Schools Reopening Date in Karnataka: ಕರ್ನಾಟಕದಲ್ಲಿ ಶಾಲೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದು ತಿಳಿದಿಲ್ಲ

ಕೊರೋನಾ ಬಂದ ದಿನದಿಂದ ಇಲ್ಲಿಯವರೆಗೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದ ಮೇಲೆ ಅಪಾರವಾದ ಪರಿಣಾಮ ಬೀರಿದೆ. ಇನ್ನು ಈ ಸಂದರ್ಭಧಲ್ಲಿ ಶಾಲೆಗಳನ್ನು ಯಾವಾಗ ಆರಂಭ ಮಾಡಬೇಕು ಮತ್ತು ಆರಂಭ ಮಾಡಿದ ನಂತರ ತರಗತಿಗಳನ್ನು ನಡೆಸುವುದು ಹೇಗೆ ಎಂಬ ಮಾಹಿತಿ ನಮಗೂ ತಿಳಿದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಶಾಲೆಗಳು ಯಾವಾಗಿನಿಂದ ಆರಂಭ?

ಪಿಎಫ್ ಮುಂಗಡ, ರಜೆ ಮತ್ತು ವರ್ಗಾವಣೆಯಂತಹ ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ಶಿಕ್ಷಕ ಮಿತ್ರ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಿರುವ ಬಗ್ಗೆ ಮುಖ್ಯಮಂತ್ರಿ ಅವರಿಂದ ಮೆಚ್ಚುಗೆಯ ಪ್ರಶಂಸೆ ಬಂದಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಲು ಮನವಿಗಳು ಬರುತ್ತಿವೆ. ಆದರೆ ಕೊರೋನಾ ಹೆಚ್ಚುತ್ತಿರುವ ನಡುವೆಯೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ಸರಾಗವಾಗಿ ನಡೆದಿವೆ ಹಾಗಾಗಿ ಈ ಬಗ್ಗೆಯೂ ಗಮನಹರಿಸಬೇಕು ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Education minister suresh kumar says that we dont know when and how schools will reopen in karnataka.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X