Women's Day 2021 Google Doodle: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಗೂಗಲ್ ಶಿಕ್ಷಣ, ನಾಗರಿಕ ಹಕ್ಕುಗಳು, ವಿಜ್ಞಾನ, ಕಲೆ ಮತ್ತು ಉತ್ತಮ ಸಾಧನೆ ತೋರಿದ ಮಹಿಳೆಯರಿಗೆ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

ಮಹಿಳಾ ದಿನಾಚರಣೆ ಪ್ರಯುಕ್ತ ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್

ಡೂಡಲ್ ಮೇಲೆ ಕ್ಲಿಕ್ ಮಾಡಿದಾಗ ಶತಮಾನಗಳಿಂದ ಮಹಿಳೆಯರು ಬೆಳೆದುಬಂದ ಹಾದಿಯನ್ನು ವೀಡಿಯೋ ಮೂಲಕ ತೋರಿಸಲಾಗಿದೆ. ವೀಡಿಯೋದಲ್ಲಿ ಶಿಕ್ಷಣ, ನಾಗರಿಕ ಹಕ್ಕುಗಳು, ಕಲೆ ಮತ್ತು ವಿಜ್ಞಾನ ಕ್ಷೇತ್ರಗಳಿಗೆ ಕಾಲಿಟ್ಟ ಮೊದಲ ಮಹಿಳೆಯರನ್ನು ಇದರಲ್ಲಿ ಬಿತ್ತರಿಸಿದೆ. ಇದಲ್ಲದೆ ಅಕಾಡೆಮಿ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗಾಗಿ ಕೂಡ ಸಮರ್ಪಿಸಲಾಗಿದೆ. ಜೊತೆಗೆ ಪುರುಷರ ಕೈಹಿಡಿದಿರುವ ಮಹಿಳೆಯರನ್ನು ನೀವು ನೋಡಬಹುದು, ಇದು ಪುರುಷರ ಸಾಧನೆಯ ಹಿಂದೆ ಮಹಿಳೆ ಇದ್ದಾರೆ ಎಂದು ಹೇಳುವುದು ಮಾತ್ರ ಅಲ್ಲದೆಯೇ ಪುರುಷರಷ್ಟೇ ಮಹಿಳೆಯು ಕೂಡ ಎತ್ತರಕ್ಕೆ ಬೆಳೆದಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ:

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿವರ್ಷ ಮಾರ್ಚ್ 8,2021ರಂದು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರಿಗಾಗಿ ಅರ್ಪಿಸಲಾಗಿದೆ.

2021ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಥೀಮ್:

ಈ ವರ್ಷದ ಮಹಿಳಾ ದಿನಾಚರಣೆಯ ಥೀಮ್ "ಸವಾಲು ಆಯ್ಕೆಮಾಡಿ" (#Choose to Challenge). ಸವಾಲಿನ ಜಗತ್ತಿನಲ್ಲಿ ಸವಾಲನ್ನು ಎದುರಿಸಿ ಮತ್ತು ಸವಾಲಿನಿಂದ ಬದಲಾವಣೆ ಸಾಧ್ಯ ಎನ್ನುವ ಉದ್ದೇಶವನ್ನು ಹೊಂದಿದೆ.

For Quick Alerts
ALLOW NOTIFICATIONS  
For Daily Alerts

English summary
Google celebrates international women's day 2021 with google doodle video highlights 'firsts' in women's history.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X