ಭವಿಷ್ಯ ರೂಪಿಸುವ ಇ- ಬಿಸಿನೆಸ್ ಎನ್ನೋ ಟ್ರೆಂಡಿ ಶಿಕ್ಷಣ

ಇ ಬ್ಯುಸಿನೆಸ್‌ ಕೋರ್ಸು ಹತ್ತು ಹಲವು ಕ್ಷೇತ್ರಗಳನ್ನು ಒಳಗೊಂಡಿದೆ. ಹಣಕಾಸು, ಮಾರುಕಟ್ಟೆ, ಗ್ರಾಹಕ ಸೇವೆ, ವ್ಯವಹಾರ ಹೀಗೆ ಅನೇಕ ವಿಚಾರಗಳು ಇ-ಬಿಸಿನೆಸ್ ನಲ್ಲಿದೆ.

ವೆಬ್ ಟೆಕ್ನಾಲಜಿ ಬೆಳದಂತೆ ನಿತ್ಯದ ವ್ಯವಹಾರವೆಲ್ಲವೂ ತನ್ನೆಡೆಗೆ ಸೆಳೆಯುತ್ತ ವಿಶ್ವವ್ಯಾಪಿ ಆವರಿಸಿದೆ. ಇಂದು ಪ್ರತಿಯೊಂದು ವ್ಯವಹಾರವು ಇಂಟರ್ನೆಟ್ ಮೂಲಕವೇ ನಡೆಯುತ್ತಿದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ.

ಇನ್ನು ಇದರ ನಡುವೆ ಇ-ಬಿಸಿನೆಸ್ ಕೂಡ ಸಾಕಷ್ಟು ಮಹತ್ವ ಪಡೆಯುತ್ತಿದ್ದು, ಭವಿಷ್ಯ ರೂಪಿಸುವ ಶಿಕ್ಷಣವಾಗಿ ಗುರುತಿಸಿಕೊಂಡಿದೆ.

2018 ಇ-ಲರ್ನಿಂಗ್ ಯುಗ: ಇಂಟರ್ನೆಟ್, ಸ್ಮಾರ್ಟ್ ಫೋನ್ ನಿಂದ ಬದಲಾಗುತ್ತಿದೆ ಶಿಕ್ಷಣ2018 ಇ-ಲರ್ನಿಂಗ್ ಯುಗ: ಇಂಟರ್ನೆಟ್, ಸ್ಮಾರ್ಟ್ ಫೋನ್ ನಿಂದ ಬದಲಾಗುತ್ತಿದೆ ಶಿಕ್ಷಣ

ಇ- ಬಿಸಿನೆಸ್ ಎನ್ನೋ ಟ್ರೆಂಡಿ ಶಿಕ್ಷಣ

ಇ ಬ್ಯುಸಿನೆಸ್‌ ಅಥವಾ ಇಲೆಕ್ಟ್ರಾನಿಕ್‌ ಬ್ಯುಸಿನೆಸ್‌ ಎಂದು ಕರೆಯಲ್ಪಡುವ ಈ ಕೋರ್ಸು ಹತ್ತು ಹಲವು ಕ್ಷೇತ್ರಗಳನ್ನು ಒಳಗೊಂಡಿದೆ. ಹಣಕಾಸು, ಮಾರುಕಟ್ಟೆ, ಗ್ರಾಹಕ ಸೇವೆ, ವ್ಯವಹಾರ ಹೀಗೆ ಅನೇಕ ವಿಚಾರಗಳು ಇ-ಬಿಸಿನೆಸ್ ನಲ್ಲಿದೆ.

ಇಲೆಕ್ಟ್ರಾನಿಕ್‌ ರಿಟೇಲಿಂಗ್‌, ಆನ್‌ಲೈನ್‌ ಕಮ್ಯುನಿಕೇಶನ್‌, ಆನ್‌ಲೈನ್‌ ಟ್ರೈನಿಂಗ್‌, ಪರ್ಸನಲ್‌ ಡಿಜಿಟಲ್‌ ಅಸಿಸ್ಟೆನ್ಸ್‌, ಇಲೆಕ್ಟ್ರಾನಿಕ್‌ ಡೇಟಾ ಇಂಟರ್‌ಚೇಂಜ್‌, ಫೈಲ್‌ ಟ್ರಾನ್ಸಪರ್‌ ಮೊದಲಾದವು ಇದರಲ್ಲಿ ಸೇರಿವೆ.

ಗ್ರೂಪ್ ಸ್ಟಡಿಗೆ ಸಹಕಾರಿಗುವ ಸೋಷಿಯಲ್ ಮೀಡಿಯಾಗ್ರೂಪ್ ಸ್ಟಡಿಗೆ ಸಹಕಾರಿಗುವ ಸೋಷಿಯಲ್ ಮೀಡಿಯಾ

ಕೋರ್ಸ್ ಗೆ ಬೇಕಾದ ಅರ್ಹತೆ

ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ಸಮರ್ಥರಿದ್ದರೆ ಕಲಿಕೆಯ ಬಳಿಕ ಇ-ಬ್ಯುಸಿನೆಸ್‌ ಮಾಡಲು ಸುಲಭವಾಗುತ್ತದೆ. ಇದರ ಜೊತೆಗೆ ವೆಬ್‌ಸೈಟ್‌ ವಿನ್ಯಾಸಗೊಳಿಸುವಲ್ಲಿ ಕ್ರಿಯೇಟಿವಿಟಿ ಇರಬೇಕು. ಮಾರುಕಟ್ಟೆ ಸಂಶೋಧನೆ, ಆನ್‌ಲೈನ್‌ ಜಾಹೀರಾತು, ಬ್ರಾಂಡಿಂಗ್‌, ಮೀಡಿಯಾ ಪ್ಲಾನಿಂಗ್‌ ಇತ್ಯಾದಿ ಕೂಡ ಇರಬೇಕಾಗುತ್ತದೆ.

ಕೋರ್ಸ್‌ ವಿವರ

ಮೂರು ವರ್ಷಗಳ ಅಂಡರ್‌ ಗ್ರಾಜುವೇಟ್‌ ಕೋರ್ಸ್‌: ಬ್ಯಾಚುಲರ್‌ ಡಿಗ್ರಿ ಪದವಿ ಪ್ರವೇಶಕ್ಕೆ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರಬೇಕು.

ಪದವಿ ಕೋರ್ಸ್‌ನಲ್ಲಿ ಆನ್‌ಲೈನ್‌ ಬ್ಯುಸಿನೆಸ್‌ ಸ್ಟ್ರಾಟರ್ಜಿ, ಮಾರ್ಕೆಟಿಂಗ್‌, ಇನ್‌ಫಾರ್ಮೆಶನ್‌ ಟೆಕ್ನಾಲಜಿ, ಇ-ಕಾಮರ್ಸ್‌ ಮ್ಯಾನೇಜ್‌ಮೆಂಟ್‌ ವಿಷಯಗಳು ಇರುತ್ತವೆ.

ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಯಾವುದೇ ವಿಭಾಗದಲ್ಲಿ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಈ ವಿಭಾಗದಲ್ಲಿ ಇ-ಬ್ಯುಸಿನೆಸ್‌ ಸೆಕ್ಯುರಿಟಿ, ಪರ್ಚೇಸ್‌, ಕಸ್ಟಮರ್‌ ಕೇರ್‌, ಲಾಜಿಸ್ಟಿಕ್ಸ್‌, ಸೇಲ್‌, ಆಫ್ಟರ್‌ ಸೇಲ್‌ ಸರ್ವಿಸ್‌ ಮೊದಲಾದ ಸ್ಪೆಶಲೈಸೇಶನ್‌ ವಿಭಾಗಗಳಿವೆ.

ಉಜ್ವಲ ಭವಿಷ್ಯ

ಇ-ಬಿಸಿನೆಸ್ ಕೋರ್ಸ್ ಪೂರೈಸಿದವರಿಗೆ ಉತ್ತಮ ಅವಕಾಶಗಳು ಇವೆ. ಇ-ಕಾಮರ್ಸ್‌ ಕಲಿತು ಪ್ರಾಡಕ್ಟ್ ಮ್ಯಾನೇಜರ್‌ ಆದರೆ ವಾರ್ಷಿಕ ಸುಮಾರು 11 ಲಕ್ಷ ರೂ. ವೇತನ ಸಿಗುತ್ತದೆ.

ಸ್ವಂತ ಉದ್ಯೋಗ ಕೂಡ ಪ್ರಾರಂಭಿಸಬಹುದಾದ ಅವಕಾಶಗಳು ಕೂಡ ಇದೆ. ಯಾವುದೇ ಕಚೇರಿಗಳನ್ನು ಮಾಡದೆ ಕೇವಲ ಇಂಟರ್ನೆಟ್ ಮತ್ತು ಸಿಸ್ಟಮ್ ಆನ್ ಬಂಡವಾಳವಾಗಿಸಿಕೊಂಡು ಮನೆಯಲ್ಲಿಯೇ ಕುಳಿತು ಕೂಡ ವ್ಯವಹರಿಸಬಹುದಾಗಿದೆ.

For Quick Alerts
ALLOW NOTIFICATIONS  
For Daily Alerts

English summary
E-business courses are designed for students seeking to gain a deeper understanding and expertise in the field of e-business, whether for career change or enhancement. E-business courses can help students advance their careers to the next level.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X