ಕೃಷಿ ವಿಶ್ವವಿದ್ಯಾಲಯ ಪ್ರಾಯೋಗಿಕ ಪರೀಕ್ಷೆ ಅಧಿಸೂಚನೆ

ಕರ್ನಾಟಕ ಕೃಷಿ/ತೋಟಗಾರಿಕೆ/ಪಶುಸಂಗೋಪನೆ ವಿಶ್ವವಿದ್ಯಾಲಯಗಳು ಸ್ನಾತಕ ಪದವಿಗಳಿಗೆ ಕೃಷಿಕರ ಕೋಟಾದಡಿಯಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು.

 

ಕರ್ನಾಟಕ ಕೃಷಿ/ತೋಟಗಾರಿಕೆ/ಪಶುಸಂಗೋಪನೆ ವಿಶ್ವವಿದ್ಯಾಲಯಗಳಲ್ಲಿ ಕೃಷಿಕರ ಮಕ್ಕಳಿಗಾಗಿ ದಿನಾಂಕ: 20-05-2017 ರಂದು ನಡೆಸುವ ಪ್ರಾಯೋಗಿಕ ಪರೀಕ್ಷೆಯು, ಕರ್ನಾಟಕ ಪ್ರಾಧಿಕಾರದ ಪ್ರಕಟಣೆಯಂತೆ ಎಲ್ಲಾ 14 ಕೇಂದ್ರಗಳಲ್ಲಿ ಬೆಳಿಗ್ಗೆ 9 :00 ಗಂಟೆಯಿಂದ ನಡೆಯುತ್ತದೆ.

ವ್ಯವಸಾಯಗಾರರ ದೃಢೀಕರಣ ಪ್ರಮಾಣ ಪತ್ರ ಮತ್ತು ಇತರೆ ಸಂಬಂಧಿತ ದಾಖಲೆಗಳನ್ನು ದಿನಾಂಕ 05-05-2017 ರಿಂದ 17-05-2017 ರವರೆಗೆ ನಿಗದಿತ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ (ಕೆಲಸದ ದಿನಗಳಲ್ಲಿ) ಕಛೇರಿಯ ಅವಧಿಯಲ್ಲಿ (ಬೆಳಿಗ್ಗೆ 9 ರಿಂದ ಮಧ್ಯಾಹ್ನ 3:30ರವರೆಗೆ) ಮಾತ್ರ ಪರಿಶೀಲಿಸಲಾಗುವುದು.

ಕೃಷಿ ವಿವಿ ಪ್ರಾಯೋಗಿಕ ಪರೀಕ್ಷೆ ಅಧಿಸೂಚನೆ

ಪರಿಶೀಲನೆಗೆ ತರಬೇಕಾದ ಮೂಲದಾಖಲಾತಿಗಳು

  • ಸಿಇಟಿ ಪ್ರವೇಶ ಪತ್ರ (admission Ticket)
  • ವ್ಯವಸಾಯಗಾರರ ಪ್ರಮಾಣ ಪತ್ರ- 3 (ಅವಿಭಾಜ್ಯ ಕುಟುಂಬವಾದಲ್ಲಿ ಕಂದಾಯ ಇಲಾಖೆಯಿಂದ ಒದಗಿಸುವ ವಂಶವೃಕ್ಷ ಪ್ರಮಾಣ ಪತ್ರ)
  • ವೇತನ ದೃಡೀಕರಣ ಪ್ರಮಾಣ ಪತ್ರ
  • ಖಾಸಗಿ ವೃತ್ತಿಯಿಂದ ಆದಾಯದ ಪತ್ರ
  • ಅಫಿಡವಿಟ್ (ಕೇವಲ 8ಇ ಮತ್ತು 8ಈ ಒಟ್ಟು ಆದಾಯಕ್ಕೆ ಸಂಬಂಧಿಸಿದಂತೆ ಮಾತ್ರ. first party will be candidates & second party will be respective Universities)
  • ಡಿಮಾಂಡ್ ಡ್ರಾಫ್ಟ್ ರೂ.500/- ಸಾಮಾನ್ಯ ಮತ್ತು ಇತರೆ (ರೂ. 250/- ಪ.ಜಾ/ಪ.ಪ/ಪ್ರವರ್ಗ-1)

ಹೆಚ್ಚಿನ ಮಾಹಿತಿಗಾಗಿ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕೃಷಿ ವಿಶ್ವವಿದ್ಯಾಲಯಗಳ ಅಂತರ್ಜಾಲಗಳನ್ನು ಸಂಪರ್ಕಿಸುವುದು.

 

ಡಿಡಿ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
ಎಸ್.ಸಿ/ಎಸ್.ಟಿ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.250/-
ಡಿಡಿಯು ದಿನಾಂಕ 05-05-2017 ರಿಂದ 17-05-2017 ರ ಒಳಗೆ ಇರಬೇಕು

ವಿಶೇಷ ಸೂಚನೆ

ಅಭ್ಯರ್ಥಿಗಳು ಕೃಷಿ ವಿಶ್ವವಿದ್ಯಾಲಯಗಳಿಗೆ ಒದಗಿಸುವ ಯಾವುದೇ ಮಾಹಿತಿ/ದಾಖಲೆಗಳು/ಪ್ರಮಾಣ ಪತ್ರಗಳು ತಪ್ಪು ಎಂದು ಯಾವುದೇ ಹಂತದಲ್ಲಿ ತಿಳಿದು ಬಂದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಅಂತಹ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕನ್ನು ಹೊಂದಿರುತ್ತವೆ.

ಸಂಪೂರ್ಣ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಜಿಕೆವಿಕೆ

ಬೆಂಗಳೂರು ಕೃಷಿ ವಿವಿಯು 1899 ರಲ್ಲಿ 30 ಎಕರೆ ಪ್ರದೇಶದಲ್ಲಿ ಸಂಶೋಧನಾ ಪ್ರಯುಕ್ತ ಬೆಂಗಳೂರಿನಲ್ಲಿ ಆರಂಭವಾಯಿತು. ವಿವಿಗೆ ಜಾಗವನ್ನು ಅಂದಿನ ಮೈಸೂರು ಸಂಸ್ಥಾನದ ಮಹಾರಾಣಿ ಕೆಂಪ ನಂಜಾಮ್ಮಾಣಿ ವಾಣಿ ವಿಲಾಸ ಸನ್ನಿದಿಯವರು ದಾನವಾಗಿ ನೀಡಿದರು. ಜರ್ಮನ್ ಮೂಲದ ಡಾ.ಲೆಹ್ಮನ್ ಮೊದಲ ನಿರ್ದೇಶಕರಾರಿ ಇಲ್ಲಿಯ ಪ್ರಯೋಗಶಾಲೆಗೆ ಚಾಲನೆ ನೀಡಿದರು. 1913 ರಲ್ಲಿ ದಿವಾನ್ ಸರ್ ಎಂ ವಿಶ್ವೇಶ್ವರಯ್ಯರವರ ನೇತೃತ್ವದಲ್ಲಿ ಕೃಷಿ ವಸತಿಶಾಲೆಯನ್ನು ಆರಂಭಿಸಲಾಯಿತು. 1920 ರಲ್ಲಿ ಶಾಲೆಯನ್ನು ಕಾಲೇಜಾಗಿ ಮಾರ್ಪಡಿಸಲಾಯಿತು.

1946ರಲ್ಲಿ ನಾಲ್ಕು ವರ್ಷಗಳ ಪದವಿ ಕೋರ್ಸ್ ಆರಂಭಿಸಿದ ಈ ಕೃಷಿ ಕಾಲೇಜು 1964 ರಲ್ಲಿ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿತು.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ ಗಮನಿಸಿ www.uasbangalore.edu.in

For Quick Alerts
ALLOW NOTIFICATIONS  
For Daily Alerts

English summary
SPECIAL INSTRUCTIONS TO THE APPLICANTS WRITING PRACTICAL TESTS SEEKING ADMISSION UNDER AGRICULTRIST QUOTA TO UNDER GRADUATE DEGREE PROGRAMS IN FARM UNIVERSITES
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X