ ಎಲ್ಲವೂ ಮುಕ್ತ ಹಾಗೂ ಮ್ಯಾನೇಜ್‌ಮೆಂಟ್ ನಿಯಂತ್ರಣದಲ್ಲಿರುತ್ತವೆ. ಅವು ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುತ್ತವೆ, ಅಡ್ಮಿಶನ್ ಮಾಡಿಕೊಳ್ಳುತ್ತವೆ. ತಮಗೆ ಇಷ್ಟ ಬಂದಂತೆ ಪಠ್ಯಕ್ರಮ(ಸಿಲಬಸ್)ವನ್ನೂ ರೂಪಿಸುತ್ತವೆ. ಸ್ವತಂತ್ರವಾಗಿ ಪ್ರಶ್ನೆ ಪತ್ರಿಕೆಗಳನ್ನೂ ಸಿದ್ಧಪಡಿಸುತ್ತವೆ, ಮೌಲ್ಯಮಾಪನ ಮಾಡುತ್ತವೆ.

For Quick Alerts
ALLOW NOTIFICATIONS  
For Daily Alerts

English summary
The Supreme Court has passed an order, on November 3, directing all the deemed varsities to no more use the word ''university'' in their names.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X