ನೀಟ್ ಪರೀಕ್ಷೆ: ವಿದ್ಯಾರ್ಥಿಗಳಿಗೆ ಎಕ್ಸಾಮ್ 24X7 ಡಾಟ್ ಕಾಂ ವಿಶೇಷ ತರಬೇತಿ

Posted By:

ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ ಸೇರಲು ಬರೆಯಬೇಕಾಗಿರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಬಗ್ಗೆ ಇನ್ನು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ನೀಟ್ ಪರೀಕ್ಷೆಗೆ ಸಿದ್ಧತೆಗಾಗಿ ಎಕ್ಸಾಮ್ 24X7 ಡಾಟ್ ಕಾಂ ಸಹಾಯ ಮಾಡಲಿದೆ.

ನೀಟ್ ಅರ್ಹತಾ ಪರೀಕ್ಷೆಗೆ ಎಕ್ಸಾಮ್ 24X7 ಡಾಟ್ ಕಾಂನಲ್ಲಿ 8 ತಿಂಗಳ ತರಬೇತಿ ನೀಡಲಾಗುತ್ತದೆ. ಸಂಸ್ಥೆಯ ಮೊದಲ ಬ್ಯಾಚ್​ನಲ್ಲಿ ಶೇ.100 ಸಾಧನೆ ಮಾಡಿ ದೇಶದಲ್ಲೇ ದಾಖಲೆ ನಿರ್ವಿುಸಿದೆ. 2017ರ ಮೊದಲ ಬ್ಯಾಚ್​ನಲ್ಲಿ ತರಬೇತಿ ಪಡೆದ 24 ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. 10 ವಿದ್ಯಾರ್ಥಿಗಳು ಮೆಡಿಕಲ್, 3 ವಿದ್ಯಾರ್ಥಿಗಳು ಡೆಂಟಲ್, ಇಬ್ಬರು ಬಿ.ಎಸ್ಸಿ ಅಗ್ರಿಕಲ್ಚರ್, ಉಳಿದವರು ಇತರ ಬೇಡಿಕೆಯ ಕೋರ್ಸ್​ಗಳಿಗೆ ಸೇರಿದ್ದಾರೆ' ಎಂದು ಸಂಸ್ಥೆಯ ಸಿಇಒ ಆಂಡೋ ಪೌಲ್ ತಿಳಿಸಿದ್ದಾರೆ.

ಎಕ್ಸಾಮ್ 24X7 ಡಾಟ್ ಕಾಂ

ತರಬೇತಿ ಕ್ರಮ

ಎಕ್ಸಾಮ್ಸ್ 24X7 ಡಾಟ್ ಕಾಂ ಸಂಸ್ಥೆಯಲ್ಲಿ ಅತ್ಯುತ್ತಮ ಕಲಿಕಾ ಕ್ರಮ ಅನುಷ್ಠಾನಗೊಳಿಸಲಾಗಿದೆ. ಪಠ್ಯಗಳನ್ನು ಸುಲಭ, ಮಧ್ಯಮ ಹಾಗೂ ಕಠಿಣ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ ತರಬೇತಿ ನೀಡಲಾಗುತ್ತದೆ. 8 ತಿಂಗಳ ಅವಧಿಯ ತರಬೇತಿಯಲ್ಲಿ ದಿನಕ್ಕೆ ನಾಲ್ಕೂವರೆ ಗಂಟೆ ತರಬೇತಿ. ವಾರಕ್ಕೆ 5 ದಿನ ತರಗತಿ ಇರುತ್ತದೆ.

ಸಂಸ್ಥೆಯಲ್ಲಿ 40 ವರ್ಷ ಅನುಭವ ಹೊಂದಿದ ಶಿಕ್ಷಕರಿದ್ದಾರೆ. 5 ಬಾರಿ ಸಿಇಟಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಪ್ರೊ.ರಮೇಶ್, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಹಲವಾರು ಪುಸ್ತಕಗಳನ್ನು ಬರೆದಿರುವ ಪ್ರೊ.ಬಿ.ಎಸ್.ಮೂಡಿತ್ತಾಯ ಮೊದಲಾದ ಅನುಭವಿ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ.

ವಾರಕ್ಕೊಂದು ಪರೀಕ್ಷೆ

ವಿದ್ಯಾರ್ಥಿಗಳಲ್ಲಿರುವ ಸಂಶಯವನ್ನು ನಿವಾರಣೆ ಮಾಡಿದ ಬಳಿಕವೇ ಮುಂದಿನ ಹಂತಕ್ಕೆ ಹೋಗಲಾಗುತ್ತದೆ. 10 ಅಣಕು ಪರೀಕ್ಷೆ ನಡೆಸಲಾಗುತ್ತದೆ. ಫೆಬ್ರವರಿ ವೇಳೆಗೆ ಎಲ್ಲ ಪಾಠ ಮುಗಿದು, ಮಾರ್ಚ್​ನಲ್ಲಿ ಪುನರ್ ಮನನ ನಡೆಯುತ್ತದೆ. ನೀಟ್ ಪರೀಕ್ಷೆಯಲ್ಲಿ 180 ಪ್ರಶ್ನೆಗಳಿರುತ್ತವೆ. ಒಂದು ಪ್ರಶ್ನೆಗೆ 45 ಸೆಕೆಂಡ್​ನಂತೆ ಉತ್ತರಿಸಿದರೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ. ಪರೀಕ್ಷೆ ಬರೆಯುವಾಗ ಸಮಯದ ಹೊಂದಾಣಿಕೆ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಪ್ರತಿ ಪ್ರಶ್ನೆಪತ್ರಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲಾಗುತ್ತದೆ.

ನೀಟ್ ಕಲಿಕೆಗೆ ಉಪಯುಕ್ತವಾಗಲೆಂದು ಮೊಬೈಲ್ ಆ್ಯಪ್ ಕೂಡ ಅಭಿವೃದ್ಧಿ ಪಡಿಸಿದ್ದು, ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಕಲಿಯಬಹುದಾಗಿದೆ.

ಸೀಮಿತ ಅವಕಾಶ

ನೀಟ್ ಕೋಚಿಂಗ್ ಪಡೆಯಲು ಒಟ್ಟು 25 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗೆ www.exams24x7.com ವೆಬ್​ಸೈಟ್ ನೋಡಬಹುದು.
ಮಂಗಳೂರು ಕೊಟ್ಟಾರಚೌಕಿಯ ಸೋನಾ ಪ್ಯಾಲೇಸ್​ನಲ್ಲಿರುವ ಸಂಸ್ಥೆಯ ಕಚೇರಿಯನ್ನು ಸಂರ್ಪಸಬಹುದು. ಮೊ. 7795777722/ 7760077722 ಕರೆ ಮಾಡಬಹುದು.

English summary
Exams 24X7.com providing the best coaching to crack neet exams, it also launched app programs to train students.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia