ಐಒಸಿಎಲ್‌ನಲ್ಲಿ ಅಪ್ರೆಂಟಿಸ್‌ಶಿಪ್‌,ಟ್ರೇಡ್‌ ಮತ್ತು ಟೆಕ್ನಿಷಿಯನ್‌ ವಿಭಾಗದಲ್ಲಿ ಉದ್ಯೋಗ ತರಬೇತಿ

Posted By:

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ (ಐಒಸಿಎಲ್‌) ಟ್ರೇಡ್‌ ಮತ್ತು ಟೆಕ್ನಿಷಿಯನ್‌ ಅಪ್ರೆಂಟಿಸ್‌ಶಿಪ್‌ ನೀಡಲು ಮುಂದಾಗಿದೆ. ಐಒಸಿಎಲ್‌ನ ಪಾಣಿಪತ್‌ ಘಟಕದಲ್ಲಿ ಅಪ್ರೆಂಟಿಸ್‌ಶಿಪ್‌ ನೀಡಲಾಗುತ್ತದೆ. ಒಟ್ಟು 84 ಅಭ್ಯರ್ಥಿಗಳು ಅವಕಾಶ ನೀಡಲಾಗುತ್ತದೆ.

84 ಅಭ್ಯರ್ಥಿಗಳಿಗೆ ಐಒಸಿಎಲ್‌ನಲ್ಲಿ ಅಪ್ರೆಂಟಿಸ್‌ಶಿಪ್‌

ಟ್ರೇಡ್‌ ಮತ್ತು ಟೆಕ್ನಿಷಿಯನ್‌ ವಿಭಾಗದಲ್ಲಿ ಉದ್ಯೋಗ ತರಬೇತಿ

ವಿವರ

ಟ್ರೇಡ್‌: ಕೆಮಿಕಲ್‌ ವಿಭಾಗದಲ್ಲಿ ಟ್ರೇಡ್‌ ಅಪ್ರೆಂಟಿಸ್‌ಶಿಪ್‌ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಬಿಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.
ಮೆಕ್ಯಾನಿಕಲ್‌ ವಿಭಾಗದಲ್ಲಿ ಅವಕಾಶ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಫಿಟ್ಟರ್‌ ವಿಭಾಗದಲ್ಲಿ ಎರಡು ವರ್ಷದ ಐಟಿಐ ಕೋರ್ಸ್‌ ಪೂರ್ಣಗೊಳಿಸಿರಬೇಕು.


ಟೆಕ್ನಿಷಿಯನ್‌: ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌ ಮತ್ತು ಇನ್‌ಸ್ಟ್ರುಮೆಂಟೇಶನ್‌ ವಿಭಾಗದಲ್ಲಿ ಟೆಕ್ನಿಷಿಯನ್‌ ಅಪ್ರೆಂಟಿಸ್‌ಶಿಪ್‌ ಪಡೆಯಬಹುದಾಗಿದೆ. ಆಯಾ ವಿಭಾಗಗಳಿಗೆ ಸಂಬಂಧಪಟ್ಟಂತೆ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿದವರು ಟೆಕ್ನಿಷಿಯನ್‌ ಅಪ್ರೆಂಟಿಸ್‌ಶಿಪ್‌ ಪಡೆಯಲು ಅರ್ಹರಾಗಿರುತ್ತಾರೆ.

ಅಪ್ರೆಂಟಿಸ್ಷಿಪ್ ಅಯ್ಕೆಯನ್ನು ಮೀಸಲಾತಿಗೆ ಅನುಗುಣವಾಗಿ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸು ಇರುವವರೆಗೆ ವೇತನ (ಸ್ಟೈಫಂಡ್) ಕೂಡ ನೀಡಲಾಗುತ್ತದೆ.

ಸೂಚನೆ:

ಅಪ್ರೆಂಟಿಸ್‌ಶಿಪ್‌ ಪಡೆಯಲು ಬಯಸುವ ಅಭ್ಯರ್ಥಿಯು ಕೇವಲ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು. 

ಐಟಿಐ, ಡಿಪ್ಲೊಮಾ, ಬಿಎಸ್ಸಿ ಅಭ್ಯರ್ಥಿಗಳನ್ನು  ಹೊರತು ಪಡಿಸಿ ಇನ್ಯಾವುದೇ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಕೇಳಿರುವ ವ್ಯಾಸಂಗಕ್ಕೆ ತತ್ಸಾಮಾನವಾದ ಶಿಕ್ಷಣ ಹೊಂದಿದ್ದರೂ ತಿರಸ್ಕರಿಸಲಾಗುವುದು.

ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿಲ್ಲ.(ಪೆಟ್ರೋಲಿಯಂ ಕಾಯ್ದೆ 1934 ಪ್ರಕಾರ)

ಅಭ್ಯರ್ಥಿಯು ಈ ಹಿಂದೆ ಎಲ್ಲಿಯೂ ಅಪ್ರೆಂಟಿಸ್‌ಶಿಪ್‌ ಪಡೆದಿರಬಾರದು.

ಅರ್ಜಿ ಸಲ್ಲಿಸುವ ವಿಧಾನ

ಐಓಸಿಎಲ್ ವೆಬ್ಸೈಟ್ನಲ್ಲಿ ತಿಳಿಸಿರುವಂತೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಫೆ.06, 2017 ರಿಂದ ಫೆ.26.2027 ರವರೆಗೂ ಆನ್ಲೈನ್ ಅರ್ಜಿಗೆ ಅವಕಾಶವಿದೆ.

ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಖಾಲಿ ಹುದ್ದೆಗಳು 84
ಅರ್ಜಿ ಸಲ್ಲಸಲು ಫೆ.26 ಕೊನೆಯ ದಿನ
ಮಾರ್ಚ್‌ 19ರಂದು ಲಿಖಿತ ಪರೀಕ್ಷೆ

ವಿವರಗಳಿಗೆ ವೆಬ್‌: www.iocl.com

English summary
Indian Oil Corporation Limited, the largest commercial undertaking in India and a Fortune “Global 500” Company, as a measure of Skill Building Initiative for the Nation, invites applications for engagement as Apprentices

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia