ಡಾ.ರಾಜ್ ಕಲಾ ಸೇವೆ ಇನ್ನುಮುಂದೆ ಶಿಕ್ಷಣ ಸೇವೆಯಾಗಲಿದೆ.

Posted By:

ವರನಟ ಡಾ.ರಾಜ್ ಕುಮಾರ್ ಮಾಡದ ಪಾತ್ರಗಳಿಲ್ಲ. ತಮ್ಮ ವೈವಿಧ್ಯಮಯ ನಟನೆ ಮತ್ತು ಗಾಯನದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ರಾಜ್ ಕುಮಾರ್. ನಾಡುನುಡಿ ಮೇಲಿನ ತಮ್ಮ ಅಭಿಮಾನ, ಸಮಾಜದ ಮೇಲಿನ ಕಾಳಜಿ ಮತ್ತು ಸರಳ ವ್ಯಕ್ತಿತ್ವದಿಂದ ಸಮಾಜಕ್ಕೆ ಮಾದರಿಯಾದವರು ಅಣ್ಣಾವ್ರು.

ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಕರೆಸಿಕೊಂಡಿದ್ದವರು ಡಾ.ರಾಜ್ ಕುಮಾರ್.  'ಅಣ್ಣಾವ್ರ' ಕಲಾ ಸೇವೆ ಇನ್ನುಮುಂದೆ ಶಿಕ್ಷಣ ಸೇವೆಯಾಗಲಿದೆ.

ಶಾಲಾ ಪಠ್ಯಪುಸ್ತಕದಲ್ಲಿ ಡಾ.ರಾಜ್ ಕುಮಾರ್

ಕಲೆಗಾಗಿಯೇ ಜೀವನವನ್ನು ಮುಡಿಪಿಟ್ಟು ತೆರೆಮೇಲೆ ಕಾಣುತ್ತಿದ್ದ ರಾಜ್ ಕುಮಾರ್ ಇನ್ನುಮುಂದೆ ಪಠ್ಯಪುಸ್ತಕಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ವರನಟ ಡಾ. ರಾಜ್ ಕುಮಾರ್ ಅವರ ಜೀವನಗಾಥೆ ಶಾಲಾ ಪಠ್ಯವಾಗಲಿದೆ. ರಾಜ್ ಅವರ ಜೀವನ ಹಾಗೂ ಸಾಧನೆ ಕುರಿತು ಮುಂದಿನ ಪೀಳಿಗೆಗೆ ತಿಳಿಸಿವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ಒಂದು ಅಧ್ಯಯನ ಅಳವಡಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಶಿಕ್ಷಣದಲ್ಲಿ ಡಾ.ರಾಜ್ ಮಾರ್ಗದರ್ಶನ

ಡಾ.ರಾಜ್ ಹುಟ್ಟುಹಬ್ಬದಂದು ಅವರ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿ ಮಾತನಾಡಿದ ಅವರು ರಾಜ್ ಪ್ರತಿಪಾದಿಸಿದ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಶಾಲಾ ಪಠ್ಯದಲ್ಲಿ ಅಧ್ಯಯನವನ್ನು ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ ಪರಿವಾರದಿಂದ 'ಡಾ.ರಾಜಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿ'

ಸಮಾಜಕ್ಕೆ ಉತ್ತಮವಾದದನ್ನು ಮಾಡಬೇಕೆಂಬ ಡಾ.ರಾಜ್ ಆಶಯದಂತೆ ಅವರ ಕುಟುಂಬ ಈಗ "ಡಾ.ರಾಜಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿ" ಮೂಲಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಐಎಎಸ್/ಐಪಿಎಸ್‌ ಸೇರಿದಂತೆ ವಿವಿಧ ನಾಗರಿಕ ಸೇವೆಗಳ ಪರೀಕ್ಷೆ ಎದುರಿಸಲು ಅಗತ್ಯವಿರುವ ತರಬೇತಿಯನ್ನು ನೀಡುತ್ತಿದೆ.

ಕಡಿಮೆ ಖರ್ಚಿನಲ್ಲಿ ತರಬೇತಿ

ಪ್ರತಿಭಾವಂತ ಬಡ ಮಕ್ಕಳಿಗೆ ಸಹಕಾರಿಯಾಗಲೆಂದು ಸ್ಥಾಪಿಸಿರುವ ಈ ಶಿಕ್ಷಣ ಕೇಂದ್ರದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯಾರ್ಥಿಯು ತರಬೇತಿ ಪಡೆಯಬಹುದಾಗಿದೆ. ದೇಶದ ಇತರೆ ಅಕಾಡೆಮಿಗಿಂತ ಶೇ.50 ರಷ್ಟು ಶುಲ್ಕ ಕಡಿಮೆ ಇರಲಿದೆ.

ನುರಿತ ತರಬೇತುದಾರರಿಂದ ಬೋಧನೆ

ಡಾ.ರಾಜ್ ಕುಮಾರ್ ಕುಟುಂಬದವರು ತೆರೆದಿರುವ "ಡಾ.ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್" ಸಂಸ್ಥೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು 150 ಕ್ಕೂ ಹೆಚ್ಚು ಯುಪಿಎಸ್‌ಸಿ ಯಲ್ಲಿ ತೇರ್ಗಡೆ ಹೊಂದಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಅತಿಥಿ ಉಪನ್ಯಾಸಕರಾಗಿ ಬಂದು ಮಾರ್ಗದರ್ಶನ ನೀಡಲಿದ್ದಾರೆ.

ಕನ್ನಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದಿನದ 24 ಗಂಟೆಯೂ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಸೌಲಭ್ಯ ನೀಡಿರುವುದು ವಿಶೇಷ. ಈ ಅಕಾಡೆಮಿಯು ಒಂದು ಬಾರಿಗೆ 100 ರಿಂದ 250 ಅಭ್ಯರ್ಥಿಗಳಿಗೆ ತರಬೇತಿ ನೀಡುವ ವ್ಯವಸ್ಥೆ ಹೊಂದಿದೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ಬಡಾವಣೆಗಳಲ್ಲೂ ಶಾಖೆಯನ್ನು ವಿಸ್ತರಿಸುವ ಯೋಜನೆಯನ್ನು ಅಕಾಡೆಮಿ ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

  • ದೂರವಾಣಿ ಸಂಖ್ಯೆ: 9108448444, 9108449444
  • ಇ ಮೇಲ್ ವಿಳಾಸ: contact.dracs@gmail.com
  • ವೆಬ್‌ ಸೈಟ್ www.dracs.in

English summary
A lesson to depicts the late actor’s life, his struggle, his contribution to the language and Kannada film industry.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia