ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ಗೆ ಮುಂದಾದ ಫ್ರಾನ್ಸ್

Posted By:

ಮೊಬೈಲ್ ಫೋನ್ ಗೀಳು ಮಕ್ಕಳ ವಿಕಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಫ್ರಾನ್ಸ್ ಸರಕಾರ ಮುಂದಾಗಿದೆ.

2018 ರಲ್ಲಿ ಬಿಎಸ್ಸಿಯ ಈ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ

2018 ರ ಸೆಪ್ಟೆಂಬರ್ ನಿಂದ ಮಾಧ್ಯಮಿಕ ಮತ್ತು ಪ್ರೌಢಶಾಲೆಗಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ಸರ್ಕಾರ ಪೂರ್ಣ ಪ್ರಮಾಣದಲ್ಲಿ ನಿರ್ಬಂಧ ಹೇರಲಿದೆ ಎಂದು ಅಲ್ಲಿನ ಶಿಕ್ಷಣ ಸಚಿವಾಲಯ ಹೇಳಿದೆ.

ಎನ್‌ಟಿಎ ಮೂಲಕ ವರ್ಷದಲ್ಲಿ ಎರಡು ಬಾರಿ ಜೆಇಇ ಮತ್ತು ನೀಟ್

ಶಾಲೆಗಳಲ್ಲಿ ಮೊಬೈಲ್ ಬ್ಯಾನ್

ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್ ನ ಬಹುತೇಕ ಶಾಲೆಗಳಲ್ಲಿ ತರಗತಿಯೊಳಗೆ ವಿದ್ಯಾರ್ಥಿಗಳು ಕರೆ ಮಾಡುವುದು ವಾಟ್ಸಾಪ್ ನಲ್ಲಿ ಸಂದೇಶ ರವಾನಿಸುವುದು ಹೆಚ್ಚುತ್ತಿದೆ ಎಂದು ಅಧ್ಯಯನ ವರದಿ ಯೊಂದು ಹೇಳಿತ್ತು. ಹೀಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಫ್ರಾನ್ಸ್ ನಲ್ಲಿ 12 ರಿಂದ 17 ವರ್ಷದೊಳಗಿನ ಶೇ.93 ರಷ್ಟು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಗಳಿವೆ. ಶಾಲೆಯೊಳಗೆ ಊಟ ಹಾಗೂ ಆಟದ ಸಮಯದ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಅನ್ನು ವಿಪರೀತವಾಗಿ ಬಳಸುತ್ತಿರುವುದರಿಂದ ಆಟ-ಪಾಠಗಳಲ್ಲಿ ನಿರಾಸಕ್ತಿ ತೋರುತ್ತಿರುವುದು ಹೆಚ್ಚುತ್ತಿದೆ.

ಈಗಾಗಲೇ ತರಗತಿಯೊಳಗೆ ಮೊಬೈಲ್ ಪ್ರವೇಶ ನಿಷೇಧಿಸಿರುವ ಸರಕಾರ ಇನ್ನುಮುಂದೆ ತರಗತಿಯ ಹೊರಗೆ ಬಿಡುವಿನ ವೇಳೆಯಲ್ಲೂ ಅದನ್ನು ಬಳಸದಂತೆ ನಿರ್ಬಂಧ ಹೇರಲಿದೆ.

ಈ ಹೊಸ ನಿಯಮ 2018 ಸೆಪ್ಟೆಂಬರ್ ನಿಂದ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವ ಜೀನ್ ಮೈಕೆಲ್ ಬ್ಲ್ಯಾಂಕರ್ ಹೇಳಿದ್ದಾರೆ.

ಪೋಷಕರಿಂದ ಆಕ್ಷೇಪ

ಮೊಬೈಲ್ ನಿಷೇಧಿಸುವ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಮೊಬೈಲ್ ಅತ್ಯವಶ್ಯ ಎನಿಸಿಕೊಳ್ಳುತ್ತದೆ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಇದರ ನಿಷೇಧ ಒಪ್ಪಿತವಲ್ಲ ಎಂಬ ವಾದವು ಪೋಷಕರ ಒಂದು ವರ್ಗದಿಂದ ಕೇಳಿಬಂದಿದೆ.

English summary
France’s education minister announced that mobile phones will be banned from primary, junior, and middle schools, calling it a matter of “public health.”

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia