ಕರ್ನಾಟಕವು ದೇಶದ ಅತ್ಯಂತ ಪ್ರಗತಿಪರ ಮತ್ತು ಉತ್ತಮ ಆಡಳಿತದ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದರೂ ಕೂಡ ಇತರೆ ರಾಜ್ಯಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣದಲ್ಲಿ ಹಿಂದುಳಿದಿದೆ.

ಉನ್ನತ ಶಿಕ್ಷಣದ ದಾಖಲಾತಿ ಕುರಿತು ನಡೆಸಿರುವ ಅಖಿಲ ಭಾರತ ಸಮೀಕ್ಷೆ (AISHE) 2019-20 ರ ಪ್ರಕಾರ ಕರ್ನಾಟಕದಲ್ಲಿ ಉನ್ನತ ಶಿಕ್ಷಣವನ್ನು ಶೇಕಡಾ 31.58 ರಷ್ಟು ವಿದ್ಯಾರ್ಥಿಗಳು ಮತ್ತು ಶೇಕಡಾ 32.80 ರಷ್ಟು ವಿದ್ಯಾರ್ಥಿನಿಯರು ಪಡೆದಿದ್ದಾರೆ. ಉನ್ನತ ಶಿಕ್ಷಣ ಪಡೆಯುತ್ತಿರುವ ರಾಜ್ಯಗಳ ಪೈಕಿ ದೇಶದಲ್ಲಿ ಕರ್ನಾಟಕ 13ನೇ ಸ್ಥಾನದಲ್ಲಿದೆ.
ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯು ಸಿಕ್ಕಿಂ ರಾಜ್ಯದಲ್ಲಿ ಹೆಚ್ಚಾಗಿದ್ದು, ಶೇಕಡಾ 83.60ರಷ್ಟು ಪುರುಷರು ಮತ್ತು ಶೇಕಡಾ 67.60 ರಷ್ಟು ಮಹಿಳಾ ವಿದ್ಯಾರ್ಥಿಗಳಿದ್ದಾರೆ.
ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕವು ಕೊನೆಯ ಸ್ಥಾನದಲ್ಲಿದೆ. ತಮಿಳುನಾಡು ಮೂರನೇ ಸ್ಥಾನದಲ್ಲಿದ್ದು, ಶೇಕಡಾ 51.80ರಷ್ಟು ಪುರುಷರು ಮತ್ತು ಶೇ.51ರಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದರ ನಂತರ ಕೇರಳದಲ್ಲಿ ಶೇಕಡಾ 32.90ರಷ್ಟು ಪುರುಷರು ಮತ್ತು 44.70ರಷ್ಟು ಮಹಿಳೆಯರು, ತೆಲಂಗಾಣ (34.80 ಪ್ರತಿಶತ ಪುರುಷರು ಮತ್ತು 36.40 ಪ್ರತಿಶತ ಮಹಿಳೆಯರು) ಮತ್ತು ಆಂಧ್ರ ಪ್ರದೇಶ (38.30 ಪ್ರತಿಶತ ಪುರುಷರು ಮತ್ತು 32.70 ಪ್ರತಿಶತ ಮಹಿಳೆಯರು) ಭಾರತ ಶ್ರೇಯಾಂಕದಲ್ಲಿ ೮, 10 ಮತ್ತು 12 ನೇ ಸ್ಥಾನಗಳಲ್ಲಿವೆ.
ಉನ್ನತ ಶಿಕ್ಷಣದಲ್ಲಿ GER ಅನ್ನು 18 ರಿಂದ 23 ವರ್ಷ ವಯಸ್ಸಿನವರಿಗೆ ಲೆಕ್ಕಹಾಕಲಾಗುತ್ತದೆ. ಇದು ಒಂದು ನಿರ್ದಿಷ್ಟ ಶಾಲಾ ವರ್ಷದಲ್ಲಿ ಅರ್ಹ ಅಧಿಕೃತ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ವಯಸ್ಸನ್ನು ಲೆಕ್ಕಿಸದೆ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿಯಾಗಿದೆ. ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ಮಟ್ಟದ ಭಾಗವಹಿಸುವಿಕೆಯನ್ನು ತೋರಿಸಲು GER ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
ಈ ಸಮೀಕ್ಷೆಯಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳ ನಡುವಿನ ಅಸಮಾನತೆಯನ್ನು ತೋರುತ್ತಿದೆ. ಉಡುಪಿಯಲ್ಲಿ ಶೇ.73.13ರಷ್ಟು ಪುರುಷರು ಹಾಗೂ ಶೇ.64.22ರಷ್ಟು ಮಹಿಳೆಯರು, ದಕ್ಷಿಣ ಕನ್ನಡದಲ್ಲಿ ಶೇ.61.86ರಷ್ಟು ಪುರುಷರು ಮತ್ತು ಶೇ.72.39ರಷ್ಟು ಮಹಿಳೆಯರು ಹಾಗೂ ಚಾಮರಾಜನಗರದಲ್ಲಿ ಶೇ.10.58ರಷ್ಟು ಪುರುಷರು ಹಾಗೂ ಶೇ.13.34ರಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಜಿಇಆರ್ ಶ್ರೇಯಾಂಕದಲ್ಲಿ ಹಾಸನದಲ್ಲಿ ಶೇಕಡಾ 14.44 ಪುರುಷರು ಮತ್ತು ಶೇಕಡಾ 16.64ರಷ್ಟು ಮಹಿಳೆಯರು ನೀರಸ ದಾಖಲೆಯನ್ನು ಹೊಂದಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳು ಉನ್ನತ ಶಿಕ್ಷಣದಲ್ಲಿ ಕೇವಲ 14.77 ರಷ್ಟು ಪುರುಷರು ಮತ್ತು 15.46 ರಷ್ಟು ಮಹಿಳೆಯರು ಮತ್ತು ಕಲಬುರಗಿ (ಶೇ. 14.16 ರಷ್ಟು ಪುರುಷರು ಮತ್ತು 22.44 ರಷ್ಟು ಮಹಿಳೆಯರು) ಜಿಲ್ಲೆಯು ಉನ್ನತ ಶಿಕ್ಷಣಕ್ಕೆ ದಾಖಲಾತಿ ಹೊಂದಿರುವವರ ಸಂಖ್ಯೆಯಲ್ಲಿ ಕಡಿಮೆ ಸ್ಥಾನದಲ್ಲಿದೆ.
ಕಳೆದ ಎಂಟು ವರ್ಷಗಳಲ್ಲಿ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಬಹುತೇಕ ಕುಂಠಿತವಾಗಿದೆ. ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಉನ್ನತ ಶಿಕ್ಷಣಕ್ಕಾಗಿ ಒಟ್ಟು ಬಜೆಟ್‌ನಲ್ಲಿ 4,772.93 ಕೋಟಿ ಅಥವಾ 1.93 ರಷ್ಟು ಮೀಸಲಿಟ್ಟಿದ್ದರು. ಅದರಲ್ಲಿ 4094.25 ಕೋಟಿ ಅಥವಾ ಶೇ 87 ರಷ್ಟು ವೇತನ ಮತ್ತು ರೂ 678.61 ಕೋಟಿ (ಶೇ 13) ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಒಟ್ಟು 23,7893 ಕೋಟಿ ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಕೇವಲ 4,688 ಕೋಟಿ ಅಥವಾ 1.97 ರಷ್ಟು ಮೀಸಲಿಡಲಾಗಿತ್ತು.
2014-15ರಲ್ಲಿ ಅತಿ ಹೆಚ್ಚು ಶೇಕಡಾವಾರು ಬಜೆಟ್ ಹಂಚಿಕೆಯಾಗಿದ್ದು, 13,2835 ಕೋಟಿ ರೂ.ಗಳಲ್ಲಿ 4,673 ಕೋಟಿ ರೂ. ಅಥವಾ ಶೇ.3.52 ರಷ್ಟು ಉನ್ನತ ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಂಜೂರಾದ ಶೇ.50ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಮೂಲಗಳು ತಿಳಿಸಿವೆ.