ದಿನಕ್ಕೆ 6 ಗಂಟೆ… ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ?..

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚು ಮಹತ್ವ ನೀಡುವ ಸದುದ್ದೇಶವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಫಿನ್‌ಲ್ಯಾಂಡ್‌ನಲ್ಲಿ ಪ್ರಧಾನಿ ಸನ್ನಾ ಮಾರಿನ್ ಮಹತ್ವದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅದೇನೆಂದರೆ ಒಬ್ಬ ವ್ಯಕ್ತಿ ದಿನಕ್ಕೆ 6 ಗಂಟೆಗಳ ಕಾಲ ಮತ್ತು ವಾರಕ್ಕೆ 4 ದಿನಗಳು ಮಾತ್ರ ಕೆಲಸ ಮಾಡುವುದು ಒಳಿತು ಎಂದು ಹೇಳಿದ್ದಾರೆ.

 
ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಿದ್ರೆ ಸಾಕು!?…

ಕಾರ್ಮಿಕರ ಬಗೆಗಿನ ಕಾಳಜಿ ಮತ್ತು ಅವರ ಅಭಿವೃದ್ಧಿಗಾಗಿ ಯುವ ಪ್ರಧಾನಿ ಸನ್ನಾ ಮಾರಿನ್‌ ನೀಡಿದ ಹೇಳಿಕೆಯನ್ನು ಕೇಳಿದ ನಂತರ ಫಿನ್‌ಲ್ಯಾಂಡ್‌ನ ಜನರು ಭರ್ಜರಿ ಸಂಭ್ರಮಾಚರಣೆಯಲ್ಲಿದ್ದಾರೆ.

ವಿಶ್ವದ ಯುವ ಪ್ರಧಾನಿ:

ವಿಶ್ವದ ಯುವ ಪ್ರಧಾನಿ:

ಡಿಸೆಂಬರ್ 6 ರಂದು 34 ವರ್ಷ ವಯಸ್ಸಿನ ಸನ್ನಾ ಮಾರಿನ್ ವಿಶ್ವದ ಕಿರಿಯ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸನ್ನಾ ಮಾರಿನ್ ಫಿನ್‌ಲ್ಯಾಂಡ್‌ನ 3 ನೇ ಮಹಿಳಾ ಪ್ರಧಾನಿಯಾಗಿದ್ದಾರೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ದೇಶದ ಅಭಿವೃದ್ಧಿಗೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ.

ವಾರಕ್ಕೆ 4 ದಿನ ಕೆಲಸ:

ವಾರಕ್ಕೆ 4 ದಿನ ಕೆಲಸ:

ಫಿನ್‌ಲ್ಯಾಂಡ್‌ ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಕಾರ್ಮಿಕರ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ಸನ್ನಾ ಮಾರಿನ್ ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ವಾರದ ನಾಲ್ಕು ದಿನಗಳಲ್ಲಿ ಕೇವಲ 6 ಗಂಟೆಗಳ ಕಾಲ ಕೆಲಸ ಮಾಡಿದರೆ ಸಾಕು, ಇನ್ನುಳಿದ ದಿನಗಳು ರಜೆ ಇದ್ದರೆ ಒಳಿತು ಎಂದು ಹೇಳಿದ್ದಾರೆ. ಇದು ಅಲ್ಲಿನ ಕಾರ್ಮಿಕರಿಗೆ ಅತ್ಯಂತ ಸಂತಸದ ವಿಷಯವಾಗಿದೆ.

ಆಶ್ಚರ್ಯದ ಸಂಗತಿ:
 

ಆಶ್ಚರ್ಯದ ಸಂಗತಿ:

ಈ ಹೊಸ ಯೋಜನೆಯ ಬಗೆಗೆ ಇರುವ ಹೇಳಿಕೆಯ ಹಿಂದಿರುವ ಆಶ್ಚರ್ಯದ ಸಂಗತಿಯೆಂದರೆ ಕಾರ್ಮಿಕರಿಗೆ ಕೆಲಸದಲ್ಲಿ ಒತ್ತಡ ಹೆಚ್ಚಿರುತ್ತದೆ ಹಾಗಾಗಿ ಅವರ ಒತ್ತಡವನ್ನು ನಿವಾರಿಸಬೇಕು ಮತ್ತು ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯುವಂತೆ ಮಾಡಬೇಕು ಹಾಗಾದಾಗ ಮಾತ್ರ ಅವರು ದುಡಿಮೆಗೆ ಹೆಚ್ಚಿನ ಮಹತ್ವ ಕೊಟ್ಟು ಉತ್ತಮ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ ಎಂಬುದು ಪ್ರಧಾನಿಯ ಅಭಿಪ್ರಾಯ.

ಕೆಲಸಕ್ಕೆ ಹೆಚ್ಚು ಮಹತ್ವ:

ಕೆಲಸಕ್ಕೆ ಹೆಚ್ಚು ಮಹತ್ವ:

ಈ ಹೊಸ ಯೋಜನೆಯಿಂದ ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯಲಿದ್ದಾರೆ. ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ಆನಂದಿಸುತ್ತಾರೆ ಮತ್ತು ಬಿಡುವಿನ ಸಮಯವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಲಿದ್ದಾರೆ. ಹೀಗಾದಾಗ ಅವರ ಮಾನಸಿಕ ಸ್ಥಿತಿಗತಿಗಳು ಉತ್ತಮವಾಗಿರುತ್ತವೆ. ಇದರಿಂದ ಅವರು ಕೆಲಸಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ ಎಂದು ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮಾರಿನ್‌ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಇದು ನಮ್ಮ ಮುಂದಿನ ಹೆಜ್ಜೆ:

ಇದು ನಮ್ಮ ಮುಂದಿನ ಹೆಜ್ಜೆ:

ಈ ಯೋಜನೆಯಿಂದ ಕೆಲಸದಲ್ಲಿನ ಉತ್ಪನ್ನ ಹೆಚ್ಚಾಗಲಿದೆ ಮತ್ತು ಕಾರ್ಮಿಕರ ಅಭಿವೃದ್ಧಿಯಾಗಲಿದೆ. ಇದು ನಮ್ಮ ಜೀವನದ ಮುಂದಿನ ಹೆಜ್ಜೆ ಎಂದು ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮಾರಿನ್ ಹೇಳಿದ್ದಾರೆ. ಪ್ರಧಾನ ಮಂತ್ರಿಯ ಈ ಹೇಳಿಕೆಗೆ ಫಿನ್‌ಲ್ಯಾಂಡ್‌ನ ಜನರು ಮತ್ತು ಉದ್ಯೋಗಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

1996 ರಿಂದ ಸಮಯದ ಒಪ್ಪಂದ:

1996 ರಿಂದ ಸಮಯದ ಒಪ್ಪಂದ:

1996ನೇ ಇಸವಿಯಿಂದ ಫಿನ್‌ಲ್ಯಾಂಡ್ ದೇಶದಲ್ಲಿ ಬೆಳಗ್ಗೆ 3ರಿಂದ ಅಥವಾ ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾಗುವ ಕೆಲಸಗಳಲ್ಲಿ ಕಾರ್ಮಿಕರು ತೊಡಗಿಕೊಳ್ಳುವಂತೆ ಸಮಯದ ಒಪ್ಪಂದವನ್ನು ಹೊಂದಿರುತ್ತದೆ. ಈಗಲೂ ಅಲ್ಲಿನ ನೌಕಕರು ಅದೇ ರೀತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸ್ವೀಡನ್ ಮತ್ತು ಜಪಾನ್‌ನಲ್ಲಿ ಈ ಯೋಜನೆ ಜಾರಿ:

ಸ್ವೀಡನ್ ಮತ್ತು ಜಪಾನ್‌ನಲ್ಲಿ ಈ ಯೋಜನೆ ಜಾರಿ:

ಫಿನ್‌ಲ್ಯಾಂಡ್‌ ದೇಶದ ನೆರೆ ಹೊರೆಯ ರಾಷ್ಟ್ರಗಳಾದ ಸ್ವೀಡನ್‌ ಮತ್ತು ಜಪಾನ್‌ನಲ್ಲಿ ಈಗಾಗಲೇ ಈ ಯೋಜನೆ ಜಾರಿಯಲ್ಲಿದೆ. ಅಲ್ಲಿನ ಜನರು ಮತ್ತು ಉದ್ಯೋಗಿಗಳು ಈ ಬಗೆಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಸ್ವೀಡನ್‌ನಲ್ಲಿ ದಿನಕ್ಕೆ 6 ಗಂಟೆ ಮತ್ತು ವಾರಕ್ಕೆ ನಾಲ್ಕು ದಿನದ ಕೆಲಸದ ಯೋಜನೆಯನ್ನು ಈಗಾಗಲೆ ಜಾರಿಗೆ ತಂದಿದ್ದು, ಅಲ್ಲಿನ ನೌಕರರು ಸಂತಸದಿಂದಿದ್ದಾರೆ ಮತ್ತು ಹೆಚ್ಚು ಉತ್ಪಾದಕರಾಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದಲ್ಲದೆಯೇ ವಿಶ್ವದ ಅನೇಕ ದೇಶಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಅದರಲ್ಲೂ ಜಪಾನ್‌ನಲ್ಲಿ ಈ ಯೋಜನೆ ಜಾರಿಯಾದ ನಂತರ ಅಲ್ಲಿನ ನೌಕರರ ಉತ್ಪಾದನೆ ಹೆಚ್ಚಾಗಿರುವುದು ಹೆಚ್ಚು ಗಮನಾರ್ಹ ಮತ್ತು ಖುಷಿಯ ಸಂಗತಿಯಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Finland PM sanna marin proposed about reduce the work hours and working days in a week.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X