ಬದಲಾದ ಎನ್ಎಂಎಂಎಸ್ ಫಲಾನುಭವಿಗಳ ವಿದ್ಯಾರ್ಥಿವೇತನ ಜಮಾ ಪ್ರಕ್ರಿಯೆ

Posted By:

DSERT ಪ್ರತಿ ವರ್ಷ ಸರ್ಕಾರಿ ಹಾಗೂ ಅನದಾನಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆಯಾದವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (MHRD) ನವದೆಹಲಿ ವತಿಯಿಂದ ವರ್ಷಕ್ಕೆ ರೂ.6000/- ದಂತೆ 4 ವರ್ಷಗಳು ವಿದ್ಯಾರ್ಥಿವೇತನ ನೀಡುತ್ತಿದ್ದಾರೆ.

ಇದುವರೆಗೂ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಹಾಗೂ ಇತರೆ ವಿವರಗಳನ್ನು ಶಾಲೆಯ ಮುಖಾಂತರ, ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಸಂಗ್ರಹಿಸಿ ಕ್ರೋಡೀಕರಿಸಿ ಡಯಟ್ ಗೆ ನೀಡುತ್ತಿದ್ದರು. ಡಯಟ್ ನವರು ಪಡೆದು ಪರಿಶೀಲಿಸಿ ಡಿಎಸ್ಇಆರ್ ಟಿ ಗೆ ನೀಡುತ್ತಿದ್ದರು. ನಂತರ ಡಿ.ಎಸ್.ಇ.ಆರ್.ಟಿ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿತ್ತು. SBI, New Delhi ಯಿಂದ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿವೇತನ ಹಣ ಜಮಾ ಆಗುತ್ತಿತ್ತು.

ಬದಲಾದ ವಿದ್ಯಾರ್ಥಿವೇತನ ಜಮಾ ಪ್ರಕ್ರಿಯೆ

ಎಂಎಚ್ಆರ್ ಡಿ ಪತ್ರ ದಿನಾಂಕ 29-06-2017 ಹಾಗೂ 07-07-2017 ರ ಪ್ರಕಾರ NMMS ಫಲಾನುಭವಿಗಳ NSP 2.0 ವೆಬ್ಸೈಟ್ ನಲ್ಲಿ ತಮ್ಮ ಮಾಹಿತಿಯನ್ನು ಆನ್-ಲೈನ್ ಮೂಲಕ ವಿದ್ಯಾರ್ಥಿಗಳೇ ಸ್ವತಃ ನೋಂದಣೆ ಮಾಡಿಕೊಂಡು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿರುತ್ತಾರೆ. ಹಾಗಾಗಿ NMMS ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳು 2017-18 ನೇ ಸಾಲಿನ ವಿದ್ಯಾರ್ಥಿವೇತನ ಪಡೆಯಲು ವೆಬ್ಸೈಟ್ ನಲ್ಲಿ ತಮ್ಮ ವಿವರಗಳನ್ನು ದಾಖಲಿಸಲು ತಿಳಿಸಲಾಗಿದೆ.

ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ 'ಬಸವಜ್ಯೋತಿ' ವಿದ್ಯಾರ್ಥಿ ವೇತನ

ಅರ್ಹತೆ ನಿಬಂಧನೆಗಳು

 • NMMS ಫಲಾನುಭವಿಗಳು ತಮ್ಮ ವಿದ್ಯಾಭ್ಯಾಸವನ್ನು ಒಂಬತ್ತು, ಹತ್ತು, ಹನ್ನೊಂದು ಮತ್ತು ಹನ್ನೆರಡನೇ ತರಗತಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಮಾತ್ರ ಮುಂದುವರಿಸುತ್ತಿರಬೇಕು.
 • ಒಂಬತ್ತು, ಹತ್ತು, ಹನ್ನೊಂದು ಮತ್ತು ಹನ್ನೆರಡನೇ ತರಗತಿಗಳಲ್ಲಿ ಸಾಮಾನ್ಯ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳು ಕನಿಷ್ಠ ಶೇ.55 ರಷ್ಟು ಅಂಕಗಳನ್ನು ಗಳಿಸಿರಬೇಕು.ಪ.ಜಾ/ಪ.ಪಂ ವಿದ್ಯಾರ್ಥಿಗಳು ಕನಿಷ್ಠ ಶೇ.50 ರಷ್ಟು ಅಂಕಗಳು ಗಳಿಸಿರಬೇಕು.
 • ಹತ್ತನೇ ತರಗತಿ ಸಾಮಾನ್ಯ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳು ಶೇ.60ರಷ್ಟು ಹಾಗೂ ಪ.ಜಾ/ಪ.ಪಂ ವಿದ್ಯಾರ್ಥಿಗಳು ಶೇ.55 ರಷ್ಟು ಅಂಕಗಳನ್ನು ಗಳಿಸಿರಬೇಕು.
 • NMMS ಫಲಾನುಭವಿಗಳು ತಮ್ಮ ಶಿಕ್ಷಣವನ್ನು ಕೇಂದ್ರಿಯ ಅಥವಾ ರಾಜ್ಯ ಸರ್ಕಾರದ ವಸತಿಯುತ ಶಾಲೆಗಳಲ್ಲಿ ಮುಂದುವರೆಸಿದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗುವುದಿಲ್ಲ.
 • ಹನ್ನೊಂದು ಮತ್ತು ಹನ್ನೆರಡನೇ ತರಗತಿಗಳನ್ನು ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಶಿಕ್ಷಣದಲ್ಲಿ ಮಾತ್ರ ಮುಂದುವರೆಸಿರಬೇಕು. ಐಟಿಐ ಡಿಪ್ಲೊಮಾ ಹಾಗೂ ಇತರೆ ತಾಂತ್ರಿಕ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮುಂದುವರೆಸಿರುವವರು ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುವುದಿಲ್ಲ.

ವೆಬ್ಸೈಟ್ ನಲ್ಲಿ ವಿವರಗಳನ್ನು ಅಪ್ಲೋಡ್ ಮಾಡಲು ಸೂಚನೆ

 • ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಖಾತೆ ತೆರೆದು ಆಧಾರ್ ಸಂಖ್ಯೆ ಲಿಂಕ್ ಮಾಡಿಸಬೇಕು.
 • ವಿವರಗಳನ್ನು ವೆಬ್ಸೈಟ್ ನಲ್ಲಿ ನಮೂದಿಸಿ, ಅದರ ಒಂದು ಪ್ರತಿಯನ್ನು ಪ್ರಿಂಟ್ ತೆಗೆದು, ಓದುತ್ತಿರುವ ಸಂಸ್ಥೆಗೆ ನೀಡಬೇಕು.
 • ಸಂಸ್ಥೆಯ ಮುಖ್ಯಸ್ಥರು ವೆಬ್ಸೈಟ್ ಗೆ ಲಾಗಿನ್ ಆಗಿ ವಿವರಗಳನ್ನು ಪರಿಶೀಲಿಸಿ ಡಯಟ್ ಗೆ ಕಳುಹಿಸಬೇಕು. ಜಿಲ್ಲಾ ಡಯಟ್ ನಲ್ಲಿ ಮತ್ತೊಮ್ಮೆ ಪರಿಶೀಲಿಸಿ ರಾಜ್ಯ ಹಂತಕ್ಕೆ (ಡಿಎಸ್ಇಆರ್ ಟಿ) ಕಳುಹಿಸಬೇಕು.

ಪ್ರಮುಖ ದಿನಾಂಕಗಳು

 • ವಿವರಗಳನ್ನು ವೆಬ್ಸೈಟ್ ಗೆ ಅಪ್ಲೋಡ್ ಮಾಡಲು ಕೊನೆಯ ದಿನಾಂಕ: 30-09-2017
 • ಸಂಸ್ಥೆಯವರು ವಿದ್ಯಾರ್ಥಿಗಳ ವಿವರ ಪರಿಶೀಲಿಸಿ ಡಯಟ್ ಗೆ ಕಳುಹಿಸಲು ಕೊನೆಯ ದಿನಾಂಕ: 10-10-2017
 • ಡಯಟ್ ನಲ್ಲಿ ಪರಿಶೀಲಿಸಿ ರಾಜ್ಯ ಹಂತ (ಡಿಎಸ್ಇಆರ್ ಟಿ)ಗೆ ಕಳುಹಿಸಲು ಕೊನೆಯ ದಿನಾಂಕ: 15-10-2017

ಹೆಚ್ಚಿನ ಮಾಹಿತಿಗಾಗಿ dsert.kar.nic.in ಗಮನಿಸಿ

English summary
National Means Cum Merit Scholarship NMMS procedure has been changed. Now students to update their details to DSERT website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia