ವಿನೋದ್-ಸರ್ಯು ದೋಷಿ ಫೌಂಡೇಶನ್ ವತಿಯಿಂದ 2017ನೇ ಸಾಲಿನ ಫೆಲೋಶಿಪ್

ವಿದ್ಯಾರ್ಥಿಗಳಿಗೆ ವೇತನ ನೀಡುತ್ತ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ವಿನೋದ್-ಸರ್ಯು ಫೌಂಡೇಶನ್ 2017 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ

ವಿದ್ಯಾರ್ಥಿಗಳಿಗೆ ವೇತನ ನೀಡುತ್ತ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ವಿನೋದ್-ಸರ್ಯು ಫೌಂಡೇಶನ್ 2017 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಓದಲು ಅವಕಾಶ ಪಡೆದ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಮಾನವಿಕ ಅಧ್ಯಯನ, ಸಮಾಜ ಶಾಸ್ತ್ರ, ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಈ ವೇತನವು ಅನ್ವಯಿಸಲಿದೆ.

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಫೆಲೋಶಿಪ್

ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಓದಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು, ಆರ್ಥಿಕ ಪರಿಸ್ಥಿತಿಯಿಂದ ಬಳಲುತ್ತಿರುವ ವಿದ್ಯಾರ್ಥಿಗಳ ಕನಸನ್ನು ಈಡೇರಿಸುವ ಉದ್ದೇಶವನ್ನು ವಿನೋದ್-ಸರ್ಯು ಫೌಂಡೇಶನ್ ಹೊಂದಿದೆ.

ಫೆಲೋಶಿಪ್ ಪಡೆಯಲು ಅರ್ಹತೆ

  • ವಿದ್ಯಾರ್ಥಿಯು ಭಾರತೀಯ ನಾಗರಿಕನಾಗಿರಬೇಕು.
  • ಭಾರತೀಯ ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಆಗಸ್ಟ್/ ಸೆಪ್ಟೆಂಬರ್/ಅಕ್ಟೋಬರ್ -2017 ರಲ್ಲಿ ನಡೆಯುವ ಪರೀಕ್ಷೆಗೆ ಮೆರಿಟ್ ಆಧಾರದ ಮೇಲೆ ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿರಬೇಕು.
  • ಅಂತಿಮ ವರ್ಷದ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 07,2017 ರ ಒಳಗೆ ಅಂತಿಮ ವರ್ಷದ ಅಂಕಪಟ್ಟಿ ಸಲ್ಲಿಸಬೇಕಾಗುತ್ತದೆ.

ಫೆಲೋಶಿಪ್ ಮೊತ್ತ

ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಗರಿಷ್ಟ 3 ಲಕ್ಷದವರೆಗೂ ವೇತನ ಸಿಗಲಿದೆ. ಒಟ್ಟು ಮೊತ್ತವನ್ನು ಒಂದೇ ಬಾರಿ ನೀಡಲಾಗುವುದು.

ದಿನಾಂಕ

  • ಮೇ 07,2017 ಸಂಪೂರ್ಣ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ.
  • ಜೂನ್ 10,2017 ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನದ ಸೂಚನೆ ನೀಡುವ ದಿನಾಂಕ.
  • ಜೂನ್ 19, 2017 ಅಭ್ಯರ್ಥಿಗಳಿಗೆ ಅಂತಿಮ ಸಂದರ್ಶನ.
  • ಜೂಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲವಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.
  • ಆಗಸ್ಟ್ 2017, ವಿದ್ಯಾರ್ಥಿಯ ವೀಸಾ ವಿಚಾರಣೆ ನಂತರ ವಿದ್ಯಾರ್ಥಿ ವೇತನದ ಚೆಕ್ ನೀಡಲಾಗುವುದು.

ಆಯ್ಕೆಯಾದ ವಿದ್ಯಾರ್ಥಿಯೊಂದಿಗೆ ಒಮ್ಮೆ ವೈಯ್ಯಕ್ತಿಕ ಸಂದರ್ಶನ ಏರ್ಪಡಿಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ ವಿಳಾಸ http://vsdf.org/net/NewApplication1.aspx ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

For Quick Alerts
ALLOW NOTIFICATIONS  
For Daily Alerts

English summary
Vinod & Saryu Doshi Foundation Fellowships For Post Graduate 2017
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X