ವಯೋಮಿತಿ ಗೊಂದಲ ನಿವಾರಣೆ: 5 ವರ್ಷ 5 ತಿಂಗಳು ತುಂಬಿದ ಮಕ್ಕಳು ಒಂದನೇ ತರಗತಿಗೆ ಸೇರಬಹುದು

Posted By:

ಒಂದನೇ ತರಗತಿ ದಾಖಲಾತಿಗೆ ಸಮಸ್ಯೆಯಾಗಿದ್ದ ಮಕ್ಕಳ ವಯೋಮಿತಿಗೆ ಈಗ ಪರಿಹಾರ ಸಿಕ್ಕಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಸೇರುವ ಮಗುವಿನ ವಯೋಮಿತಿಯನ್ನು ಐದು ವರ್ಷ, ಐದು ತಿಂಗಳಿಗೆ ಇಳಿಕೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ನೂತನ ಆದೇಶ

ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಯಲ್ಲಿ 2017-18ನೇ ಸಾಲಿಗೆ ಪ್ರವೇಶ ಪಡೆಯಬೇಕಾದರೆ ಮಗು 2012ರ ಜನವರಿ 1ಕ್ಕಿಂತ ಮೊದಲು ಜನಿಸಿರಬೇಕು.

ಇದೇ ವರ್ಷ ಪೂರ್ವ ಪ್ರಾಥಮಿಕ ಶಾಲೆಗೆ (ಎಲ್‌ಕೆಜಿ) ಸೇರಬೇಕಾದರೆ ಮಗುವಿಗೆ ಮೂರು ವರ್ಷ, ಹತ್ತು ತಿಂಗಳು ಕಳೆದಿರಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ.

ಒಂದನೇ ತರಗತಿಗೆ 5 ವರ್ಷ 5 ತಿಂಗಳು

ಕಳೆದ ಒಂದೆರೆಡು ವಾರದಿಂದ ವಯೋಮಿತಿ ವಿಚಾರವಾಗಿ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮ ತಂದಿರುವುದರಿಂದ ಮಕ್ಕಳ ವಯೋಮಿತಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ, ಶಾಲಾ ಮುಖ್ಯಶಿಕ್ಷಕರು ಮಕ್ಕಳನ್ನು ಸೇರಿಸಿಕೊಳ್ಳಲು ನಿರಾಕರಿಸುತ್ತಿದ್ದರು. ಇದರಿಂದ ಬೇಸತ್ತ ಸಾರ್ವಜನಿಕರು ಶಿಕ್ಷಣ ಇಲಾಖೆಗೆ ದೂರುಗಳನ್ನು ಸಲ್ಲಿಸಿದ್ದರು.

ವಿಧಾನ ಪರಿಷತ್ತಿನಲ್ಲಿಯೂ ಈ ಬಗ್ಗೆ ನಡೆದಿದ್ದ ಚರ್ಚೆಯಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಆದೇಶ ಮಾರ್ಪಡಿಸುವ ಬಗ್ಗೆ ಪುನರ್ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 1ನೇ ತರಗತಿ ಸೇರ್ಪಡೆಗೆ ವಯೋಮಿತಿ ಇಳಿಕೆ ಮಾಡಲು ಸೂಚಿಸಿದ್ದಾರೆ. ಆದರೆ, ಎಲ್ ಕೆಜಿ ಸೇರಿದಂತೆ ಪೂರ್ವ ಪ್ರಾಥಮಿಕ ತರಗತಿಗಳ ಪ್ರವೇಶಕ್ಕೆ 3 ವರ್ಷ 10 ತಿಂಗಳು ತುಂಬಿರಬೇಕೆಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ'' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009ರ ಕ03ರನ್ವಯ 6ರಿಂದ 14 ವರ್ಷದೊಳಗೆ ಪ್ರತಿಯೊಂದು ಮಗುವು ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ಪಡೆಯಲು ಅವಕಾಶ ನೀಡಲಾಗಿದೆ.

ಈಗ ಶಾಲೆಗೆ ಸೇರಿಸಲು ವಯಸ್ಸು

ಪೂರ್ವ ಪ್ರಾಥಮಿಕ (ಎಲ್ ಕೆಜಿ) ಹಾಗೂ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಲು ಕರ್ನಾಟಕ ಶಿಕ್ಷಣ ಕಾಯಿದೆ1983ರ ನಿಯಮ-20೦ರ ಅನ್ವಯ ಎಲ್ ಕೆಜಿಗೆ 3 ವರ್ಷ 10 ತಿಂಗಳು ಹಾಗೂ ಒಂದನೇ ತರಗತಿ 5 ವರ್ಷ 5 ತಿಂಗಳು.

ಇದರ ಜತೆಯಲ್ಲಿ ಮಗುವಿನ ಜನ್ಮ ದಿನಾಂಕ ಪತ್ರ ಇಲ್ಲಎನ್ನುವ ಕಾರಣಕ್ಕೂ ಯಾವುದೇ ಮಗುವನ್ನು ಶಾಲಾ ದಾಖಲಾತಿ ಮಾಡಲು ನಿರಾಕರಿಸುವಂತಿಲ್ಲ. ಹುಟ್ಟಿದ ದಿನಾಂಕದ ಬಗ್ಗೆ ಅಧಿಕೃತ ದಾಖಲೆ ಇಲ್ಲದೇ ಹೋದರೂ ಕೂಡ ಪೋಷಕರು ಸ್ವಯಂ ಘೋಷಣಾ ಲಿಖಿತ ಹೇಳಿಕೆಯನ್ನು ಪಡೆದುಕೊಂಡು ದಾಖಲಾತಿಯನ್ನು ಮಾಡಿಕೊಳ್ಳಬೇಕು ಎಂದು ಜನವರಿ ತಿಂಗಳಿನಲ್ಲಿ ಹೊರಡಿಸಿದ್ದ ಆದೇಶದಲ್ಲಿ ತಿಳಿಸಿಲಾಗಿದೆ

English summary
Finally department of education has reduced the age limit of class 1 admissions. Children who born before 2012 January can eligible to join class 1.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia