ಬಿ.ಇಡಿ ಕೋರ್ಸ್: ಸರ್ಕಾರಿ ಕೋಟಾ ಸೀಟುಗಳ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ

2017-18ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

2017-18ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

ದಾಖಲಾತಿ ಶುಲ್ಕದ ಬಗ್ಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಪರಿ‍ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅವರ ವಾರ್ಷಿಕ ಆದಾಯ ರೂ. 2,50,000/- ಅಥವಾ ರೂ.2,50,000/-ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ದಾಖಲಾತಿ ಸಮಯದಲ್ಲಿ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಆದರೆ ವಾರ್ಷಿಕ ಆದಾಯ ರೂ.2,50,000/- ಕ್ಕಿಂತ ಹೆಚ್ಚಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ದಾಖಲಾತಿ ಸಮಯದಲ್ಲಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.

ಬಿ.ಇಡಿ ಕೋರ್ಸ್

ಸಾಮಾನ್ಯ ವರ್ಗ, ಪ್ರವರ್ಗ-1, 2ಎ, 2ಬಿ, 3ಎ, ಮತ್ತು 3ಬಿ ಪ್ರವರ್ಗಗಳಲ್ಲಿ ಆಯ್ಕೆಯಾಗಿರುವವರಿಗೆ ಶುಲ್ಕ ವಿನಾಯಿತಿ ಇರುವುದಿಲ್ಲ. ಈ ಅಭ್ಯರ್ಥಿಗಳು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಬೇಕಾದ ಶುಲ್ಕದ ವಿವರ

  • ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ರೂ.5000/-(ಕಲಾ ವಿಭಾಗ) ಮತ್ತು ರೂ.5105/- (ವಿಜ್ಞಾನ ವಿಭಾಗ)
  • ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ರೂ.6000/-(ಕಲಾ ವಿಭಾಗ) ಮತ್ತು ರೂ.6150/- (ವಿಜ್ಞಾನ ವಿಭಾಗ)
  • ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ರೂ.10000/-(ಕಲಾ ವಿಭಾಗ) ಮತ್ತು ರೂ.10150/- (ವಿಜ್ಞಾನ ವಿಭಾಗ)

ಅಭ್ಯರ್ಥಿಗಳು ದಾಖಲಾತಿ ಸಮಯದಲ್ಲಿ ಪರಿಶೀಲನೆಗೆ ಅವರಿಗೆ ಅನ್ವಯಿಸುವ ಈ ಕೆಳಗೆ ತಿಳಿಸಿರುವ ಮೂಲ ದಾಖಲೆಗಳನ್ನು ಸಲ್ಲಿಸಬೇಕು.

  • ಕ್ರೋಢೀಕೃತ ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ದ್ವಿತೀಯ ಪಿಯುಸಿ ಅಂಕಪಟ್ಟಿ
  • ಮೂರುವರ್ಷಗಳ ಪದವಿಯ ಅಂಕಪಟ್ಟಿಗಳು
  • ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು
  • ಕರ್ನಾಟಕ ಅಭ್ಯರ್ಥಿ ಎಂದು ಪರಿಗಣಿಸಲು ಕನಿಷ್ಠ 7 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರಗಳು (ಒಂದರಿಂದ ಹನ್ನೆರಡನೇ ತರಗತಿಯವರೆಗು ಅಥವಾ ಅರ್ಹತಾ ಪರೀಕ್ಷೆಯವರೆಗೆ ಅನುಬಂಧ-1 ರಂತೆ) ಇದನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಸಲ್ಲಿಸಬೇಕು.
  • ಕನ್ನಡ ಮಾಧ್ಯಮದ ಮೀಸಲಾತಿಗೆ ಪರಿಗಣಿಸಲು 01 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಪ್ರಮಾಣ ಪತ್ರಗಳು
  • ಆನ್-ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಮುದ್ರಿತ ಪ್ರತಿಯನ್ನು ಪಡೆದಿರುವ ಅರ್ಜಿಯ ಪ್ರತಿಯನ್ನು ಹಾಗೂ ಸಿಎಸಿ/ನೋಡಲ್ ಸೆಂಟರ್ ಪ್ರತಿಯ ಬ್ಯಾಂಕ್ ಚಲನ್ ಪ್ರತಿಯನ್ನು ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
The list of qualified candidates for admission to government quota seats in government, recognized aided and unaided BED colleges has been announced.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X