ಸಿಬಿಎಸ್ಇ ಕೃಪಾಂಕ ಮುಂದುವರಿಕೆಗೆ ದೆಹಲಿ ಹೈ ಕೋರ್ಟ್ ಆದೇಶ

ಸಿಬಿಎಸ್ಇ ಗ್ರೇಸ್ ಮಾರ್ಕ್ಸ್ ನೀತಿ ಈ ವರ್ಷವೂ ಮುಂದುವರೆಯಲಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿದ್ಯಾರ್ಥಿಯೊಬ್ಬರ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಿಬಿಎಸ್ಇ ಗ್ರೇಸ್ ಮಾರ್ಕ್ಸ್ ನೀತಿ ಈ ವರ್ಷವೂ ಮುಂದುವರೆಯಲಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿದ್ಯಾರ್ಥಿಯೊಬ್ಬರ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹತ್ತನೇ ಮತ್ತು 12ನೇ ತರಗತಿ ವಾರ್ಷಿಕ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಇದ್ದ ನೀತಿಯನ್ನೇ ಮುಂದುವರಿಸುವಂತೆ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಮತ್ತು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಅವರಿದ್ದ ನ್ಯಾಯಪೀಠ, ಕಳೆದ ವರ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಇದ್ದ ನೀತಿಯನ್ನೇ ಮುಂದುವರಿಸುವಂತೆ ಮಧ್ಯಂತರ ಆದೇಶ ನೀಡಿದೆ.

ಅರ್ಜಿ ಸಲ್ಲಿಸಿದ ಮೇಲೆ ನಿಯಮಗಳನ್ನು ಬದಲಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ರಾತ್ರಿ ಹಗಲು ಕಷ್ಟ ಪಟ್ಟು ಓದಿರುತ್ತಾರೆ. ಅವರಲ್ಲಿ ಅಭದ್ರತೆ ಉಂಟು ಮಾಡುವುದು ಬೇಡ. ಕೃಪಾಂಕ ನೀತಿಯನ್ನು ಈ ವರ್ಷದ ಮಟ್ಟಿಗೆ ವಾಪಸ್‌ ಪಡೆಯುವುದು ಬೇಡ ಎಂದು ನ್ಯಾಯಪೀಠ ಹೇಳಿದೆ.

ಸಿಬಿಎಸ್ಇ ಕೃಪಾಂಕ ಮುಂದುವರಿಕೆ

ನೂತನ ಪಾಲಿಸಿ

ಮಾಡರೇಷನ್ ಪಾಲಿಸಿ ಮೂಲಕ ನೀಡುತ್ತಿದ್ದ ಗ್ರೇಸ್ ಮಾರ್ಕ್ಸ್ ಗಳಿಗೆ ಬ್ರೇಕ್ ಹಾಕಲು ಸಿಬಿಎಸ್ಇ ನಿರ್ಧರಿಸಿತ್ತು. ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳಲ್ಲಿ ಭಾರೀ ಏರಿಳಿತವಾಗುವುದರಿಂದ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿಯನ್ನು ತೆಗೆದುಹಾಕಬೇಕೆಂದು ಸಿಬಿಎಸ್ಇ ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿತ್ತು.

ಪರೀಕ್ಷೆ ಕಷ್ಟವಿತ್ತು ಎಂದು ಗ್ರೇಸ್ ಅಂಕಗಳನ್ನು ನೀಡಿದರೆ ಚೆನ್ನಾಗಿ ಪರೀಕ್ಷೆ ಬರೆದವರಿಗೆ ಇನ್ನೂ ಹೆಚ್ಚು ಅಂಕ ಸಿಗುತ್ತದೆ. ಪರೀಕ್ಷೆ ಚೆನ್ನಾಗಿ ಬರೆಯದಿದ್ದವರಿಗೆ ಕಡಿಮೆ ಅಂಕ ಬರುತ್ತದೆ. ಕಟ್ ಆಫ್ ಮಾರ್ಕ್ಸ್ ವಿಷಯ ಬಂದಾಗ ಕಡಿಮೆ ಅಂಕ ಸಿಕ್ಕಿದವರೆಗೆ ಮುಂದೆ ಕಾಲೇಜಿನಲ್ಲಿ ಸೀಟು ಸಿಗಲು ತೊಂದರೆಯಾಗುತ್ತದೆ ಎನ್ನುವುದು ಸಿಬಿಎಸ್ಇ ವಾದ.

ಗ್ರೇಸ್ ಮಾರ್ಕ್ಸ್ ವಿವರ

ಕಠಿಣ ಪ್ರಶ್ನೆಗಳಿದ್ದ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಕೆಲವೇ ಅಂಕಗಳಿಂದ ಪಾಸಾಗುವಂತಿದ್ದರೆ ಅಂತಹ ವಿದ್ಯಾರ್ಥಿಗೆ ಸಾಮಾನ್ಯವಾಗಿ ಗರಿಷ್ಠ ಶೇ. 15ರಷ್ಟು ಹೆಚ್ಚುವರಿ ಅಂಕವನ್ನು ಗ್ರೇಸ್ ಅಂಕವನ್ನಾಗಿ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ಕಾಲೇಜುಗಳೂ ಅನಿವಾರ್ಯವಾಗಿ ಕಟಾಫ್ ಅಂಕಗಳನ್ನು ನಿಗದಿ ಮಾಡುತ್ತಿದ್ದವು. ಇದರಿಂದ ಸಿಬಿಎಸ್​ಇ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳು 12ನೇ ತರಗತಿ ನಂತರ ಪದವಿ ಕಾಲೇಜಿಗಳ ಪ್ರವೇಶಾತಿ ಸಂಬಂಧ ಗ್ರೇಸ್ ಅಂಕಗಳಿಂದಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತಿತ್ತು ಅದಕ್ಕೆಲ್ಲ ಪರಿಹಾರವೆಂಬಂತೆ ಈ ಕ್ರಮ ಕೈಗೊಳ್ಳಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
The evaluation for the class 10 and 12 board tests this year shall be done as per the grace marks policy that was in vogue when the students submitted the examination forms, the Delhi High Court ordered on Tuesday.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X