Google Doodle For Women's Day : ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶೇಷ ಡೂಡಲ್

ಬೃಹತ್ ಸರ್ಚ್ ಇಂಜಿನ್ ಖ್ಯಾತಿಯ ಗೂಗಲ್ ಇಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷ ಡೂಡಲ್ ಮೂಲಕ ಆಚರಿಸುತ್ತಿದೆ. ಡೂಡಲ್‌ನ ಅನಿಮೇಟೆಡ್ ವೀಡಿಯೋವು ಸಮಾಜದಲ್ಲಿ ವಿಭಿನ್ನ ಪಾತ್ರಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಒಳಗೊಂಡಿದೆ. ಒಂದು ಮಹಿಳೆ ಗೃಹಿಣಿಯಾಗಿ ತನ್ನ ಕರ್ತವ್ಯಗಳನ್ನು ನಿಭಾಯಿಸುವುದರ ಜೊತೆಗೆ ವಿಜ್ಞಾನ ಕ್ಷೇತ್ರದವರೆಗೂ ತಲುಪಿರುವ ಸಾಧನೆಗಳನ್ನು ಈ ಡೂಡಲ್ ಸೂಚಿಸುತ್ತದೆ.

ಸಮಾಜದಲ್ಲಿ ಮಹಿಳೆಯ ಪಾತ್ರವನ್ನು ಚಿತ್ರಿಸಿರುವ ಗೂಗಲ್ ಡೂಡಲ್

ಗೂಗಲ್ ಗೆ ಭೇಟಿ ನೀಡಿದಾಗ ವೀಡಿಯೋದ ಆರಂಭದಲ್ಲಿ ಸಾಂಸ್ಕೃತಿಕವಾಗಿ ವೈವಿಧ್ಯಮಯ ಮಹಿಳೆಯರಿಂದ ಸುತ್ತುವರಿದ ಭೂಮಿಯ ಚಿತ್ರಣದಿಂದ ಅವರನ್ನು ಸ್ವಾಗತಿಸಲಾಗುತ್ತದೆ. ನಂತರ ಅನಿಮೇಟೆಡ್ ವೀಡಿಯೊ ಪ್ಲೇ ಆಗಲು ಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ. ವೀಡಿಯೋ ಆರಂಭದಲ್ಲಿ ತಾಯಿ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದರಲ್ಲಿ ಮತ್ತು ತನ್ನ ಮಗುವಿನ ಆರೈಕೆಯಲ್ಲಿ ನಿರತಳಾಗಿದ್ದಾಳೆ, ಮತ್ತೊಂದು ದೃಶ್ಯದಲ್ಲಿ ಮಹಿಳೆ ಗಿಡಗಳಿಗೆ ನೀರು ಹಾಕುತ್ತಾಳೆ, ಮಹಿಳೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಾಳೆ. ಹೀಗೆ ಮಹಿಳೆಯರು ಇನ್ನೂ ಅನೇಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬುದನ್ನು ವೀಡಿಯೋದಲ್ಲಿ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ.

ಗೂಗಲ್ ತನ್ನ ಗೂಗಲ್ ಡೂಡಲ್ ಪುಟದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಡೂಡಲ್ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದು ಹೀಗೆ ಹೇಳುತ್ತದೆ, "ಇಂದಿನ ವಾರ್ಷಿಕ ಅಂತರಾಷ್ಟ್ರೀಯ ಮಹಿಳಾ ದಿನದ ಡೂಡಲ್ ಅನಿಮೇಟೆಡ್ ಸ್ಲೈಡ್‌ಶೋ ಆಗಿದ್ದು ಅದು ಪ್ರಪಂಚದಾದ್ಯಂತ ವಿವಿಧ ಸಂಸ್ಕೃತಿಗಳಾದ್ಯಂತ ಮಹಿಳೆಯರ ದೈನಂದಿನ ಜೀವನದಲ್ಲಿ ಒಂದು ನೋಟವನ್ನು ನೀಡಲು ಪ್ರಯತ್ನಿಸಿದೆ. ಮನೆಯಿಂದ ಕೆಲಸ ಮಾಡುವ ತಾಯಿಯಿಂದ ಹಿಡಿದು ಮೋಟಾರ್‌ಸೈಕಲ್ ಮೆಕ್ಯಾನಿಕ್ ಆಗುವ ಮಹಿಳೆಯರ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನವಾಗಿದೆ. ಇಂದಿನ ಡೂಡಲ್‌ನಲ್ಲಿ ಚಿತ್ರಿಸಲಾದ ಪ್ರತಿಯೊಂದು ಚಿತ್ರಣವು ಮಹಿಳೆಯರು ತಮ್ಮನ್ನು ಅವರ ಕುಟುಂಬಗಳು ಮತ್ತು ಅವರ ಸಮುದಾಯಗಳೊಂದಿಗೆ ಹೇಗೆ ಸಂಪರ್ಕ ಸಾಧಿಸಿದ್ದಾರೆ" ಎನ್ನುವುದನ್ನು ಬಿಂಬಿಸಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ:

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿವರ್ಷ ಮಾರ್ಚ್ 8ರಂದು ಆಚರಣೆ ಮಾಡಲಾಗುತ್ತದೆ. ಈ ವಿಶೇಷ ದಿನವು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರಿಗೆ ಗೌರವ ಸಲ್ಲಿಸುವ ಉದ್ದೇಶವನ್ನು ಒಳಗೊಂಡಿದೆ.

ಈ ದಿನ ಅನೇಕ ಕಡೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಹಿಳೆಯರಿಗಾಗಿ ಅನೇಕ ರೀತಿಯ ಮನೊರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ರೀತಿಯಾಗಿ ಮಹಿಳೆಯರಿಗೆ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ. ಹಾಗೆಯೇ ಗೂಗಲ್ ಕೂಡ ವಿಶೇಷ ರೀತಿಯಲ್ಲಿ ಶುಭಕೋರಿದೆ.

2022ರ ಅಂತರರಾಷ್ಟ್ರೀಯ ಮಹಿಳಾ ದಿನದ ಥೀಮ್:

ಈ ವರ್ಷದ ಮಹಿಳಾ ದಿನದ ಥೀಮ್ "ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ". ಈ ವರ್ಷದ ಥೀಮ್ ಲಿಂಗ ಸಮಾನತೆಯನ್ನು ಒತ್ತಿಹೇಳುತ್ತದೆ. ಕೆಲವು ಸಮಯದಿಂದ ಪ್ರಪಂಚದಾದ್ಯಂತ ಲಿಂಗ ಸಮಾನತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜನರು ಈ ವಿಷಯದ ಬಗ್ಗೆ ಬಹಳ ಜಾಗೃತರಾಗಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Google doodle celebrates international women's day 2022 with animated slideshow which highlights the role of women in society.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X