Teacher’s Day: ಶಿಕ್ಷಕರ ದಿನಾಚರಣೆಯ ಸಂಭ್ರಮ ಜೊತೆಗೆ ಈ ಬಾರಿಯ ಡೂಡಲ್ ಹೇಗಿದೆ ನೋಡಿ!

ಪ್ರತಿ ನಿತ್ಯ ಒಂದೊಂದು ವಿಶೇಷತೆಗಳನ್ನು ಹೊತ್ತ ತರುವ ಗೂಗಲ್ ಡೂಡಲ್ ಇಂದು ಶಿಕ್ಷಕರ ದಿನದ ವಿಶೇಷವಾಗಿ ಶಿಕ್ಷಣಕ್ಕೆ ಸಂಬಂಧಪಟ್ಟ ವಸ್ತುಗಳಿಂದ ರಚಿಸಲ್ಪಟ್ಟಿದೆ. ಈ ಮೂಲಕ ಭಾರತೀಯರಿಗೆ ಶಿಕ್ಷಕರ ದಿನದ ಗೌರವ ಸೂಚಿಸಿದೆ.

ಭಾರತದಾದ್ಯಂತ ಇಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವದ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಕೂಡ ವಿಭಿನ್ನವಾಗಿ ಭಾರತೀಯರಿಗೆ ಶಿಕ್ಷಕರ ದಿನದ ಶುಭಾಶಯಗಳನ್ನು ತಿಳಿಸಿದೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಗೂಗಲ್ ಡೂಡಲ್  ಹೇಗಿದೆ ನೋಡಿ !

ಪ್ರತಿ ನಿತ್ಯ ಒಂದೊಂದು ವಿಶೇಷತೆಗಳನ್ನು ಹೊತ್ತ ತರುವ ಗೂಗಲ್ ಡೂಡಲ್ ಇಂದು ಶಿಕ್ಷಕರ ದಿನದ ವಿಶೇಷವಾಗಿ ಶಿಕ್ಷಣಕ್ಕೆ ಸಂಬಂಧಪಟ್ಟ ವಸ್ತುಗಳಿಂದ ರಚಿಸಲ್ಪಟ್ಟಿದೆ. ಈ ಮೂಲಕ ಭಾರತೀಯರಿಗೆ ಶಿಕ್ಷಕರ ದಿನದ ಗೌರವ ಸೂಚಿಸಿದೆ.

ಕೆಂಪು ಬಣ್ಣದ ಅಕ್ಟೋಪಸ್ ಒಂದು ನೀರಿನೊಳಗೆ ನೀಲಿ ಹಲಗೆಯ ಮುಂದೆ ಗುರುವಿನ ಸ್ಥಾನದಲ್ಲಿ ನಿಂತುಕೊಂಡು ಮೀನುಗಳಿಗೆ ಸಂಗೀತ, ಗಣಿತ ಮತ್ತು ರಸಾಯನಶಾಸ್ತ್ರಸೇರಿದಂತೆ ವಿವಿಧ ವಿಷಯಗಳನ್ನು ವಿವರಿಸುವ ಮತ್ತು ಹೇಳಿಕೊಡುವ ಪ್ರಯತ್ನವನ್ನು ಮಾಡುವುದರ ಮೂಲಕ ದೇಶದ ಜನತೆಗೆ ಶಿಕ್ಷಕರ ಕರ್ತವ್ಯವನ್ನು ಪ್ರಸ್ತುತಪಡಿಸುತ್ತಿರುವುದಲ್ಲದೇ ಎಲ್ಲಾ ಶಿಕ್ಷಕರಿಗೆ ಗೂಗಲ್ ನಮನವನ್ನು ಸಲ್ಲಿಸುತ್ತಿದೆ.

ಭಾರತದಲ್ಲಿ ಶಿಕ್ಷಕರ ದಿನಾಚರಣೆ :

'ಡಾ. ಸರ್ವಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾದ ಸಂದರ್ಭದಲ್ಲಿ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ "ಸೆಪ್ಟೆಂಬರ್ 5"ನ್ನು 'ಶಿಕ್ಷಕರ ದಿನ'ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ ಅವರ ಜನ್ಮದಿನವನ್ನ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ವಿಶ್ವ ಶಿಕ್ಷಕರ ದಿನಾಚರಣೆ :

ಒಟ್ಟು 21 ದೇಶಗಳಲ್ಲಿ ಹಲವು ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿದೆ. 1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
In order to commemorate and instil the mood of Teacher's Day in India Google Doodle shows an animated, smiling red octopus performing multiple tasks using its tentacles, including conducting experiments, solving complex equations, taking notes as well as reading. India celebrates Teachers' Day every year to pay tribute to former president Dr Sarvepalli Radhakrishnan on his birth anniversary.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X