ಮಕ್ಕಳ ದಿನಾಚರಣೆಯ ಸ್ಪೇಶಲ್ ಗೂಗಲ್ ಡೂಡಲ್, ಯಾರ ಕುಂಚದಲ್ಲಿ ಅರಳಿದ ಕಲೆ ಇದು?

By Nishmitha Bekal

ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ ಇದೀಗ ಗೂಗಲ್ ಸರ್ಚ್ ಇಂಜಿನ್. ಹೌದು ಇಂದು ದೇಶದೆಲ್ಲೆಡೆ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಮಕ್ಕಳ ದಿನಾಚರಣೆಗೆ ಸಂಬಂಧಪಟ್ಟಂತೆ ಸ್ಪೇಶಲ್ ಗ್ಯಾಲಕ್ಸಿ ಥೀಮ್ ನ ಡೂಡಲ್ ನೀವು ನೋಡಬಹುದಾಗಿದೆ.

 
ಮಕ್ಕಳ ದಿನಾಚರಣೆಯ ಸ್ಪೇಶಲ್ ಗೂಗಲ್ ಡೂಡಲ್, ಯಾರ ಕುಂಚದಲ್ಲಿ ಅರಳಿದ ಕಲೆ ಇದು?

ಪ್ರತೀ ವರ್ಷ ನವಂಬರ್ 14 ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಜನ್ಮದಿನದ ಸವಿನೆನಪಿಗಾಗಿ ಈ ಮಕ್ಕಳ ದಿನಾಚರಣೆಯನ್ನ ಆಚರಿಸಲಾಗುತ್ತದೆ.

ನವಂಬರ್ 14 ರಂದು ಜನಿಸಿರುವ ದೇಶದ ಮೊದಲ ಪ್ರಧಾನಿ ನೆಹರೂ ಅವರಿಗೆ ಮಕ್ಕಳೆಂದ್ರೆ ಅಚ್ಚುಮೆಚ್ಚು. ಹಾಗಾಗಿ ತಮ್ಮ ಜನ್ಮ ದಿನವನ್ನ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವಂತೆ ಕರೆ ನೀಡಿದ್ದರು ನೆಹರೂ. ಈ ದಿನವನ್ನ ಹಿಂದಿಯಲ್ಲಿ ಬಾಲ್ ದಿವಸ್ ಎಂದು ಕರೆಯುತ್ತಾರೆ.

More Read: ಮಕ್ಕಳ ದಿನಾಚರಣೆ: ಇತಿಹಾಸ ಮತ್ತು ಆಚರಣೆMore Read: ಮಕ್ಕಳ ದಿನಾಚರಣೆ: ಇತಿಹಾಸ ಮತ್ತು ಆಚರಣೆ

ಇನ್ನು ಈ ಬಾರಿಯ ಡೂಡಲ್ ಡಿಸೈನ್ ಬಗ್ಗೆ ಹೇಳುವುದಾದ್ರೆ ಮುಂಬಯಿಯ ನಿವಾಸಿ ಹಾಗೂ ಜೆ.ಬಿ ವಚ್ಚ ಹೈಸ್ಕೂಲ್ ವಿದ್ಯಾರ್ಥಿ ಪಿಂಗ್ಲ ರಾಹುಲ್ ಈ ಡಿಸೈನ್ ಮಾಡಿದ್ದಾಗಿದೆ. ನವಂಬರ್ 14 ಮಕ್ಕಳ ದಿನಾಚರಣೆ ಪ್ರಯುಕ್ತ ವಾಟ್ ಇನ್ಸ್ ಪೈರ್ ಮಿ ಥೀಮ್ ಆಧಾರದ ಮೇಲೆ ಡೂಡಲ್ ಫಾರ್ ಗೂಗಲ್ 2018 ಸ್ಪರ್ಧೆಯನ್ನ ದೇಶದಾದ್ಯಂತ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ದೇಶದಾದ್ಯಂತ ಸುಮಾರು ೭೫,೦೦೦ ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಈ ಮಕ್ಕಳನ್ನೆಲ್ಲಾ ಹಿಂದಿಕ್ಕಿ ವಿದ್ಯಾರ್ಥಿ ಪಿಂಗ್ಲ ರಾಹುಲ್ ಜಯಗಳಿಸಿದ್ದಾರೆ.

ವಿದ್ಯಾರ್ಥಿ ಪಿಂಗ್ಲ ರಾಹುಲ್ ಬಿಡಿಸಿರುವ ಡೂಡಲ್ ಗ್ಯಾಲಕ್ಸಿಗೆ ಸಂಬಂಧಪಟ್ಟಿದ್ದಾಗಿದೆ. ಹುಡುಗಿಯೊಬ್ಬಳು ಟೆಲಿಸ್ಕೋಪ್ ಹಿಡಿದುಕೊಂಡು ಆಕಾಶದತ್ತ ನೋಡುತ್ತಿದ್ದಾಳೆ. ಇನ್ನು ಗ್ಯಾಲಕ್ಸಿಸ್, ಪ್ಲಾನೆಟ್ಸ್ ಮತ್ತು ಸ್ಪೇಸ್ ಕ್ರಾಫ್ಟ್ ನಿಂದ ಗೂಗಲ್ ಪದಗಳನ್ನ ಚಿತ್ರಿಸಲಾಗಿದೆ. ಈ ಚಿತ್ರಕಲೆ ನಿಜಕ್ಕೂ ಆಕರ್ಷನೀಯವಾಗಿದ್ದು, ಅಷ್ಟೇ ಅಲ್ಲ ಸುಂದರವಾಗಿಯೂ ಇದೆ.

For Quick Alerts
ALLOW NOTIFICATIONS  
For Daily Alerts

English summary
Google India today opened in an all new form with a wish for children's day. In its children's day doodle, it showed kids playing happily in harmony with nature, representing its theme for the occassion.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X