ರೈಲ್ವೆ ಇಲಾಖೆ 19,952 ಹುದ್ದೆಗಳ ನೇಮಕಾತಿ ಸುಳ್ಳು!

Posted By:

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 19,952 ಆರ್‌.ಪಿ.ಎಫ್‌. ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯು ನಕಲಿ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ನಕಲಿ ಅಧಿಸೂಚನೆ ಹರಿದಾಡುತ್ತಿದ್ದು, ಇದು  ಮುಗ್ಧ ಅಭ್ಯರ್ಥಿಗಳನ್ನು ವಂಚಿಸುವ ದೃಷ್ಟಿಯಿಂದ ಕಿಡಿಗೇಡಿಗಳು ಮಾಡಿರುವುದು, ಇಂತಹ ಪೋಸ್ಟ್‌ ಗಳನ್ನು ನಿರ್ಲಕ್ಷಿಸಬೇಕು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ವಿನಂತಿಸಿದ್ದಾರೆ.

ರೈಲ್ವೆ ಇಲಾಖೆ ನೇಮಕಾತಿ ಸುಳ್ಳು!

ಅಧಿಸೂಚನೆಯಲ್ಲಿ ಏನಿದೆ?

01/2017 ಸಂಖ್ಯೆಯ ಈ ನಕಲಿ ಅಧಿಸೂಚನೆಯು ಏಳು ಪುಟಗಳನ್ನು ಹೊಂದಿದೆ. ಇದರಲ್ಲಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ, ನೇಮಕಾತಿ ವಿಧಾನ, ನೋಡಲ್‌ ಅಧಿಕಾರಿಗಳು ಎಂದು ಬಿಂಬಿಸಿ ಕೆಲವರ ಹೆಸರುಗಳನ್ನೂ ಸೇರಿಸಲಾಗಿದೆ. ಅಲ್ಲದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್‌ 14 ಎಂದೂ ನಮೂದಿಸಲಾಗಿದೆ.

ಈ ಅಧಿಸೂಚನೆಯನ್ನು ಭದ್ರತಾ ನಿರ್ದೇಶನಾಲಯವಾಗಲಿ, ರೈಲ್ವೆ ಮಂಡಳಿಯಾಗಲಿ ಅಥವಾ ರೈಲ್ವೆ ವಲಯದ ಮುಖ್ಯ ಭದ್ರತಾ ಆಯುಕ್ತರಾಗಲಿ ಹೊರಡಿಸಿಲ್ಲ. ರೈಲ್ವೆ ಹಸರಿನಲ್ಲಿ ನಕಲಿ ಅಧಿಸೂಚನೆ ಹೊರಡಿಸಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಜಯಾ ತಿಳಿಸಿದ್ದಾರೆ

ರೈಲ್ವೆಯ 'ಸಿ' ಮತ್ತು 'ಡಿ' ದರ್ಜೆಯ ಹುದ್ದೆಗಳನ್ನು ರೈಲ್ವೆ ನೇಮಕಾತಿ ಮಂಡಳಿ ಅಥವಾ ರೈಲ್ವೆ ನೇಮಕಾತಿ ಘಟಕದಿಂದ ಮಾತ್ರ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಕಲಿ ಮಾಹಿತಿಯ ಬಗ್ಗೆ ಎಚ್ಚರವಿರಲಿ

ಇತ್ತೀಚೆಗೆ ಇಂತಹ ನಕಲಿ ಉದ್ಯೋಗ ಮಾಹಿತಿಯು ಎಲ್ಲಡೆ ಹರಿದಾಡುತ್ತಿರುವುದು ಯುವಕರನ್ನು ದಾರಿ ತಪ್ಪಿಸುತ್ತದೆ. ಕೇವಲ ರೈಲ್ವೆ ಮಾತ್ರವಲ್ಲ, ಬ್ಯಾಂಕ್ ಉದ್ಯೋಗ, ಪದವೀಧರರ ನೇಮಕಾತಿ ಹೀಗೆ ಹಲವಾರು ರೀತಿಯ ನೇಮಕಾತಿಗಳ ನಕಲಿ ಮಾಹಿತಿಗಳ ಹರಿದಾಟ ಹೆಚ್ಚಾಗಿದೆ. ಯಾವುದೇ ಅಧಿಸೂಚನೆಗಳಾಗಲಿ ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯ ವೆಬ್ಸೈಟ್ ಗಳನ್ನು ಸೂಕ್ಮವಾಗಿ ಗಮನಿಸಿ ಉದ್ಯೋಗದ ಮಾಹಿತಿಯನ್ನು ಖಾತರಿ ಪಡಿಸಿಕೊಳ್ಳಬೇಕು. ಇಲ್ಲವೇ ಆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು.

ನೀವು ಕೂಡ ವಿದ್ಯಾರ್ಥಿವೇತನ ನೀಡಬಹುದು ಅಥವಾ ಪಡೆಯಬಹುದು

English summary
The South Western Railway clarifies that the notification which is viral in social media about recruiting 19,952 RPF constable in Railway is fake.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia