Teachers Day: ಕಲರ್ ಫುಲ್ ಕ್ಲಾಸ್ ರೂಂ ಮೂಲಕ ಗೂಗಲ್ ಡೂಡಲ್ ನಮನ

ಪ್ರತಿ ನಿತ್ಯ ಒಂದೊಂದು ವಿಶೇಷತೆಗಳನ್ನು ಹೊತ್ತ ತರುವ ಗೂಗಲ್ ಡೂಡಲ್ ಇಂದು ಶಿಕ್ಷಕರ ದಿನದ ವಿಶೇಷವಾಗಿ ವರ್ಣಮಯ ಶಾಲಾ ತರಗತಿಯ ವೇಷ ಹೊತ್ತು ಬಂದಿದೆ. ಈ ಮೂಲಕ ಭಾರತೀಯರಿಗೆ ಶಿಕ್ಷಕರ ದಿನದ ಗೌರವ ಸೂಚಿಸಿದೆ.

ಭಾರತದಾದ್ಯಂತ ಇಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವದ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಕೂಡ ವಿಭಿನ್ನವಾಗಿ ಭಾರತೀಯರಿಗೆ ಶಿಕ್ಷಕರ ದಿನದ ಶುಭಾಶಯಗಳನ್ನು ತಿಳಿಸಿದೆ.

ಪ್ರತಿ ನಿತ್ಯ ಒಂದೊಂದು ವಿಶೇಷತೆಗಳನ್ನು ಹೊತ್ತ ತರುವ ಗೂಗಲ್ ಡೂಡಲ್ ಇಂದು ಶಿಕ್ಷಕರ ದಿನದ ವಿಶೇಷವಾಗಿ ವರ್ಣಮಯ ಶಾಲಾ ತರಗತಿಯ ವೇಷ ಹೊತ್ತು ಬಂದಿದೆ. ಈ ಮೂಲಕ ಭಾರತೀಯರಿಗೆ ಶಿಕ್ಷಕರ ದಿನದ ಗೌರವ ಸೂಚಿಸಿದೆ.

ತನ್ನ ಅಕ್ಷರಗಳ ವಿನ್ಯಾಸದಲ್ಲೇ ಗುರು-ಶಿಷ್ಯರ ಬಾಂಧವ್ಯವನ್ನು ಡೂಡಲ್ ತಿಳಿಸಿದೆ. ಮಧ್ಯದ ಜಿ ಅಕ್ಷರ ಗುರುವಿನ ರೂಪದಲ್ಲಿದ್ದರೆ, ಉಳಿದ ಅಕ್ಷರಗಳು ವಿದ್ಯಾರ್ಥಿಗಳನ್ನು ಸೂಚಿಸುತ್ತಿವೆ.

ಶಿಕ್ಷಕರ ದಿನಾಚರಣೆ ಗೂಗಲ್ ಡೂಡಲ್ ನಮನ

ಐದು ವಿಭಿನ್ನ ತರಗತಿಗಳನ್ನು ಗೂಗಲ್ ಡೂಡಲ್ ಹೊತ್ತು ಬಂದಿದೆ. ಬಾಹ್ಯಾಕಾಶವಿಜ್ಞಾನ, ಗಣಿತ, ರಸಾಯನಶಾಸ್ತ್ರ, ಪರಿಸರ ಮತ್ತು ಸಂಗೀತದ ತರಗತಿಗಳನ್ನು ವಿಶೇಷವಾಗಿ ರೂಪಿಸಲಾಗಿದೆ.

ಈ ಶಿಕ್ಷಕರುಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು!ಈ ಶಿಕ್ಷಕರುಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು!

ಗೂಗಲ್ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಗೂಗಲ್ ನ ಮಧ್ಯದ 'ಜಿ' ಅಕ್ಷರ ಪಾಠ ಮಾಡುವ ರೀತಿ ಚಿಕ್ಕ ರೂಪಿಸಲಾಗಿದೆ. ಮತ್ತೊಮ್ಮೆ ಕ್ಲಿಕ್ ಮಾಡಿದರೆ ಅದು ಶಿಕ್ಷಕರ ದಿನದ ವಿಶೇಷ ತಿಳಿಸುವ ವಿಕಿಪೀಡಿಯಾ ಪುಟ ತೆರೆದುಕೊಳ್ಳುತ್ತದೆ.

ಮೊದಲಿಗೆ ಶಿಕ್ಷಕರ ದಿನವನ್ನು ವಿಶ್ವದ ಯಾವ ಯಾವ ಭಾಗದಲ್ಲಿ ಆಚರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆ ಹೇಗೆ ಆರಂಭವಾಯಿತು, ಎನ್ನೋ ಅಂಶಗಳಿವೆ.

ಭಾರತದಲ್ಲಿ ಶಿಕ್ಷಕರ ದಿನಾಚರಣೆ

'ಡಾ. ಸರ್ವಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾದ ಸಂದರ್ಭದಲ್ಲಿ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ "ಸೆಪ್ಟೆಂಬರ್ 5"ನ್ನು 'ಶಿಕ್ಷಕರ ದಿನ'ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ ಅವರ ಜನ್ಮದಿನವನ್ನ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ.

ಮಹಾಗುರುವಿನ ಸಾರೋಟನ್ನು ವಿದ್ಯಾರ್ಥಿಗಳೇ ಎಳೆದಿದ್ದರು!ಮಹಾಗುರುವಿನ ಸಾರೋಟನ್ನು ವಿದ್ಯಾರ್ಥಿಗಳೇ ಎಳೆದಿದ್ದರು!

ವಿಶ್ವ ಶಿಕ್ಷಕರ ದಿನಾಚರಣೆ

ಒಟ್ಟು 21 ದೇಶಗಳಲ್ಲಿ ಹಲವು ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿದೆ. 1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ

For Quick Alerts
ALLOW NOTIFICATIONS  
For Daily Alerts

English summary
In order to commemorate and instill the mood of teacher's day in India, Google Doodle logo on google search today presented itself in a classroom set up.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X