ವೃತ್ತಿಪರ ಕೋರ್ಸ್: ಇಂಜಿನಿಯರಿಂಗ್, ವೈದ್ಯಕೀಯ ಸೀಟುಗಳ ಗೊಂದಲದಲ್ಲಿ ವಿದ್ಯಾರ್ಥಿಗಳು

Posted By:

ಸಿಇಟಿ ಮೊದಲ ಸುತ್ತಿನಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಈಗ ಸೀಟು ಬ್ಲಾಕಿಂಗ್ ನತ್ತ ಗಮನ ಹರಿಸಿದ್ದಾರೆ. ವೈದ್ಯಕೀಯ ಕೌನ್ಸಲಿಂಗ್ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೆ ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ವೈದ್ಯಕೀಯ ಸೀಟುಗಳಿಗೆ ಇನ್ನು ಸೀಟ್ ಮ್ಯಟ್ರಿಕ್ಸ್ ಪ್ರಕಟಿಸದ ಕಾರಣ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ವೈದ್ಯಕೀಯ ಸೀಟಿಗಾಗಿ ಪ್ರತ್ಯೇಕ ಪರೀಕ್ಷೆ ಬರೆದಿದ್ದರು ಸಿಇಟಿಯಲ್ಲಿನ ಸೀಟು ಹಿಂದಿರುಗಿಸುವಿಕೆ ಮಾತ್ರ ಇನ್ನು ಹಾಗೆಯೇ ಮುಂದುವರೆದಿದೆ. ಬಹುತೇಕ ವಿದ್ಯಾರ್ಥಿಗಳು ಸಿಇಟಿ ಮತ್ತು ನೀಟ್ ಎರಡನ್ನು ಬರೆದಿದ್ದರು. ಈಗ ವೈದ್ಯಕೀಯ ಸೀಟು ಸಿಗಬಹುದೆಂಬ ಆಸೆಯಿಂದ ಕಾದು ಕುಳಿತಿದ್ದಾರೆ.

ಇಂಜಿನಿಯರಿಂಗ್, ವೈದ್ಯಕೀಯ ಸೀಟುಗಳ ಗೊಂದಲದಲ್ಲಿ ವಿದ್ಯಾರ್ಥಿಗಳು

ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಗಳು ಮುಗಿದಿದ್ದು ಶುಲ್ಕ ಪಾವತಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಆದರೆ ವೈದ್ಯಕೀಯ ಸೀಟುಗಳ ಹಂಚಿಕೆ ಮತ್ತು ದಾಖಲೆ ಪರಿಶೀಲನೆಗಳು ಜುಲೈ10 ರಿಂದ ಆರಂಭವಾಗಲಿದ್ದು, ಇಂಜಿನಿಯರಿಂಗ್ ಕೋರ್ಸಿಗೆ ಶುಲ್ಕ ಕಟ್ಟಲು ವಿದ್ಯಾರ್ಥಿಗಳು ಮತ್ತು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಇಂಜಿನಿಯರಿಂಗ್ ಕಾಲೇಜುಗಳು ಕೂಡ ಸೀಟ್ ಬ್ಲಾಕಿಂಗ್ ಪರಿಣಾಮ ಎದುರಿಸಿತ್ತಿವೆ. ಬ್ಲಾಕ್ ಮಾಡಿದ ಸೀಟುಗಳನ್ನು ವಿದ್ಯಾರ್ಥಿಗಳು ತೊರೆಯುವುದರಿಂದ ಕಾಲೇಜಿಗೆ ನಷ್ಟವಾಗಲಿದೆ ಎನ್ನುವುದು ಖಾಸಗಿ ಕಾಲೇಜುಗಳ ಆತಂಕ.

ಇನ್ನು ಸೀಟ್ ಬ್ಲಾಕಿಂಗ್ ಮೂಲಕ ಇತರೆ ವಿದ್ಯಾರ್ಥಿಗಳಿಗೂ ಉತ್ತಮ ಕಾಲೇಜುಗಳು ತಪ್ಪಲಿದ್ದು, ಇದಕ್ಕೆ ಸೂಕ್ತ ಪರಿಹಾರ ಹುಡುಕಬೇಕು ಎನ್ನುವುದು ಹಲವು ವಿದ್ಯಾರ್ಥಿ ಮತ್ತು ಪೋಷಕರ ಬೇಡಿಕೆ.

ಸೀಟ್ ಬ್ಲಾಕಿಂಗ್ ನಿಯಮ ಪಾಲಿಸುತ್ತಿರುವದರಿಂದ ಅನೇಕ ವಿದ್ಯಾರ್ಥಿಗಳು ಮೊದಲ ಸುತ್ತಿನಲ್ಲಿ ಉತ್ತಮ ಕಾಲೇಜು ಸಿಗದೇ ಹೋದಲ್ಲಿ ಎರಡನೇ ಸುತ್ತಿನ ಹಂಚಿಕೆಯಲ್ಲಿ ಉತ್ತಮ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಸೀಟ್ ಬ್ಲಾಕಿಂಗ್ ಪದ್ಧತಿಯು ನೀಟ್ ಪರೀಕ್ಷೆಗೂ ಮುನ್ನವೇ ಜಾರಿಗೆ ಬಂದಿತ್ತು. ಇಂಜಿನಿಯರಂಗ್ ಮತ್ತು ಮೆಡಿಕಲ್ ಸೀಟುಗಳಿಗೆ ಒಂದೇ ಸಿಇಟಿ ಇದ್ದಾಗಿನಿಂದಲೂ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಆದರೆ ಈ ಗೊಂದಲವನ್ನು ನಿವಾರಿಸುವಲ್ಲಿ ಪರೀಕ್ಷಾ ಪ್ರಾಧಿಕಾರವು ವಿಫಲವಾಗಿದೆ.

ನೀಟ್-2017 ರ ಕೌನ್ಸಲಿಂಗ್ ಗೆ ಚಾಲನೆ ನೀಡಲಾಗಿದ್ದು, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಏಕರೂಪದ ಕೇಂದ್ರೀಕೃತ ಕೌನ್ಸೆಲಿಂಗ್‌ ನಡೆಯಲಿದೆ. ಜುಲೈ 10ರಿಂದ ದಾಖಲಾತಿ ಪರಿಶೀಲನೆ ಆರಂಭ ಆಗಲಿದ್ದು ಅಭ್ಯರ್ಥಿಗಳಿಗೆ ನೋಂದಾಯಿಸಿಕೊಳ್ಳಲು ಐದು ದಿನಗಳ ಅವಕಾಶ ನೀಡಲಾಗಿದೆ.

ನೀಟ್‌ನಲ್ಲಿ ಮೆರಿಟ್ ಪಡೆದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟು ಪಡೆಯಬೇಕಿದ್ದರೆ ಜುಲೈ 5ರಿಂದ 9ರೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ kea.kar.nic.in ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

English summary
the students who have got a CET seat in the first round, but would prefer to pursue medicine when the NEET counselling comes through are blocking that CET seat.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia