ಶಿಕ್ಷಕ-ವಿದ್ಯಾರ್ಥಿ ಅನುಪಾತ 1:50ಕ್ಕೆ ನಿಗದಿಪಡಿಸಲು ಶಿಕ್ಷಣ ಇಲಾಖೆ ನಿರ್ಧಾರ

Posted By:

ಅನುದಾನಿತ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಅನುಪಾತವನ್ನು ಪರಿಷ್ಕರಿಸಿ 1:50 ಕ್ಕೆ ನಿಗದಿ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸದ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಅನುಪಾತ 1:70 ಇದೆ. ಸದ್ಯ ಸಿಬಿಎಸ್ಇ ಮಾದರಿ ಪಠ್ಯಕ್ರಮ ಜಾರಿಯಲ್ಲಿದ್ದು, ನಿರಂತರ ವ್ಯಪಾಕ ಮೌಲ್ಯಮಾಪನಗಳಿಂದಾಗಿ ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟವಾಗಿದೆ.

ಶಿಕ್ಷಕ-ವಿದ್ಯಾರ್ಥಿ ಅನುಪಾತ  ಪರಿಷ್ಕರಣೆ

ಸಿಬಿಎಸ್ಇ ನಿಯಾಮಾವಳಿ ಪ್ರಕಾರ ಅನುದಾನಿತ ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಶಿಕ್ಷಕ ವಿದ್ಯಾರ್ಥಿಗಳ ಅನುಪಾತವನ್ನು ಕಡ್ಡಾಯವಾಗಿ 1:40 ಕ್ಕೆ ಕಡಿತಗೊಳಿಸುವಂತೆ ವಿಧಾನಪರಿಷತ್ತಿನ ಸದಸ್ಯರು ಅಗ್ರಹಿಸಿದ್ದರು.

ಈಗಿರುವ 1:70 ರಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾವಹಿಸಲು ಕಷ್ಟವಾಗುತ್ತದೆ. ಅಲ್ಲದೇ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಸಿಬಿಎಸ್ಇ ಶಾಲೆಗಳ ಮಾದರಿಯಲ್ಲಿ ಒಬ್ಬ ಶಿಕ್ಷಕನಿಗೆ 40 ವಿದ್ಯಾರ್ಥಿಗಳಂತೆ ಇದ್ದರೆ ವಿದ್ಯಾರ್ಥಿಗಳ ಸರ್ವತೋಮುಕ ಬೆಳವಣಿಗೆಗೆ ಸಹಕಾರಿಯಾಗುವುದು. ಅಲ್ಲದೆ ಗುಣಮಟ್ಟದ ಶಿಕ್ಷಣದ ಜೊತೆಗೆ ಫಲಿತಾಂಶದಲ್ಲೂ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದೆ.

ಈ ಹಿನ್ನಲೆಯಲ್ಲಿ 1:50 ಕ್ಕೆ ಅನುಪಾತ ಇಳಿಸಲು ಮತ್ತು 71ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದಲ್ಲಿ ಮತ್ತೊಂದು ವಿಭಾಗ ತೆರೆಯಲು ಅವಕಾಶ ಕಲ್ಪಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಶಿಕ್ಷಕರ ಕಾರ್ಯಭಾರವನ್ನು ಸಿಬಿಎಸ್ಇ ಶಾಲೆಗಳಿಗೆ ಸಮನಾಗಿ ಹೆಚ್ಚಿಸಬೇಕು. ಅನುದಾನಿತ ಆಡಳಿತ ಮಂಡಳಿಗಳು ಅಗತ್ಯ ಮೂಲ ಸೌಲಭ್ಯವನ್ನು ನಿರ್ಮಿಸಬೇಕು ಎಂದು ಸೂಚಿಸಿದೆ.

English summary
The Education Department has decided to revise the ratio of teacher students in high schools of Aided Educational Institutions to 1:50. At present there is a teacher ratio of 1:70
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia