Google Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಹುಡುಕುತಾಣ ಗೂಗಲ್

ಗೂಗಲ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ ಎಂದು ಹೇಳಿದರೆ ತಪ್ಪಿಲ್ಲ..ಕಾರಣ ಇಂದಿನ ಅತ್ಯಾಧುನಿಕ ಯುಗದಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್‌ಗಳು ಅದರಲ್ಲೂ ಅಂತರ್ಜಾಲ ಬಳಕೆದಾರರೇ ಹೆಚ್ಚು...ಇಂತಹ ಸಂದರ್ಭದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ದಿನಕ್ಕೆ ಒಮ್ಮೆಯಾದರೂ ಸರ್ಚ್ ಎಂಜಿನ್ ಗೂಗಲ್ ಅನ್ನು ಬಳಕೆ ಮಾಡುತ್ತಲೇ ಇರುತ್ತೇವೆ.

21ರ ಹುಟ್ಟುಹಬ್ಬದ ಸಂಭ್ರದಲ್ಲಿರುವ ಗೂಗಲ್

 

ಇಂದು ಗೂಗಲ್ ತನ್ನ 21 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ನಮ್ಮ ಎಲ್ಲಾ ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನ ಕ್ಷಣಾರ್ಧದಲ್ಲಿ ಪರಿಹರಿಸುವ ಗೂಗಲ್‌ನ ಕೆಲವು ಅದ್ಭುತ ವೈಶಿಷ್ಟ್ಯಗಳನ್ನು ನೀವು ತಿಳಿಯಬೇಕಾ ? ಹಾಗಿದ್ದರೆ ಮುಂದೆ ಓದಿ.

ಗೂಗಲ್‌ನ ಪೋಷಕರು :

ಗೂಗಲ್‌ನ ಪೋಷಕರು :

ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಇಬ್ಬರೂ ಗೂಗಲ್‌ನ ಪೋಷಕರು. 1998 ರಲ್ಲಿ ಗೂಗಲ್ ಎಂಬ ಸರ್ಚ್ ಎಂಜಿನ್ (ಹುಡುಕು ತಾಣ) ಅನ್ನು ಇವರು ಪ್ರಾರಂಭಿಸಿದರು.ಜಗತ್ತಿನ ಎಲ್ಲ ಮಾಹಿತಿಯನ್ನು ಸಂಘಟಿತ ರೂಪದಲ್ಲಿ ಎಲ್ಲರಿಗೂ ಸಿಗುವ ಹಾಗೆ ಮಾಡುವ ಪ್ರಮುಖ ಗುರಿಯನ್ನು ಇಟ್ಟುಕೊಂಡು ಗೂಗಲ್ ಅನ್ನು ಪ್ರಾರಂಭಿಸಿದರು. ಆಗ ಇದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ಅವರು ಊಹಿಸಿರಲಿಲ್ಲ. ಗೂಗಲ್ ನೋಂದಣಿಗೊಂಡಿದ್ದು ಸೆಪ್ಟೆಂಬರ್ 7ಕ್ಕೆ ಆದರೂ ಇದು ಕಾರ್ಯಾರಂಭಗೊಂಡಿದ್ದು ಸೆ.27ಕ್ಕೆ. ಹೀಗಾಗಿ ಈ ದಿನವನ್ನು ಗೂಗಲ್​ ಜನ್ಮದಿನ ಎಂದು ಕರೆಯಲಾಗುತ್ತದೆ.

ಹುಡುಕು ತಾಣ ಗೂಗಲ್ :

ಹುಡುಕು ತಾಣ ಗೂಗಲ್ :

ವೆಬ್‌ಸೈಟ್‌ನಲ್ಲಿನ ಎಲ್ಲಾ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಲಭ್ಯವಾಗಿಸುವ ಉದ್ದೇಶದಿಂದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ಗೂಗಲ್ ಅನ್ನು ರಚಿಸಿದರು. 1996 ರಲ್ಲಿ ಅವರು 'ಬ್ಯಾಕ್‌ರಬ್' ಎಂಬ ಹುಡುಕು ತಾಣ (ಸರ್ಚ್ ಎಂಜಿನ್‌) ಯೋಜನೆಯನ್ನು ಪ್ರಾರಂಭಿಸಿದರು. ಮುಂದೆ ಇದೇ ಗೂಗಲ್ ಆಗಿ ಮಾರ್ಪಟ್ಟಿತು.

ಗೂಗಲ್ ನಾಮಕರಣ :
 

ಗೂಗಲ್ ನಾಮಕರಣ :

ಲ್ಯಾರಿ ಪೇಜ್ ಹಾಗೂ ಸೆರ್ಗೆ ಬಿನ್ ಇದಕ್ಕೆ ಗೂಗಲ್ ಎಂದು ಹೆಸರಿಟ್ಟವರು. ಗೂಗೊಲ್ (googol) ಎನ್ನುವುದು ಇದರ ಮೂಲ ಶಬ್ದ. ಗಣಿತದಲ್ಲಿ 10^100 ಎನ್ನುವ ಅರ್ಥವನ್ನು ಇದು ನೀಡಲಿದೆ. ಗೂಗಲ್ ಸರ್ಚ್‌ ಎಂಜಿನ್‌ ಅನ್ನು ಅಧಿಕೃತವಾಗಿ ಸೆಪ್ಟೆಂಬರ್ 1998 ರಲ್ಲಿ ಪ್ರಾರಂಭಿಸಲಾಯಿತು.

ಗೂಗಲ್‌ನ ಡೆವಲಪರ್ ಯಾರು ?

ಗೂಗಲ್‌ನ ಡೆವಲಪರ್ ಯಾರು ?

ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ 1996ರ ಜನವರಿಯಲ್ಲಿ ಗೂಗಲ್ ಸಂಶೋಧನಾ ಯೋಜನೆಯನ್ನು ಪ್ರಾರಂಭಿಸಿದರು ಎಂದು ನಾವು ಈಗಾಗಲೇ ನೋಡಿದ್ದೇವೆ. ಆದರೆ ಅವರೊಂದಿಗೆ, ಗೂಗಲ್ ಅನ್ನು ಸಂಪೂರ್ಣ ಸರ್ಚ್ ಎಂಜಿನ್ ಆಗಿ ಮಾಡಿದವರು ಸ್ಕಾಟ್ ಹಸನ್. ಸ್ಕಾಟ್ ಹಸನ್ ಈ ಸಂಶೋಧನಾ ಯೋಜನೆಗೆ ಪ್ರಮುಖ ಡೆವಲಪರ್‌ ಆಗಿದ್ದಾರೆ.

ಸ್ಕಾಟ್‌ನ ಹೆಸರು ಎಲ್ಲೂ ಇಲ್ಲ! :

ಸ್ಕಾಟ್‌ನ ಹೆಸರು ಎಲ್ಲೂ ಇಲ್ಲ! :

ಗೂಗಲ್‌ನ ಸೃಷ್ಟಿಕರ್ತನ ಹೆಸರು ಎಲ್ಲೂ ಇಲ್ಲವೇ! ಏಕೆ ?... ಎನ್ನುವುದಕ್ಕೆ ಉತ್ತರ ಇಲ್ಲಿದೆ. ಗೂಗಲ್ 1998 ರಲ್ಲಿ ಕಂಪನಿಯಾಗಿ ಪ್ರಾರಂಭವಾಗುತ್ತದೆ. ಅದಕ್ಕೂ ಮುಂಚೆಯೇ ಸ್ಕಾಟ್ ಹಸನ್ ಈ ಯೋಜನೆಯಿಂದ ಹೊರ ನಡೆಯುತ್ತಾರೆ. ಅವರು ರೊಬೊಟಿಕ್ಸ್ ವೃತ್ತಿಜೀವನವನ್ನು ಬಯಸಿದ್ದರು ಹಾಗಾಗಿ ಸ್ಕಾಟ್ ವಿಲೋ ಗ್ಯಾರೇಜ್ ಅನ್ನು 2006 ರಲ್ಲಿ ಪ್ರಾರಂಭಿಸಿದರು. ಅದಕ್ಕಾಗಿಯೇ ಗೂಗಲ್ ಸಂಸ್ಥಾಪಕರ ಹೆಸರುಗಳಲ್ಲಿ ಸ್ಕಾಟ್‌ ಹಸನ್‌ನ ಹೆಸರು ಕಾಣಿಸಿಕೊಂಡಿಲ್ಲ.

ಗೂಗಲ್‌ನ ಮೊದಲ ಉದ್ಯೋಗಿ :

ಗೂಗಲ್‌ನ ಮೊದಲ ಉದ್ಯೋಗಿ :

1998ರಲ್ಲಿ ಗೂಗಲ್ ಡೊಮೇನ್ ಅನ್ನು ಕಂಪನಿಯಾಗಿ ನೋಂದಾಯಿಸಲಾಯಿತು. ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಇಬ್ಬರೂ ಕ್ಯಾಲಿಫೋರ್ನಿಯಾದಲ್ಲಿ ಸ್ನೇಹಿತರ ಸ್ಥಳವೊಂದರಲ್ಲಿ ಗೂಗಲ್ ನ ಕೆಲಸವನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ, ಅವರು ಸ್ಟ್ಯಾನ್‌ಫೋರ್ಡ್‌ನಲ್ಲಿ ಓದುತ್ತಿದ್ದ ಸ್ನೇಹಿತ ಹಾಗೂ ಪಿಎಚ್‌ಡಿ ವಿದ್ಯಾರ್ಥಿ ಕ್ರೇಗ್ ಸಿಲ್ವರ್‌ಸ್ಟನ್‌ರನ್ನು ಗೂಗಲ್‌ನ ಉದ್ಯೋಗಿಯಾಗಿ ನೇಮಿಸಿಕೊಂಡರು.

100ಕ್ಕೂ ಹೆಚ್ಚು ಭಾಷೆಗಳ ರಾಜ :

100ಕ್ಕೂ ಹೆಚ್ಚು ಭಾಷೆಗಳ ರಾಜ :

ಇಂದು ಗೂಗಲ್ ಪ್ರಪಂಚದಾದ್ಯಂತ 100 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಪ್ರತಿವರ್ಷ ಟ್ರಿಲಿಯನ್ಗಟ್ಟಲೆ ಹುಡುಕಾಟ ಪ್ರಶ್ನೆಗಳಿಗೆ ಉತ್ತರಿಸುವ ಗೂಗಲ್, ಕನಸುಗಳನ್ನು ಮೀರಿ ವಿಶ್ವದ ಜ್ಞಾನದ ಅಧಿಪತಿಯಾಗಿ ಹೊರಹೊಮ್ಮಿದೆ.

ಜನ್ಮದಿನದ ಶುಭಾಶಯಗಳು ಗೂಗಲ್ :

ಜನ್ಮದಿನದ ಶುಭಾಶಯಗಳು ಗೂಗಲ್ :

ಗೂಗಲ್ ಇಂದು 21ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ ಮತ್ತು ಅದನ್ನು ಡೂಡಲ್ ಮೂಲಕ ಘೋಷಿಸಿದೆ. ಡೂಡಲ್ 90 ರ ದಶಕದಲ್ಲಿ ಬಳಸಲಾದ ದೊಡ್ಡ-ಪ್ರಮಾಣದ ಕಂಪ್ಯೂಟರ್‌ನ ಚಿತ್ರಣವನ್ನು ಹೊಂದಿದೆ ಅಲ್ಲದೆ ಅದನ್ನು ಗೂಗಲ್‌ನಂತೆ ವಿನ್ಯಾಸಗೊಳಿಸಲಾಗಿದೆ. ಚಿತ್ರದ ಕೆಳಗಿನ ಬಲ ಮೂಲೆಯಲ್ಲಿ ಬರೆಯಲಾದ "98 9 27" ಅತ್ಯಂತ ಗಮನಾರ್ಹವಾದುದು. ಆ ಸಂಖ್ಯೆ ಅದು ಬಳಕೆಗೆ ಬಂದ ದಿನವನ್ನು ಸೂಚಿಸುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
Google celebrating its 21st birthday today with special doodle. In this special day we need to know about google. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X