Google Doodle For India's Satellite Man: ಉಡುಪಿ ರಾಮಚಂದ್ರರಾವ್ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

ಭಾರತದ ಸ್ಯಾಟ್‌ಲೈಟ್ ಮ್ಯಾನ್ ಉಡುಪಿ ರಾಮಚಂದ್ರ ರಾವ್ ಗೆ ಗೂಗಲ್ ಡೂಡಲ್ ಗೌರವ

ಭಾರತದ ಸ್ಯಾಟ್‌ಲೈಟ್ ಮ್ಯಾನ್ ಪ್ರೊಫೆಸರ್, ವಿಜ್ಞಾನಿ ಉಡುಪಿ ರಾಮಚಂದ್ರರಾವ್ ಅವರ 89ನೇ ಜನ್ಮದಿನವನ್ನು ಗೂಗಲ್ ಡೂಡಲ್ ಮೂಲಕ ಗೌರವಿಸಿದೆ.

 

ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿದ್ದ ರಾವ್ ಅವರು 1975ರಲ್ಲಿ ಭಾರತದ ಮೊದಲ ಉಪಗ್ರಹ 'ಆರ್ಯಭಟ' ಉಡಾವಣೆಯ ಮೇಲ್ವಿಚಾರಣೆ ಹೊಣೆಯನ್ನು ಹೊತ್ತಿದ್ದರು.

ಗೂಗಲ್ ಡೂಡಲ್ ಗೌರವ:

ಅವರ ಜನ್ಮದಿನವಾದ ಇಂದು ಡೂಡಲ್ ನಲ್ಲಿ ಪ್ರೊಫೆಸರ್ ರಾವ್ ಅವರ ರೇಖಾಚಿತ್ರವಿದ್ದು, ಹಿನ್ನೆಲೆಯಲ್ಲಿ ಭೂಮಿ ಮತ್ತು ನಕ್ಷತ್ರಗಳನ್ನು ಒಳಗೊಂಡಿದೆ. 'ನಿಮ್ಮ ನಕ್ಷತ್ರೀಯ ತಾಂತ್ರಿಕ ಪ್ರಗತಿಗಳು ಗ್ಯಾಲಕ್ಷಿ ಅನುಭವಿಸುತ್ತಲೇ ಇರುತ್ತದೆ ಎಂದು ಗೂಗಲ್ ತನ್ನ ವಿವರಣೆಯಲ್ಲಿ ಬರೆದಿದೆ.

ಉಡುಪಿ ರಾಮಚಂದ್ರರಾವ್:

ಕರ್ನಾಟಕದ ಉಡುಪಿ ಸಮೀಪದ 'ಮಾರ್ಪಳ್ಳಿ'ಯಲ್ಲಿ ಮಾರ್ಚ್ 10,1932ರಲ್ಲಿ ಜನಿಸಿದ ರಾವ್ ಅವರು ಭಾರತದ ಸ್ಪೇಸ್ ಪ್ರೋಗ್ರಾಂ ಪಿತಾಮಹ ಎಂದು ಕರೆಯಲ್ಪಡುತ್ತಿದ್ದ ಡಾ.ವಿಕ್ರಮ್ ಸಾರಾ ಬಾಯ್ ಅವರ ಕೈಕೆಳಗೆ ಕಾಸ್ಮಿಕ್-ರೇ ಭೌತಶಾಸ್ತ್ರಜ್ಞನಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಡಾಕ್ಟರೇಟ್ ಮುಗಿಸಿ ನಂತರ ಅಮೇರಿಕಾದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದರು ಎಂದು ಗೂಗಲ್ ಡೂಡಲ್ ನಲ್ಲಿ ತಿಳಿಸಿದೆ.

1966ರಲ್ಲಿ ಭಾರತಕ್ಕೆ ವಾಪಸ್ ಬಂದ ರಾವ್ ಅವರು 1972 ರಲ್ಲಿ ತನ್ನ ದೇಶದದಲ್ಲಿ ಬಾಹ್ಯಾಕಾಶ ವಿಜ್ಞಾನಕ್ಕಾಗಿ ಭಾರತದ ಪ್ರಮುಖ ಸಂಸ್ಥೆಯಾದ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಉನ್ನತ ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

1984 ರಿಂದ 1994ರ ವರೆಗೆ ಪ್ರೊ. ರಾಮಚಂದ್ರರಾವ್ ಅವರು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ತಮ್ಮ ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುಂದುವರೆಸಿದ್ದರು.

 

ಉಡುಪಿ ರಾಮಚಂದ್ರರಾವ್ ಅವರು ಡಾ.ಯು.ಆರ್.ರಾವ್ ಎಂದೇ ಚಿರಪರಿಚಿತರು. ಅವರು 2017ರಲ್ಲಿ ನಿಧನ ಹೊಂದಿದರು. ರಾವ್ ಅವರು 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ' ಯ ಮಾಜಿ ಮುಖ್ಯಸ್ಥರಾಗಿ ಮಹತ್ವದ ಸಾಧನೆ ಮಾಡಿದ್ದಾರೆ. ಅಂತರರಾಷ್ಟ್ರೀಯ ವೈಮಾನಿಕ ಫೆಡರೇಷನ್ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವವರಲ್ಲಿ ಪ್ರಮುಖರು.

For Quick Alerts
ALLOW NOTIFICATIONS  
For Daily Alerts

English summary
Google is celebrating the 89th birthday of renowned indian professor and scientist udupi ramachandra rao today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X