ಗೇಟ್ ಪರೀಕ್ಷೆ 2020: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ,ದೆಹಲಿ ನಡೆಸುವ 2020ರ ಗೇಟ್‌ ಪರೀಕ್ಷೆಯ ಪ್ರಮುಖ ದಿನಾಂಕಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಿಸಲಾಗಿದೆ. ಗ್ರಾಜ್ಯುಯೇಶನ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಇಂಜಿನೀಯರಿಂಗ್ ಇದೊಂದು ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ.

ಗೇಟ್ ಪರೀಕ್ಷೆ 2020ರ ಸಂಪೂರ್ಣ ಮಾಹಿತಿ ಇಲ್ಲಿದೆ

ಮಾಸ್ಟರ್ ಹಾಗೂ ಡೈರೆಕ್ಟ್ ಡಾಕ್ಟರೊಲ್ ಪ್ರೋಗ್ರಾಂಗಳಾದ ಇಂಜಿನೀಯರಿಂಗ್, ಟೆಕ್ನಾಲಾಜಿ, ಆರ್ಕಿಟೆಕ್ಚರ್, ಮತ್ತು ಸೈನ್ಸ್ ವಿಷಯಕ್ಕೆ ಸಂಬಂಧಪಟ್ಟ ಡಾಕ್ಟೋರಲ್ ಪ್ರೋಗ್ರಾಂಗಳಿಗೆ ವಿದ್ಯಾರ್ಥಿಗಳ ಅಡ್ಮಿಷನ್ ಮಾಡಲು ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಡೀಟೆಲ್ಸ್ ಕೆರಿಯರ್ ಇಂಡಿಯಾ ಇದೀಗ ನಿಮಗೆ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ವಿದ್ಯಾರ್ಹತೆ :

ಬಿಇ, ಬಿಟೆಕ್‌, ಬಿಫಾರ್ಮ,, ಎಂಎಸ್ಸಿ, ಎಂಸಿಎ, ಎಂಇ, ಎಂಟೆಕ್‌, ಇಂಟಿಗ್ರೇಟೆಡ್‌, ಆರ್ಕಿಟೆಕ್ಚರ್‌ನಲ್ಲಿ ಪದವಿ, , ಬಿಎಸ್‌, , ಎಂಎಸ್‌ ಪದವಿ ಪಡೆದವರು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಈ ಪದವಿಯ ಅಂತಿಮ ವರ್ಷದಲ್ಲಿರುವವರೂ ಅರ್ಜಿ ಸಲ್ಲಿಸಬಹುದು.

ವಯೋಮಿತಿ :

ಪರೀಕ್ಷೆ ಬರೆಯಲು ಯಾವುದೇ ವಯೋಮಿತಿ ನಿಗದಿಪಡಿಸಲಾಗಿರುವುದಿಲ್ಲ.

ಪರೀಕ್ಷೆಗೆ ಸಂಬಂಧಪಟ್ಟಂತೆ ಪ್ರಮುಖ ದಿನಾಂಕಗಳು:

ಗೇಟ್ 2020 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಸೆಪ್ಟೆಂಬರ್ 3,2019
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 5,2019
ಎಕ್ಸಾಮ್ ಸೆಂಟರ್ ಬದಲು ಮಾಡಲು ಕೋರಿಕೆಗೆ ಕೊನೆಯ ದಿನಾಂಕ: ನವೆಂಬರ್ 15,2019
ಮಾಕ್ ಟೆಸ್ಟ್ : ನವಂಬರ್ 2019
ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಪ್ರಾರಂಭ ದಿನಾಂಕ: ಜನವರಿ 3, 2020
ಪರೀಕ್ಷಾ ದಿನಾಂಕ: 2020 ರ ಫೆಬ್ರವರಿ 1, 2,8 ಮತ್ತು 9
ಸ್ಕೋರ್ ಕಾರ್ಡ್ ರಿಲೀಸ್: ಮಾರ್ಚ್ 20, 2019 ರಿಂದ ಮಾರ್ಚ್ 31,2020
ಕೌನ್ಸಿಲಿಂಗ್ ಪ್ರಾರಂಭ: 2019 ಎಪ್ರಿಲ್ ಮೊದಲ ವಾರ

ಗೇಟ್ ಪರೀಕ್ಷಾ ಮಾದರಿ :

ಎಕ್ಸಾಂ ಮೋಡ್: ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ
ಸಮಯ: ಪರೀಕ್ಷೆ ಒಟ್ಟು ಅವಧಿ 3 ಗಂಟೆ
ಪ್ರಶ್ನೆ ಸಂಖ್ಯೆ: ಒಟ್ಟು 65 ಪ್ರಶ್ನೆಗಳು
ಅಂಕ: 100 ಅಂಕಗಳು

ಪರೀಕ್ಷಾ ಕೇಂದ್ರಗಳು :

ಆನ್‌ಲೈನ್‌ನಲ್ಲಿಯೇ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಯು ತಾವು ಯಾವ ವಲಯದ, ಯಾವ ನಗರದಲ್ಲಿ ಪರೀಕ್ಷೆ ಎದುರಿಸುತ್ತೆನೆ ಎಂಬುದನ್ನು ನಿರ್ಧರಿಸಿ, ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.

ಪರೀಕ್ಷಾ ಶುಲ್ಕ:

ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ: ರೂ.1500/-
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ: ರೂ.750 /-
ದಂಡ ಶುಲ್ಕ: 500/-ರೂ
ಇನ್ನು ಈ ಪರೀಕ್ಷಗೆ ಭಾರತೀಯ ಮಾತ್ರವಲ್ಲದೇ ವಿದೇಶಿ ವಿದ್ಯಾರ್ಥಿಗಳು ಕೂಡಾ ಹಾಜರಾಗಬಹುದು.

ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ವಿಸಿಟ್ ಮಾಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಸ್ಟೆಪ್ಟಂಬರ್ 3,2019 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿ ಅಕ್ಟೋಬರ್ 5,2019 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಜತೆ ನಿಮ್ಮ ಭಾವಚಿತ್ರ ಕೂಡಾ ಅಪ್‌ಲೋಡ್ ಮಾಡತಕ್ಕದ್ದು. ಜೊತೆಗೆ ವಿದ್ಯಾರ್ಹತೆಗೆ ಸಂಬಂಧಪಟ್ಟ ಸರ್ಟಿಫಿಕೇಟ್ ಕೂಡಾ ಅಪ್‌ಲೋಡ್ ಮಾಡತಕ್ಕದ್ದು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ವೇಳೆ ಮೂರು ಪರೀಕ್ಷಾ ಕೇಂದ್ರಗಳನ್ನ ಆಯ್ಕೆ ಮಾಡಿಕೊಳ್ಳತಕ್ಕದ್ದು. ಅರ್ಜಿ ಸಲ್ಲಿಕೆ ಬಳಿಕ ಒಂದು ಕಾಪಿಯನ್ನ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ. ಇನ್ನು ಅರ್ಜಿ ಶುಲ್ಕ ವಿಚಾರಕ್ಕೆ ಸಂಬಂಧಪಟ್ಟಂತೆ, ಆನ್‌ಲೈನ್ ಮೂಲಕ ಅಂದ್ರೆ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಇಲ್ಲ ಕ್ರೆಡಿಟ್ ಕಾರ್ಡ್ ಮೂಲಕ ಅರ್ಜಿ ಶುಲ್ಕ ಪಾವತಿಸತಕ್ಕದ್ದು. ಒಮ್ಮೆ ಪಾವತಿಸಿದ ಶುಲ್ಕ ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.

ಗೇಟ್ ಪರೀಕ್ಷೆ :

ಎಂಜಿನಿಯರಿಂಗ್‌ ಅಭ್ಯರ್ಥಿಗಳಿಗೆ ಉದ್ಯೊಗ ಪಡೆಯಲು, ಅಂತೆಯೇ ಉನ್ನತ ಶಿಕ್ಷ ಣಕ್ಕೆ ಇದು ವೇದಿಕೆಯಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಪಡೆಯಲಿದ್ದಾರೆ.

ಅಲ್ಲದೆ, ಸರಕಾರದ ವಿವಿಧ ಸ್ಕಾಲರ್‌ಶಿಪ್‌, ಸಹಾಯ ಧನ ಪಡೆಯಲು ಅರ್ಹರಾಗುತ್ತಾರೆ. ಉದ್ಯೊಗ ಆಕಾಂಕ್ಷಿಗಳಿಗೆ ಇದು ಅರ್ಹತಾ ಪರೀಕ್ಷೆಯಾಗಿರುತ್ತದೆ.

ತೈಲ ಕಂಪನಿಗಳು, ಬಾಬಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌, ಬಿಎಚ್‌ಇಎಲ್‌, ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು 'ಗೇಟ್‌' ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ರ್ಯಾಂಕಿಂಗ್‌ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿವೆ. ಇದೇ ರ್ಯಾಂಕಿಂಗ್‌ ಮೇಲೆ ವೇತನ ನಿಗದಿಪಡಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ http://gate.iitd.ac.in/ ಗಮನಿಸಿ.

ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಲು ಮುಂದೆ ನೋಡಿ

For Quick Alerts
ALLOW NOTIFICATIONS  
For Daily Alerts

English summary
Here we are giving complete details of GATE 2020 exam and important dates
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X