2018 ಇ-ಲರ್ನಿಂಗ್ ಯುಗ: ಇಂಟರ್ನೆಟ್, ಸ್ಮಾರ್ಟ್ ಫೋನ್ ನಿಂದ ಬದಲಾಗುತ್ತಿದೆ ಶಿಕ್ಷಣ

Posted By:

ಇದು ಡಿಜಿಟಲ್ ಯುಗ, ತಂತ್ರಜ್ಞಾನ ದಿನೇ ದಿನೇ ಹೊಸ ರೂಪ ಪಡೆಯುತ್ತ ಜಗತ್ತನ್ನು ಆವರಿಸುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗು ಎಂಬ ನಾಣ್ಣುಡಿಯಂತೆ ಡಿಜಿಟಲ್ ಯುಗಕ್ಕೆ ನಾವೆಲ್ಲಾ ಅಪ್ಡೇಟ್ ಆಗಬೇಕಿದೆ.

2017 ರ 4G ಯಲ್ಲಿದ್ದ ನಾವು 2018 ಕ್ಕೆ ಕಾಲಿಡುತ್ತಿದ್ದೇವೆ. ನಾವು ಹೊಸ ವರ್ಷಕ್ಕೆ ಹೇಗೆ ಸಂಭ್ರಮದಿಂದ ಕಾಲಿಡುತ್ತೇವೋ ನಮ್ಮನ್ನು ನಾವು ಅಪ್ಡೇಟ್ ಮಾಡಿಕೊಳ್ಳುವುದು ಅನಿವಾರ್ಯ.

2018 ಇ-ಲರ್ನಿಂಗ್ ಯುಗ

ಇಂದು ಇಂಟರ್ನೆಟ್,ವೆಬ್‌ಸೈಟ್‌, ಸ್ಮಾರ್ಟ್ ಫೋನ್ ಮತ್ತು ಆ್ಯಪ್‌ಗಳ ಬಳಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಪ್ರತಿ ಶಾಲಾ-ಕಾಲೇಜುಗಳು ಆ್ಯಪ್‌ ಮೂಲಕ ವಿದ್ಯಾರ್ಥಿಗಳೊಡನೆ ಸಂವಹನ ನಡೆಸುತ್ತಿವೆ, ಇ-ಲರ್ನಿಂಗ್ ಗೆ ಹೆಚ್ಚು ಒತ್ತು ನೀಡಲು ಪ್ರಯತ್ನಿಸುತ್ತಿವೆ. ಹೀಗಿರುವಾಗ ನಾವು ಇ-ಲರ್ನಿಂಗ್ ಬಗ್ಗೆ ನಮಗೆ ಮಾಹಿತಿ ಇರಲೇಬೇಕಾಗುತ್ತದೆ.

ಇ-ಲರ್ನಿಂಗ್‌ ಇಂದಿನ ಮತ್ತು ಮುಂದಿನ ಕಲಿಕೆಯ ದೊಡ್ಡ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಯಾವುದೇ ಸಮಯ /ಯಾವುದೇ ಸ್ಥಳದಲ್ಲಿ ಬೇಕಾದರೂ ಕೂತು ಕಲಿಯುವಂತಹ ಅವಕಾಶವನ್ನು ಇ-ಲರ್ನಿಂಗ್ ಕಲ್ಪಿಸಿದೆ.

ಇದರಲ್ಲಿ ಶಿಕ್ಷಣ ವೆಚ್ಚ, ಆರಾಮ, ಕಲಿಕೆ ಪ್ರಗತಿಯ ವ್ಯವಸ್ಥಿತ ವಿಧಾನ, ಕೋರ್ಸ್‌ ವಿಷಯದ ಗುಣಮಟ್ಟಕ್ಕೆ ಮಾನದಂಡ, ಆನ್‌ಲೈನ್‌ನಲ್ಲಿ ಬೋಧಕ ವರ್ಗದ ಸೀಮಾತೀತ ಸಂಪರ್ಕ ಮೊದಲಾದ ಲಾಭಗಳಿವೆ.

ಹಲವು ಕಂಪನಿಗಳು ಆನ್‌ಲೈನ್‌ ಪ್ರೊಫೆಶನಲ್‌ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಆಫರ್‌ ಮಾಡುತ್ತಿವೆ. ಮುಖ್ಯವಾಗಿ ತಂತ್ರಜ್ಞಾನ, ಹಣಕಾಸು, ಎಂಜಿನಿಯರಿಂಗ್‌, ಬ್ಯಾಂಕಿಂಗ್‌, ಮ್ಯಾನೇಜ್ಮೆಂಟ್‌ ಮೊದಲಾದ ಕ್ಷೇತ್ರಗಳತ್ತ ಗಮನ ಹರಿಸಿವೆ.

ದೂರ ಶಿಕ್ಷಣದ ಮೂಲಕ ಪದವಿ ಹೊಂದುವುದಕ್ಕಿಂತ ಇ-ಲರ್ನಿಂಗ್ ಮೂಲಕ ತಂತ್ರಜ್ಞಾನದ ಜೊತೆಗೆ ಸಾಗಿದರೆ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು.

ಆನ್‌ಲೈನ್‌ ಕೋರ್ಸ್‌ಗಳು ತನ್ನದೇ ಆದ ಇತಿ ಮಿತಿಗಳನ್ನು ಹೊಂದಿದೆ. ಏಕೆಂದರೆ ಕೆಲವು ಕಂಪನಿಗಳು ಇ-ಲರ್ನಿಂಗ್ ಕೋರ್ಸುಗಳಿಗೆ ಮಣೆ ಹಾಕುವುದಿಲ್ಲ, ಇನ್ನು ಕೆಲವು ನಕಲಿ ವೆಬ್ಸೈಟ್ ಗಳು ಇ-ಲರ್ನಿಂಗ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ವಂಚಿಸುವ ಸಾಧ್ಯತೆಯೂ ಇದೆ.

ಅದೇನೇ ಇದ್ದರೂ ಇ-ಲರ್ನಿಂಗ್ ನಲ್ಲಿ ವೆಚ್ಚ, ಜ್ಞಾನ ವೃದ್ಧಿ ಸೇರಿದಂತೆ ಹಲವು ವಿಷಯಗಳಲ್ಲಿ ಲಾಭದಾಯಕವಾಗಿವೆ. ಭವಿಷ್ಯದಲ್ಲಿ ಇನ್ನಷ್ಟು ವಿದ್ಯಾರ್ಥಿಗಳನ್ನು ಇದು ಸೆಳೆಯುವಲ್ಲಿ ಯಶಸ್ವಿಯಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ. ಇ-ಲರ್ನಿಂಗ್ ಮುಂದೊಂದು ದಿನ ಪ್ರಮುಖ ಶಿಕ್ಷಣ ವೇದಿಕೆಯಾಗುವುದರಲ್ಲಿ ಖಂಡಿತ ಅನುಮಾನವಿಲ್ಲ.

English summary
Companies are investing more in e-learning. Schools and universities are diversifying their resources through online courses and activities.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia