ಬದಲಾಗಲಿದೆ ಶಿಕ್ಷಣ ವ್ಯವಸ್ಥೆ: ಇನ್ನು ಮುಂದೆ ಓದುವುದು, ಬರೆಯುವುದು ಎಲ್ಲವು ಆನ್ಲೈನ್

Posted By:

ತಂತ್ರಜ್ಞಾನ ಮುಂದುವರೆದಂತೆ ಜಗತ್ತು ಕೂಡ ತನಗರಿವಿಲ್ಲದಂತೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಅನಿವಾರ್ಯವಾಗಿ ಬದಲಾಗಲೇಬೇಕಾದ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಶಿಕ್ಷಣ ವ್ಯವಸ್ಥೆ ಕೂಡ ಇಂದು ಸಾಕಷ್ಟು ಬದಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೂ ಬದಲಾಗುವ ಸೂಚನೆ ನೀಡಿದೆ.

ಕೆರಿಯರ್ ಟ್ರೆಂಡ್ಸ್ 2018: ಅನಿಮೇಷನ್ ಮಾಯಾಲೋಕದಲ್ಲಿ ಕೈತುಂಬಾ ಕೆಲಸ ಮತ್ತು ಹಣ

ಜಗತ್ತಿಗೆ ಜಗತ್ತೇ ಡಿಜಿಟಲ್ ಮಯವಾಗಿರುವಾಗ ಅದಕ್ಕೆ ತಕ್ಕಂತೆ ಅಪ್ಡೇಟ್ ಆಗುವುದು ಕೂಡ ಅನಿವಾರ್ಯವಾಗಿದೆ. ಶಿಕ್ಷಣ ವ್ಯವಸ್ಥೆ ಬಹಳಷ್ಟು ಸುಧಾರಿಸಿದ್ದು, ಆಧುನಿಕ ಶಿಕ್ಷಣ ಎಲ್ಲೆಡೆ ವ್ಯಾಪಿಸಿದೆ. ಒಂದು ಕಾಲದಲ್ಲಿ ಸ್ಲೇಟು ಬಳಪ ಹಿಡಿದು ಶಾಲೆಗೇ ಹೋಗುವ ಪರಿಸ್ಥಿತಿ ದೂರವಾಗಿ ಇಂದು ಸ್ಮಾರ್ಟ್ ಫೋನ್ ಹಿಡಿದು ಶಾಲೆ ಹೋಗುವ ತನಕ ಬಂದಿದೆ.

ವಾಟ್ಸಾಪ್, ಫೇಸ್ಬುಕ್ ಬಳಸುವುದೇ ಉದ್ಯೋಗವಾದಾಗ!

ಬದಲಾಗಲಿದೆ ಶಿಕ್ಷಣ ವ್ಯವಸ್ಥೆ

ಶಾಲಾ ಕಾಲೇಜುಗಳು ಡಿಜಿಟಲ್ ಶಿಕ್ಷಣದ ಮೊರೆ ಹೊಂದಿದ್ದಾರೆ. ಬಹುತೇಕ ಶಾಲಾ ಕಾಲೇಜುಗಳು ತಮ್ಮ ಸಂಸ್ಥೆಯ ಆ್ಯಪ್‍ ಮೂಲಕ ಮಕ್ಕಳೊಂದಿಗೆ ಸಂವಹನ ನಡೆಸುವುದನ್ನು ಪ್ರಾರಂಭಿಸಿವೆ. ಮಕ್ಕಳ ಹೋಂ ವರ್ಕ್, ಅಸೈನ್ಮೆಂಟ್ ಇತ್ಯಾದಿಗಳ ವರದಿಗಳನ್ನು ಸಹ ಆ್ಯಪ್‍ ಮೂಲಕವೇ ವ್ಯವಹರಿಸುತ್ತಿವೆ. ಅಲ್ಲದೆ ತರಗತಿಗಳು ಕೂಡ ಡಿಜಿಟಲೀಕರಣಗೊಂಡಿವೆ. ಡಿಜಿಟಲ್ ಬೋರ್ಡ್ ಗಳ ಮೇಲೆ ಪ್ರೊಜೆಕ್ಟರ್ ಗಳನ್ನ ಬಳಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಇದರ ಮುಂದುವರಿದ ಭಾಗವಾಗಿ ಆನ್ಲೈನ್ ಪರೀಕ್ಷೆಗಳನ್ನು ನಡೆಸಲು ಹಲವು ಶಾಲೆಗಳು ಚಿಂತಿಸಿವೆ. ಪರೀಕ್ಷೆ, ಮೌಲ್ಯಮಾಪನ ಮತ್ತು ಪ್ರಶ್ನಾ ಪತ್ರಿಕೆ ನೀಡಿಕೆ ಇನ್ನು ಮುಂದೆ ಆನ್‌ಲೈನ್ ಆಗಲಿದೆ.

ಗ್ರೂಪ್ ಸ್ಟಡಿಗೆ ಸಹಕಾರಿಗುವ ಸೋಷಿಯಲ್ ಮೀಡಿಯಾ

ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ, ಶಿಕ್ಷಣದ ಗುಣಮಟ್ಟ ಸುಧಾರಣೆ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹವೂ ಇದರಲ್ಲಿ ಸೇರಲಿದೆ.

ಆನ್ಲೈನ್ ಪರೀಕ್ಷೆಗಳು ನಿಜಕ್ಕೂ ಹೆಚ್ಚು ಪರಿಣಾಮಕಾರಿಯಾಗಲಿವೆ. ಏಕೆಂದರೆ ಇಲ್ಲಿ ನಕಲು ಮಾಡಲು ಅವಕಾಶವಿರುವುದಿಲ್ಲ, ಅಲ್ಲದೆ ಸಾಕಷ್ಟು ಸಮಯ ಮತ್ತು ಶ್ರಮ ಉಳಿತಾಯವಾಗುತ್ತದೆ.

ಈಗಾಗಲೇ ದೂರ ಶಿಕ್ಷಣದ ವ್ಯವಸ್ಥೆ ದೂರವಾಗುತ್ತಾ ಬಂದಿದ್ದು ಆನ್ಲೈನ್ ಕೋರ್ಸುಗಳು ಆವರಿಸುತ್ತಿವೆ. ಕೆಲವೊಂದು ಶಿಕ್ಷಣ ಸಂಸ್ಥೆಗಳೇ ಆನ್ಲೈನ್ ಕೋರ್ಸುಗಳನ್ನು ಶುರು ಮಾಡಿ ಅದಕ್ಕೆ ಪರೀಕ್ಷೆ ನಡೆಸಿ ಪ್ರಮಾಣ ಪಾತ್ರವನ್ನು ಸಹ ನೀಡುತ್ತಿವೆ. ಇದರಿಂದ ಎಲ್ಲಿ ಬೇಕಾದರೂ ಶಿಕ್ಷಣ ಪಡೆಯಬಹುದಾಗಿದ್ದು, ಆನ್ಲೈನ್ ಕೋರ್ಸ್ಗಳಿಗೆ ಬೇಡಿಕೆ ಕೂಡ ಹೆಚ್ಚುತ್ತಿದೆ.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಜಾರಿಯಾಗುವ ಎಲ್ಲ ಸೂಚನೆಗಳು ಸಿಕ್ಕಿವೆ. ಆದರೆ ಇದರಿಂದ ಮಕ್ಕಳ ಕಲಿಕಾ ಮಟ್ಟ, ಕೌಶಲ್ಯ ಹೇಗೆ ಉತ್ತಮಗೊಳ್ಳುತ್ತದೆ ಎನ್ನುವುದು ಮಾತ್ರ ಮುಂದಿರುವ ಪ್ರಶ್ನೆಯಾಗಿದೆ.

2018 ಇ-ಲರ್ನಿಂಗ್ ಯುಗ: ಇಂಟರ್ನೆಟ್, ಸ್ಮಾರ್ಟ್ ಫೋನ್ ನಿಂದ ಬದಲಾಗುತ್ತಿದೆ ಶಿಕ್ಷಣ

English summary
Everything is going digital, Schools are now providing their students with digital devices like desktop computers, laptops and tablets.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia