ಪ್ರಥಮ ದರ್ಜೆ ಕಾಲೇಜುಗಳಲ್ಲಿ ಟೆಲಿ ಶಿಕ್ಷಣಕ್ಕೆ ಆದೇಶ

Posted By:

ರಾಜ್ಯದ 73 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಟೆಲಿ ಶಿಕ್ಷಣ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ 64 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಸೇರಿ ಒಟ್ಟು 73 ಸರ್ಕಾರಿ ಕಾಲೇಜುಗಳಲ್ಲಿ ಉಪಗ್ರಹ-ಇಂಟರ್ನೆಟ್ ಎರಡೂ ತಂತ್ರಜ್ಞಾನವನ್ನು ಒಳಗೊಂಡ ಹೈಬ್ರೀಡ್ ತಂತ್ರಜ್ಞಾನ ಆಧಾರಿತ ಟೆಲಿ ಶಿಕ್ಷಣ ಸೌಲಭ್ಯವನ್ನು ಬಳಸಿಕೊಂಡು ಆಂಗ್ಲಭಾಷೆ ಪ್ರಾವೀಣ್ಯತೆ ಒದಗಿಸುವ ಸಂಬಂಧ ಟೆಲಿ ಎಜುಕೇಷನ್ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ.

ಕಾಲೇಜುಗಳಲ್ಲಿ ಟೆಲಿ ಶಿಕ್ಷಣ

ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಪ್ರತಿ ಕಾಲೇಜಿಗೆ ಒಬ್ಬ ಉಪನ್ಯಾಸಕರನ್ನು ಯೋಜನಾ ಸಂಯೋಜಕರನ್ನಾಗಿ ನೇಮಿಸುವಂತೆ ಸೂಚಿಸಿದೆ. ಅಲ್ಲದೆ ಟೆಲಿಶಿಕ್ಷಣ ಅನುಷ್ಠಾನ ಗೊಳಿಸಬೇಕಿರುವ ಕಡೆ ನಿತ್ಯ ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಟೆಲಿಶಿಕ್ಷಣ ತರಗತಿ ನಡೆಸುವಂತೆ ಈಗಾಗಲೆ ತಿಳಿಸಲಾಗಿದೆ.

ಟೆಲಿ ಶಿಕ್ಷಣ ಕಾರ್ಯಕ್ರಮ

ಐಐಎಂ ರಾಜ್ಯ ಸರ್ಕಾರದ ನೆರವಿನೊಂದಿಗೆ ಇದೇ ಕಾರ್ಯಕ್ರಮವನ್ನು ಪೈಲಟ್​ ಯೊಜನೆಯಾಗಿ 2014ರಲ್ಲಿ ಜಾರಿಗೆ ತಂದಿತು. ತರಗತಿ ಆರಂಭಿಸಿದ ಬಳಿಕ ಗ್ರಾಮಾಂತರ ಪ್ರದೇಶದ 10ನೇ ತರಗತಿ ಫಲಿತಾಂಶದಲ್ಲಿ ಗಣನೀಯ ಬದಲಾವಣೆಯಾಗಿದೆ. ಆರಂಭದ ಯಶಸ್ಸಿನಿಂದ ಉತ್ತೆಜಿತಗೊಂಡ ರಾಜ್ಯ ಸರ್ಕಾರ, ಸಾವಿರ ಶಾಲೆಗಳಿಗೆ ವಿಸ್ತರಿಸಲು ಮುಂದಾಯಿತು.

ಉಪಗ್ರಹ ಆಧಾರಿತ ಈ ಶೈಕ್ಷಣಿಕ ಕಾರ್ಯಕ್ರಮದ ಮೂಲಕ ಐಐಎಂನಲ್ಲಿರುವ ಶೈಕ್ಷಣಿಕ ತಜ್ಞರ ವಿಷಯತಜ್ಞತೆಯು ರಾಜ್ಯಾದ್ಯಂತ ಸರ್ಕಾರಿ ಶಾಲೆಯ ಮಕ್ಕಳಿಗೆ ದೊರೆಯುವಂತೆ ಮಾಡುವುದಾಗಿದೆ. ಈ ಕಾರ್ಯಕ್ರಮಕ್ಕೆ ಸ್ಯಾಟಲೈಟ್ ಆಂಡ್ ಅಡ್ವಾನ್ಸ್ಡ್ ಮಲ್ಟಿಮೀಡಿಯಾ ಎಜುಕೇಷನ್ ಅಥವಾ ಸೇಮ್ (ಎಸ್ಎಎಂಇ) ಎನ್ನಲಾಗುತ್ತದೆ. ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳ ಪಾಠವನ್ನು ಹೇಳಿಕೊಡಲಾಗುತ್ತದೆ.

ಕಾಲೇಜುಗಳಲ್ಲಿ ಇದಕ್ಕಾಗಿಯೇ ವಿಶೇಷ ತರಗತಿ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತದೆ. ಇಲ್ಲಿ ಸ್ಕ್ರೀನ್ ವ್ಯವಸ್ಥೆ ಇರುತ್ತದೆ. ಐಐಎಂ ಸ್ಟುಡಿಯೋದಿಂದ ತಜ್ಞರು ನೇರವಾಗಿ ಪಾಠ ಹೇಳಿಕೊಡುತ್ತಾರೆ. ವಿದ್ಯಾರ್ಥಿಗಳು ನೇರ ಪ್ರಸಾರದ ಮೂಲಕ ಪಾಠವನ್ನು ಆಲಿಸಬಹುದಾಗಿದೆ. ಐಐಎಂನ 'ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ' ನೇತೃತ್ವದಲ್ಲಿ ಈ ಶೈಕ್ಷಣಿಕ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಪಠ್ಯ ಸಾಮಗ್ರಿ ತಯಾರಿಸಿದವರು ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸಿದವರು ಸದಾ ನೆರವಿಗಿರುತ್ತಾರೆ. ಟೆಲಿ ಎಜುಕೇಷನ್ ಟಿವಿ ನೋಡಿದ ರೀತಿ ಮಕ್ಕಳಿಗೆ ಭಾಸವಾಗುತ್ತದೆ.

English summary
Department of collegiate education has sent circular to 73 government first grade colleges to start tele education.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia