ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ಧನಸಹಾಯಕ್ಕೆ ಅರ್ಜಿ ಆಹ್ವಾನ

ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯ, ಜಾನಪದ, ನಾಟಕ ಹಾಗೂ ಇತರೆ ಕಲಾ ಪರಂಪರೆಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಧನಸಹಾಯ ನೀಡಲಾಗುತ್ತದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಪ್ರೋತ್ಸಾಹ ಧನಸಹಾಯಕ್ಕಾಗಿ ಆನ್-ಲೈನ್ ಆರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯ, ಜಾನಪದ, ನಾಟಕ, ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ ಹಾಗೂ ಕಲಾ ಪರಂಪರೆಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಧನಸಹಾಯವನ್ನು ನೀಡಲಾಗುತ್ತಿದೆ.

ಧನಸಹಾಯ ಮಂಜೂರಾತಿ ಮಾಡಲು ಕೆಲವು ನಿರ್ದಿಷ್ಠ ಮಾನದಂಡಗಳನ್ನು ವಿಧಿಸಿ, ನಿಯಮಾನುಸಾರ ಅರ್ಹವಾದ ಸಂಘ-ಸಂಸ್ಥೆಗಳಿಂದ ಜಿಲ್ಲಾ ಹಂತಗಳಲ್ಲಿ ಅರ್ಜಿ ಅಹ್ವಾನಿಸಿ, ಪರಿಶೀಲಿಸಿ, ಯೋಜನೆ ಮತ್ತು ಸಂಸ್ಥೆಯ ಕಾರ್ಯಕ್ಷಮತೆಯ ಆಧಾರದಲ್ಲಿ ಧನಸಹಾಯ ಮಂಜೂರಾತಿ ಮಾಡಲು ಅನುದಾನ ಮಂಜೂರಾತಿ ಸಮಿತಿ ರಚಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹ ಧನಸಹಾಯ

ಸೂಚನೆ

  • ಇಲಾಖೆಯ ಅಂತರ್ಜಾಲದ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
  • ರಾಜ್ಯ ಮತ್ತು ಹೊರರಾಜ್ಯಗಳ ಎಲ್ಲಾ ಸಾಂಸ್ಕೃತಿಕ ಸಂಸ್ಥೆಗಳು ಆನ್-ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸುವುದು.
  • ಅರ್ಹ ಮತ್ತು ಆಸಕ್ತ ಅರ್ಜಿದಾರರು ತಮ್ಮ ಅರ್ಜಿಗಳನ್ನು ದಿನಾಂಕ: 15-07-2017 ರಿಂದ 09-08-2017 ರವರೆಗೆ ಸಲ್ಲಿಸಲು ಅವಕಾಶವಿರುತ್ತದೆ. (ಬಿಟ್ಟು ಹೋದ ದಾಖಲೆಗಳನ್ನು ಸಲ್ಲಿಸಲು ದಿನಾಂಕ: 14-08-2017 ರವರೆಗೆ ಅವಕಾಶವಿರುತ್ತದೆ)
  • ಸಲ್ಲಿಕೆಯಾದ ಅರ್ಜಿ ಮತ್ತು ದಾಖಲೆಗಳನ್ನು ಆಯಾ ಜಿಲ್ಲಾ ಸಹಾಯಕ ಸಹಾಯಕ ನಿರ್ದೇಶಕರು ನಿಗದಿತ ದಿನಾಂಕಗಳಂದು ಪರಿಶೀಲಿಸಿ ರಾಜ್ಯ ಸಮಿತಿಯ ಮುಂದೆ ಮಂಡಿಸಿ ನಂತರ ಧನ ಸಹಾಯದ ಮೊತ್ತವನ್ನು ನಿರ್ಧರಿಸಿ, ಆರ್.ಟಿ.ಜಿ.ಎಸ್ ಮೂಲಕ ಸಂಬಂಧಿತ ಸಂಸ್ಥೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
  • ಆಯ್ಕೆಯಾದ ಸಂಘ ಸಂಸ್ಥೆಗಳು ಸಮಾಜಿಕ ತಪಾಸಣೆಗೆ ಒಳಪಡುತ್ತವೆ.

ಹೆಚ್ಚಿನ ವಿವರವಗಳಿಗಾಗಿ www.siri.kannadasiri.co.in ಗಮನಿಸಿ

ಪ್ರತಿ ವರ್ಷ ಸುಮಾರು 1000ಕ್ಕೂ ಹೆಚ್ಚಿನ ಸಂಘ- ಸಂಸ್ಥೆಗಳಿಗೆ ಅವುಗಳ ಚಟುವಟಿಕೆ ನಡೆಸಲು ಧನಸಹಾಯ , ಚಿತ್ರ ಕಲಾವಿದರು ಮತ್ತು ಶಿಲ್ಪ ಕಲಾವಿದರಿಗೆ ಅವರ ಕೃತಿಗಳ ಪ್ರದರ್ಶನ ನಡೆಸಲು ಧನಸಹಾಯ, ಅಸಂಘಟಿತ ಜನಪದ ಮತ್ತು ಸಂಗೀತ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷ ಭೂಷಣ ಖರೀದಿಗೆ ಧನಸಹಾಯ ಹೀಗೆ ವಿವಿಧ ಪ್ರಕಾರಗಳಲ್ಲಿ ಮನವಿಗಳನ್ನು ಪರಿಶೀಲಿಸಿ ಧನಸಹಾಯ ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Department of kannada and culture invites application from the cultural organisations for the 2017-18 incentives.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X