ಸಭ್ಯ ಉಡುಗೆ ತೊಟ್ಟು ಬರುವಂತೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ಪಾಠ

ಪಾಠ ಮಾಡುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಡ್ರೆಸ್ ಕೋಡ್ ಪಾಠ ಮಾಡುತ್ತಿದೆ. ಶಾಲಾ ಶಿಕ್ಷಕರು ಶಾಲೆಗೆ ಯಾವ ರೀತಿಯ ಬಟ್ಟೆ ಹಾಕಿಕೊಂಡು ಹೋಗಬೇಕು ಎಂಬುದನ್ನು ಸುತ್ತೋಲೆ ಮೂಲಕ ತಿಳಿಸಿದೆ.

ಪಾಠ ಮಾಡುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಡ್ರೆಸ್ ಕೋಡ್ ಪಾಠ ಮಾಡುತ್ತಿದೆ. ಶಾಲಾ ಶಿಕ್ಷಕರು ಶಾಲೆಗೆ ಯಾವ ರೀತಿಯ ಬಟ್ಟೆ ಹಾಕಿಕೊಂಡು ಹೋಗಬೇಕು ಎಂಬುದನ್ನು ಸುತ್ತೋಲೆ ಮೂಲಕ ತಿಳಿಸಿದೆ.

ಇತ್ತೀಚೆಗಷ್ಟೇ ಪದವಿ ಕಾಲೇಜುಗಳ ಉಪನ್ಯಾಸಕಿಯರು ಸೀರೆ ಮಾತ್ರ ಉಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆ ವಿವಾದವಾಗಿತ್ತು. ಈಗ ಶಾಲಾ ಶಿಕ್ಷಕರ ಡ್ರೆಸ್ ಕೋಡ್ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ ಗೊಂದಲವನ್ನು ಸೃಷ್ಟಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ಅದೇಶದಲ್ಲಿ 'ಶಾಲಾ ಶಿಕ್ಷಕರು ಸಭ್ಯ ಉಡುಗೆ ಧರಿಸಬೇಕು' ಎಂದು ತಿಳಿಸಲಾಗಿದೆ. ಆದರೆ, ಸಭ್ಯ ಉಡುಗೆ ಯಾವುದು ಎಂಬ ಕುರಿತು ಸುತ್ತೋಲೆ ವ್ಯಾಖ್ಯಾನ ಮಾಡಿಲ್ಲ. ಇದರಿಂದಾಗಿ ಶಿಕ್ಷಕರು ಗೊಂದಲಕ್ಕೊಳಗಾಗಿದ್ದಾರೆ.

ಸಭ್ಯ ಉಡುಗೆ ತೊಟ್ಟು ಶಾಲೆಗೆ ಬರಲು ಶಿಕ್ಷಕರಿಗೆ ಸೂಚನೆ

'ಶಾಲಾ ಶಿಕ್ಷಕರು ಸಭ್ಯ ಉಡುಗೆ ಧರಿಸಬೇಕು. ಆದರೆ, ಇದು ವಸ್ತ್ರ ಸಂಹಿತೆ ಆದೇಶ ಅಲ್ಲ. ಯಾವ ರೀತಿಯ ಉಡುಗೆ ತೊಡಬೇಕು ಎಂಬುದು ಅವರ ವಿವೇಚನಾ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದು' ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕ ಬಿ.ಕೆ. ಬಸವರಾಜ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಯಾವ ರೀತಿ ಇರಬೇಕು ಎಂದು ಶಿಕ್ಷಣ ಇಲಾಖೆ ಪಾಠ ಮಾಡುತ್ತಿದೆ.

ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆ

ಕಾಲೇಜು ಉಪನ್ಯಾಸಕಿಯರು ಇನ್ನು ಮುಂದೆ ಕಡ್ಡಾಯವಾಗಿ ಸೀರೆ ಧರಿಸಿ ಬರಬೇಕು. ಉಪನ್ಯಾಸಕರೂ ಸೇರಿದಂತೆ ಎಲ್ಲರೂ ತರಗತಿಯಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ ಎಂದು ಇತ್ತೀಚಿಗಷ್ಟೇ ಶಿಕ್ಷಣ ಇಲಾಖೆಗೆ ದೂರು ಬಂದಿತ್ತು.

ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರುಗಳು ತರಗತಿಯಲ್ಲಿ ಪಾಠ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾರೆ. ವಾಟ್ಸ್ಯಾಪ್ ಮತ್ತು ಫೇಸ್ ನಲ್ಲಿ ಕಾಲ ಕಳೆಯುತ್ತಾರೆ.ಸರಿಯಾಗಿ ಪಾಠ ಮಾಡುವುದಿಲ್ಲ. ಮಹಿಳಾ ಉಪನ್ಯಾಸಕರಂತೂ ತಮಗೆ ಬೇಕಾದಂತೆ ಮಾಡರ್ನ್ ಡ್ರೆಸ್ ನಲ್ಲಿ ತರಗತಿಗೆ ಬರುತ್ತಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಾದ ಉಪನ್ಯಾಸಕರು ಹೇಗೆ ಮಾರ್ಗದರ್ಶಕರಾಗುತ್ತಾರೆ ದೂರಿನಲ್ಲಿ ಪ್ರಶ್ನಿಸಲಾಗಿತ್ತು.

ಈ ದೂರಿನ ಕುರಿತು ಎಚ್ಚರಗೊಂಡ ಕಾಲೇಜು ಶಿಕ್ಷಣ ಇಲಾಖೆ ಜು.4ರಂದು ಕಾಲೇಜುಗಳಲ್ಲಿ ಉಪನ್ಯಾಸಕರು ತರಗತಿಯಲ್ಲಿ ಮೊಬೈಲ್ ಬಳಸುವುದನ್ನು ತಡೆಗಟ್ಟುವಂತೆ ಹಾಗೂ ಮಹಿಳಾ ಉಪನ್ಯಾಸಕರು ಸೀರೆ ಧರಿಸಿ ಕಾಲೇಜಿಗೆ ಬರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿತ್ತು. ಡ್ರೆಸ್ ಕೋಡ್ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ಮೊಬೈಲ್ ಬಳಕೆಗೆ ಮಾತ್ರ ನಿಷೇಧ ಮಾಡುವಂತೆ ಮರು ಆದೇಶ ನೀಡಲಾಯಿತು.

For Quick Alerts
ALLOW NOTIFICATIONS  
For Daily Alerts

English summary
Karnataka sarvajanika shikshana ilakhe circular about teachers dress code. Teachers should come in descent dress to schools.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X