ಡಿಆರ್‌ಡಿಓ ವಿದ್ಯಾರ್ಥಿವೇತನ 2019 : ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನ

ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಓ) ವಿದ್ಯಾರ್ಥಿವೇತನಕ್ಕೆ ಆಸಕ್ತ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ವಿದ್ಯಾರ್ಥಿನಿಯರು ಸೆಪ್ಟೆಂಬರ್ 10, 2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.ಈ ಯೋಜನೆಯನ್ನು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕವಾಗಿ 2019 ರಲ್ಲಿ ಪ್ರಾರಂಭಿಸಿಸಲಾಗಿದೆ.

ವಿದ್ಯಾರ್ಥಿವೇತನ 2019 : ಆಸಕ್ತ ವಿದ್ಯಾರ್ಥಿನಿಯರು ಅರ್ಜಿ ಹಾಕಿ

ಏರೋನಾಟಿಕ್ಸ್ ರಿಸರ್ಚ್ & ಡೆವಲಪ್ಮೆಂಟ್ ಬೋರ್ಡ್‌ನ ಅಡಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ / ಏರೋನಾಟಿಕಲ್ ಎಂಜಿನಿಯರಿಂಗ್ / ಸ್ಪೇಸ್ ಎಂಜಿನಿಯರಿಂಗ್ / ರಾಕೆಟ್ರಿ / ಏವಿಯಾನಿಕ್ಸ್ / ಏರ್‌ಕ್ರಾಫ್ಟ್ ಎಂಜಿನಿಯರಿಂಗ್‌ನಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಹಂತದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಈ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಆಕಾಂಕ್ಷಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಆರ್‌ಎಸಿಯ ಅಧಿಕೃತ ವೆಬ್‌ಸೈಟ್‌ಗೆ (rac.gov.in.) ಭೇಟಿ ನೀಡಬಹುದು. ಒಟ್ಟು 10 ಪದವಿಪೂರ್ವ ಮತ್ತು 20 ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ನೀಡಲಾತ್ತಿದ್ದು, ಒಬ್ಬ ವಿದ್ಯಾರ್ಥಿನಿಯು ವರ್ಷಕ್ಕೆ 1.86 ಲಕ್ಷ ರೂ.ಗಳವರೆಗೆ ವಿದ್ಯಾರ್ಥಿವೇತನವನ್ನು ಪಡೆಯಬಹುದು.

ಡಿಆರ್‌ಡಿಒ ಬಾಲಕಿಯರ ವಿದ್ಯಾರ್ಥಿವೇತನ 2019ರ ಬಗ್ಗೆ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ:

ಮೆರಿಟ್ ಆಧಾರದ ಮೇಲೆಸ್ನಾತಕೋತ್ತರ ಪದವಿ ಪದವಿ
ವಿದ್ಯಾರ್ಥಿವೇತನವರ್ಷಕ್ಕೆ 1,86,000 /ರೂ - ಅಂದರೆ ತಿಂಗಳಿಗೆ 15,500/ರೂ -ವಿದ್ಯಾರ್ಥಿವೇತನ
ವರ್ಷಕ್ಕೆ 1,20,000 /ರೂ ಅಥವಾ ವಾರ್ಷಿಕ ಶುಲ್ಕ
ಯಾವುದು ಕಡಿಮೆ ಇರುತ್ತದೆ ಅಷ್ಟು ವಿದ್ಯಾರ್ಥಿವೇತನವನ್ನು ನೀಡಲಾಗುವುದು
ಸಮಯ 2 ವರ್ಷಗಳ ಪದವಿ ಕೋರ್ಸ್ (ಎಂಇ / ಎಂ ಟೆಕ್ / ಎಂಎಸ್ಸಿ ಎಂಜಿನಿಯರಿಂಗ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು)4 ವರ್ಷಗಳ ಪದವಿ ಕೋರ್ಸ್ (ಬಿ.ಇ / ಬಿ ಟೆಕ್ / ಬಿ. ಎಸ್‌ಸಿ ಎಂಜಿನಿಯರಿಂಗ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು)

ಅರ್ಹತೆ ಏನಿರಬೇಕು:

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ:- ವಿದ್ಯಾರ್ಥಿನಿಯು ಗೇಟ್ ಪರೀಕ್ಷೆಯಲ್ಲಿ ಮತ್ತು ಬಿಟೆಕ್ / ಬಿಇ ಯಲ್ಲಿ ಕನಿಷ್ಠ 60% ರಷ್ಟು ಅಂಕಗಳಿಸಿದ ಅಥವಾ ತತ್ಸಮಾನ ವಿದ್ಯಾರ್ಹತೆಯುಳ್ಳ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿಯನ್ನು ಪಡೆದಿರಬೇಕು.

ಪದವಿ ವಿದ್ಯಾರ್ಥಿಗಳಿಗೆ:- ಶೈಕ್ಷಣಿಕ ವರ್ಷದ ಬಿಟೆಕ್ / ಬಿಇ ನಲ್ಲಿ ಪ್ರವೇಶಾತಿಯನ್ನು ಪಡೆದಿರಬೇಕು ಅಥವಾ ನೇ ವರ್ಷದಲ್ಲಿ ಪ್ರವೇಶ ಪಡೆಯಬೇಕು ಅಥವಾ ಅದಕ್ಕೆ ಸಮನಾದ ಅರ್ಹತೆ ಹೊಂದಿರುವುದರ ಜೊತೆಗೆ ಜೆಜೆಇ ಪ್ರಮುಖ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ :

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ: ಅಭ್ಯರ್ಥಿಯನ್ನು ಗೇಟ್ ಪರೀಕ್ಷೆಯ ಅಂಕಗಳು ಮೇಲೆ ಮತ್ತು ಮೆರಿಟ್ ಆಧಾರದ ಆಯ್ಕೆ ಮಾಡಲಾಗುವು.

ಪದವಿ ವಿದ್ಯಾರ್ಥಿಗಳಿಗೆ: ಅಭ್ಯರ್ಥಿಯನ್ನು ಜೆಇಇ ಪ್ರಮುಖ ಪರೀಕ್ಷೆಯ ಅಂಕಗಳು ಮತ್ತು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಗಮನಿಸಲೇಬೇಕಾದ ಅಂಶ:

ವಿದ್ಯಾರ್ಥಿವೇತನ ಪಡೆಯುವ ಅವಧಿಯಲ್ಲಿ ಸ್ನಾತಕೋತ್ತರ ಮತ್ತು ಪದವಿಯ ಎಲ್ಲಾ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯು ಉತ್ತೀರ್ಣರಾಗಬೇಕು ಮತ್ತು ಸರಾಸರಿ 7.00 ಅಥವಾ ಶೇಕಡಾ 70 ರಷ್ಟು ಅಂಕಗಳನ್ನು ಪಡೆದುಕೊಳ್ಳಬೇಕಿರುತ್ತದೆ. ಶೈಕ್ಷಣಿಕ ಪರೀಕ್ಷೆಗಳಲ್ಲಿ ಒಂದು ವೇಳೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆ ವರ್ಷದ ನಿರ್ದಿಷ್ಟ ವಿದ್ಯಾರ್ಥಿವೇತನವು ಸಿಗುವುದಿಲ್ಲ.

ವಿದ್ಯಾರ್ಥಿ ವೇತನದ ಬಗೆಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ

ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
DRDO 2019 invited applications from girls to get scholarships.read complete details here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X