Fit India Quiz 2021: ಫಿಟ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ...25 ಲಕ್ಷ ಬಹುಮಾನ ನಿಮ್ಮದಾಗಿಸಿಕೊಳ್ಳಿ

ಫಿಟ್ ಇಂಡಿಯಾ ಚಳುವಳಿಯ ಅಂಗವಾಗಿ ಭಾರತದ ಕ್ರೀಡಾ ಪ್ರಾಧಿಕಾರವು ಶಾಲಾ ವಿದ್ಯಾರ್ಥಿಗಳಿಗೆ ಫಿಟ್ ಇಂಡಿಯಾ ರಸಪ್ರಶ್ನೆ ಜೂನ್ 2021 ಅನ್ನು ಘೋಷಿಸಿದೆ. ಫಿಟ್ ಇಂಡಿಯಾ ರಸಪ್ರಶ್ನೆಯು ಶಾಲಾ, ಪ್ರಾಥಮಿಕ, ರಾಜ್ಯ ಮತ್ತು ರಾಷ್ಟ್ರೀಯ ಹಂತದ ಒಟ್ಟು ನಾಲ್ಕು ಸುತ್ತಿನಲ್ಲಿ ನಡೆಸಲಿದ್ದು, ಶಾಲೆಗಳು ಮತ್ತು ವಿದ್ಯಾರ್ಥಿಗಳಿಗೆ 3 ಕೋಟಿಗಿಂತ ಹೆಚ್ಚಿನ ಮೌಲ್ಯದ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಒದಗಿಸುತ್ತಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಎಲ್ಲಾ ಅಂಗಸಂಸ್ಥೆ ಶಾಲೆಗಳ ಮುಖ್ಯಸ್ಥರನ್ನು ಗರಿಷ್ಠ ಭಾಗವಹಿಸುವಿಕೆಗಾಗಿ ಕೇಳಿದೆ.

ಫಿಟ್ ಇಂಡಿಯಾ ರಸಪಶ್ನೆ 2021ಗೆ ಜು.1 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ರಸಪ್ರಶ್ನೆಗಾಗಿ ನೋಂದಣಿ ಪ್ರಕ್ರಿಯೆಯು ಜುಲೈ 1 ರಿಂದ ಪ್ರಾರಂಭವಾಗಲಿದ್ದು ಜುಲೈ 31 ಕೊನೆಯ ದಿನವಾಗಿರುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಪ್ರಾಥಮಿಕ ಸುತ್ತನ್ನು ಸೆಪ್ಟೆಂಬರ್ 4 ರಂದು ಆನ್‌ಲೈನ್ ಮೂಲಕ ನಡೆಸಲಿದೆ. ರಾಜ್ಯ ಸುತ್ತನ್ನು ಅಕ್ಟೋಬರ್‌ನಲ್ಲಿ ಮತ್ತು ರಾಷ್ಟ್ರೀಯ ಸುತ್ತಿನ ಕಾರ್ಯಕ್ರಮವನ್ನು ನವೆಂಬಲ್ ನಲ್ಲಿ ನಡೆಸಲು ನಿಗದಿಪಡಿಸಿದೆ.

ರಾಷ್ಟ್ರೀಯ ಸುತ್ತಿನಲ್ಲಿ ಕ್ವಾರ್ಟರ್-ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಚಾಂಪಿಯನ್ ತಂಡವು 2,50,000 ರೂ.ಗಳ ಬಹುಮಾನವನ್ನು ಮತ್ತು ಅವರ ಶಾಲೆಯು 25 ಲಕ್ಷ ರೂ ಬಹುಮಾನವನ್ನು ಪಡೆದುಕೊಳ್ಳಲಿದೆ.

ಮೊದಲ ರನ್ನರ್ ಅಪ್ ತಂಡವು 1,50,000 ರೂ. ಮತ್ತು ಶಾಲೆಗೆ 15 ಲಕ್ಷ ರೂ. ಅದೇ ರೀತಿ ಎರಡನೇ ರನ್ನರ್ ತಂಡವು 1 ಲಕ್ಷ ರೂ. ಮತ್ತು ಶಾಲೆಯು 10 ಲಕ್ಷ ರೂ ಬಹುಮಾನವನ್ನು ಪಡೆಯಬಹುದು.

ರಾಜ್ಯ ಸುತ್ತಿನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ತಂಡಗಳು ಮತ್ತು ಅವರ ಶಾಲೆಗಳಿಗೆ ನಗದು ಬಹುಮಾನವಿರುತ್ತದೆ. ಪ್ರಾಥಮಿಕ ಅಥವಾ ಎನ್‌ಟಿಎ ನಡೆಸುವ ಸುತ್ತಿನಲ್ಲಿ ರಾಜ್ಯ ಸುತ್ತಿಗೆ ಅರ್ಹತೆ ಪಡೆದವರಿಗೆ ಕೂಡ ನಗದು ಬಹುಮಾನ ಇರುತ್ತದೆ.

ಶಾಲೆಗಳಿಗೆ ಫಿಟ್ ಇಂಡಿಯಾ ರಸಪ್ರಶ್ನೆ ಎಂದರೇನು?:

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮತ್ತು ಫಿಟ್ ಇಂಡಿಯಾ ಮಿಷನ್ ಫಿಟ್ ಇಂಡಿಯಾ ರಸಪ್ರಶ್ನೆಯನ್ನು ಹುಟ್ಟುಹಾಕಿದೆ. ಫಿಟ್‌ನೆಸ್ ಮತ್ತು ಕ್ರೀಡೆಗಳ ಬಗ್ಗೆ ಶಾಲಾ ಮಕ್ಕಳಿಗೆ ಕೇಳಲಾಗುವ ಮೊದಲ ರಾಷ್ಟ್ರವ್ಯಾಪಿ ರಸಪ್ರಶ್ನೆ ಕಾರ್ಯಕ್ರಮ ಎಂದು ನಂಬಲಾಗಿದೆ. ಈ ರಸಪ್ರಶ್ನೆಯು ಪ್ರಾಥಮಿಕವಾಗಿ ವಿದ್ಯಾರ್ಥಿಗಳ ಫಿಟ್‌ನೆಸ್ ಮತ್ತು ಕ್ರೀಡಾ ಜ್ಞಾನವನ್ನು ತಮ್ಮ ಗೆಳೆಯರೊಂದಿಗೆ ಪರೀಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಈ ರಸಪ್ರಶ್ನೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಆದರೆ 8 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಯ ವಿದ್ಯಾರ್ಥಿಗಳಿಗೆ ಸುಲಭವಾಗಿ ಉತ್ತರಿಸುವ ರೀತಿಯಲ್ಲಿ ಪ್ರಶ್ನೆಗಳನ್ನು ವಿನ್ಯಾಸಗೊಳಿಸಲಾಗುವುದು.

ಫಿಟ್ ಇಂಡಿಯಾ ರಸಪ್ರಶ್ನೆ: ನೋಂದಾಯಿಸುವುದು ಹೇಗೆ?:

ಫಿಟ್ ಇಂಡಿಯಾ ರಸಪ್ರಶ್ನೆ ನೋಂದಣಿಗೆ ಶಾಲೆಗಳಿಗೆ ಅಧಿಕಾರವಿದೆ. ಶಾಲೆಗಳು ಪ್ರಾಥಮಿಕ ಸುತ್ತನ್ನು ನಡೆಸಬೇಕು ಮತ್ತು ರಸಪ್ರಶ್ನೆಗಾಗಿ ಕನಿಷ್ಠ 2 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ನಂತರ ಕನಿಷ್ಟ 2 ವಿದ್ಯಾರ್ಥಿಗಳನ್ನು ಫಿಟ್ ಇಂಡಿಯಾ ವೆಬ್‌ಸೈಟ್‌ನಲ್ಲಿ (https://fitindia.gov.in) ನೋಂದಾಯಿಸಬೇಕು. ನೋಂದಣಿ ಸಮಯದಲ್ಲಿ ಪ್ರತಿ ವಿದ್ಯಾರ್ಥಿಗೆ 250/-ರೂ ನೊಂದಣಿ ಶುಲ್ಕವನ್ನು ಶಾಲೆಯಿಂದ ಪಾವತಿಸಲಾಗುವುದು.

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Sports authority of india announces fit india quiz for school students, Students can register from july 1.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X