ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ

ಸಿಐಪಿಇಟಿ ಮೂಲಕ 6 ತಿಂಗಳ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ ಮಷಿನ್ ಆಪರೇಟರ್ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದ ಎಲ್ಲಾ ವರ್ಗದ 20 ನಿರುದ್ಯೋಗಿ ಯುವಕ ಯುವತಿಯರುಗಳಿಗೆ ಉಚಿತ ಊಟ ಮತ್ತು ವಸತಿಗಳೊಂದಿಗೆ ಆಯೋಜಿಸಿದೆ.

ಬೆರ್ಲೋಷೆರ್ ಇಂಡಿಯಾ ಆಡಿಟಿವ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಮುಂಬೈ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ 2016 -17ನೇ ಸಾಲಿನ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ.

ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿ ಮೈಸೂರಿನಲ್ಲಿರುವ ಭಾರತ ಸರ್ಕಾರದ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆಯ (ಸಿಐಪಿಇಟಿ) ಮೂಲಕ 6 ತಿಂಗಳ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ ಮಷಿನ್ ಆಪರೇಟರ್, ಪ್ಲಾಸ್ಟಿಕ್ ಎಕ್ಸ್ಟ್ರುಷನ್ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದ ಎಲ್ಲಾ ವರ್ಗದ 20 ನಿರುದ್ಯೋಗಿ ಯುವಕ ಯುವತಿಯರುಗಳಿಗೆ ಉಚಿತ ಊಟ ಮತ್ತು ವಸತಿಗಳೊಂದಿಗೆ ಆಯೋಜಿಸಿದೆ.

ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ

ತರಬೇತಿ ವಿವರ

ತರಬೇತಿ ಹೆಸರು: ಮಷಿನ್ ಆಪರೇಟರ್-ಪ್ಲಾಸ್ಟಿಕ್ ಎಕ್ಸ್ ಟ್ರೂಷನ್
ತರಬೇತಿ ಅವಧಿ: 6 ತಿಂಗಳು
ವಿದ್ಯಾರ್ಹತೆ: ಎಂಟನೇ ತರಗತಿ/ಎಸ್ ಎಸ್ ಎಲ್ ಸಿ/ಐಟಿಐ/ಪಿಯುಸಿ/ಡಿಗ್ರಿ/ಡಿಪ್ಲೊಮಾ
ವಯೋಮಿತಿ: 18 ರಿಂದ 28 ವರ್ಷ
ಫಲಾನುಭವಿಗಳ ಸಂಖ್ಯೆ : 20

ತರಬೇತಿ ಅವಧಿಯಲ್ಲಿ ಬೇಸಿಕ್ ಕಂಪ್ಯೂಟರ್ ಹಾಗೂ ಸ್ಪೋಕನ್ ಇಂಗ್ಲಿಷ್ ತರಬೇತಿ ಕೂಡ ನೀಡಲಾಗುವುದು. ಹಾಗೂ ತರಬೇತಿ ಮುಗಿದ ನಂತರ ಉದ್ಯೋಗಾವಕಾಶ ಕೂಡ ಕಲ್ಪಿಸಲಾಗುವುದು.

ಆಯ್ಕೆ ವಿಧಾನ

ಇಚ್ಛೆಯುಳ್ಳ ಅಭ್ಯರ್ಥಿಗಳು ವಿದ್ಯಾರ್ಹತೆ, ಡೇಟ್ ಆಫ್ ಬರ್ತ್ ಪ್ರೂಫ್, ಐಡಿ ಪ್ರೂಫ್ (ಆಧಾರ್ ಕಾರ್ಡ್/ವೋಟರ್ ಐಡಿ)ಗೆ ಸಂಬಂಧಿಸಿದ ಎಲ್ಲಾ ಒರಿಜಿನಲ್ ದಾಖಲೆಗಳು, 4 ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಫೋಟೋ ಮತ್ತು ಲಗ್ಗೇಜ್ ಗಳೊಂದಿಗೆ ದಿನಾಂಕ 22 -03 -2017 ರಿಂದ ದಿನಾಂಕ 31 -03 -2017 ರ ಒಳಗೆ ನೇರವಾಗಿ ಸಿಐಪಿಇಟಿ ಮೈಸೂರಿನಲ್ಲಿ ತರಬೇತಿಗೆ ನೋಂದಾಯಿಸಿಕೊಳ್ಳತಕ್ಕದ್ದು.

ಸೂಚನೆ

ನಿಗದಿತ ಗುರಿಯ 20 ಅಭ್ಯರ್ಥಿಗಳಾದುದರಿಂದ ಮೊದಲು ನೋಂದಾಯಿಸಿಕೊಳ್ಳುವವರಿಗೆ ಮಾತ್ರ ಆದ್ಯತೆ ನೀಡಲಾಗುವುದು.

ತರಬೇತಿ ವಿಳಾಸ

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಾಜಿ (ಸಿಐಪಿಇಟಿ)
ನಂ.437/A , ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾ, ಮೈಸೂರು-570016
ದೂರವಾಣಿ ಸಂಖ್ಯೆ: 0821 -2510619
ವೆಬ್ಸೈಟ್ ವಿಳಾಸ್: www.cipet.gov.in

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (CIPET)

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (CIPET)ಯನ್ನು ಭಾರತ ಸರ್ಕಾರವು ಚೆನೈ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಯುಎನ್ಡಿಪಿ) ನೆರವಿನಿಂದ 1968 ರಲ್ಲಿ ಸ್ಥಾಪಿಸಲಾಯಿತು. ದೇಶದಲ್ಲಿ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ ಮತ್ತು ತಂತ್ರಾಂಶದ ಕ್ಷೇತ್ರದಲ್ಲಿ ಮಾನವಶಕ್ತಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಸಿಐಪಿಇಟಿ ಹೊಂದಿದೆ.

ಸಂಸ್ಥೆಯು ಆರಂಭದಲ್ಲಿ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಸಹಯೋಗದೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು, 1968 ಮತ್ತು 1973 ರ ಅವಧಿಯಲ್ಲಿ ಸಂಸ್ಥೆಯ ಹಲವು ಯೋಜನೆಗಳು ತನ್ನ ಗುರಿಗಳನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು. ಅಲ್ಲದೇ ಇದು ವಿಶ್ವದಾದ್ಯಂತ ಜಾರಿಗೆ ಬಂದ ಅತ್ಯಂತ ಯಶಸ್ವಿ ಯುಎನ್ಡಿಪಿ ಯೋಜನೆಗಳಲ್ಲಿ ಒಂದಾಗಿದೆ.

ಇಂದು CIPET ಸಚಿವಾಲಯ ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್, ಸರ್ಕಾರದ ಆಶ್ರಯದಲ್ಲಿ ಒಂದು ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿದೆ. ಭಾರತದ ಕೌಶಲ್ಯ ಅಭಿವೃದ್ಧಿ ಸಂಪೂರ್ಣವಾಗಿ ಮೀಸಲಾಗಿದೆ.

ತಂತ್ರಜ್ಞಾನ ಬೆಂಬಲ ಸೇವೆಗಳು, ಶೈಕ್ಷಣಿಕ ಮತ್ತು ಸಂಶೋಧನೆಗಾಗಿ ದೇಶಾದ್ಯಂತ - CIPET 28 ಕೇಂದ್ರಗಳಿಂದ ಇದು ಕಾರ್ಯ ನಿರ್ವಹಿಸುತ್ತಿದ್ದು, 5 ಉನ್ನತ ಕಲಿಕೆ ಕೇಂದ್ರಗಳು, 12 ಇತರೆ ಕಲಿಕೆ ಕೇಂದ್ರಗಳು, 3 ವಿಶೇಷ ಕೇಂದ್ರಗಳು, 2 ಆರ್ & ಡಿ ವಿಂಗ್ಸ್, 5 ವೊಕೇಶನಲ್ ತರಬೇತಿ ಕೇಂದ್ರ, 1 ಪೆಟ್ರೋರಾಸಾಯನಿಕ ಡೇಟಾ ಸೇವೆಗಳೊಂದಿಗೆ ಪಾಲಿಮರ್ ಅಗತ್ಯಗಳನ್ನು ಪೂರೈಸುತ್ತಿದ್ದು ಇನ್ನು 11 ಕೇಂದ್ರಗಳು ಪ್ರಕ್ರಿಯೆಯ್ಲಿವೆ.

For Quick Alerts
ALLOW NOTIFICATIONS  
For Daily Alerts

English summary
SKILL DEVELOPMENT TRAINING PROGRAMME SPONSORED BY M/S. BAERLOCHER INDIA ADDITIVES PVT. LTD, MUMBAI LIMITED
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X