ವಿದ್ಯಾರ್ಥಿಗಳಿಗಾಗಿ ಸಮ್ಮರ್ ರಜೆಗೆ ಗೂಗಲ್ ಸಮ್ಮರ್ ಕೋಡ್‌... ಅರ್ಜಿ ಆಹ್ವಾನ

Written By: Nishmitha B

ಬೇಸಿಗೆ ರಜೆಯನ್ನ ಹೇಗೆ ಕಳೆಯುವುದು ಎಂದು ಯೋಚಿಸ್ತಾ ಇದ್ದೀರಾ.. ಹಾಗಿದ್ರೆ ನಿಮಗಿಲ್ಲಿದೆ ಒಂದು ಸುವರ್ಣವಕಾಶ. ಗೂಗಲ್ ಕಂಪನಿಯು ವಿದ್ಯಾರ್ಥಿಗಳಿಗಾಗಿ ಸಮ್ಮರ್ ಕೋಡ್ ಪ್ರೋಗ್ರಾಂ ಆಯೋಜಿಸಿದೆ.

ಗೂಗಲ್ ಸಮ್ಮರ್ ಕೋಡ್‌ನಿಂದ ಏನು ಉಪಯೋಗ:

ಓಪನ್ ಸೋರ್ಸ್ ಸಾಫ್ಟ್ ವೇರ್ ಮೇಲೆ ವಿದ್ಯಾರ್ಥಿಗಳು ಕೆಲಸ ಮಾಡಬಹುದು
ಪ್ರಾಜೆಕ್ಟ್ ಹೇಗೆ ಕಂಪ್ಲೀಟ್ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಮೆಂಟರ್ ತಿಳಿಸಿಕೊಡುತ್ತಾರೆ
ಉದ್ಯೋಗಕ್ಕೆ ಸಂಬಂಧಪಟ್ಟ ಹೊಸ ಹೊಸ ಆಲೋಚನೆಗಳ ಚರ್ಚೆ

ಗೂಗಲ್ ಸಮ್ಮರ್ ಕೋಡ್‌ 2018 ಕಂಪ್ಲೀಟ್ ಡೀಟೆಲ್ಸ್ ಹೀಗಿದೆ

ವರ್ಗಕಂಪ್ಲೀಟ್ ಮಾಹಿತಿ
ಪ್ರಾಜೆಕ್ಟ್ ಹೆಸರುಗೂಗಲ್ ಸಮ್ಮರ್ ಆಫ್ ಕೋಡ್ 2018
ಕಂಪನಿ ಹೆಸರುಗೂಗಲ್
ವಿದ್ಯಾರ್ಹತೆಕಾಲೇಜು ವಿದ್ಯಾರ್ಥಿಗಳು (ಯುಜಿ, ಪಿಜಿ ಅಥವಾ ಪಿಹೆಚ್ ಡಿ ವಿದ್ಯಾರ್ಥಿಗಳು)
ವಯೋಮಿತಿಭಾಗವಹಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ 18 ವರ್ಷ ದಾಟಿರಬೇಕು
ಇನ್ನಿತ್ತರ ಬೇಡಿಕೆಇಂಟರ್ನ್ ಶಿಪ್ ವೇಳೆ ವಿದ್ಯಾರ್ಥಿಗಳು ಫುಲ್ ಟೈಂ ವರ್ಕ್ ಮಾಡಲು ಸಿದ್ಧರಿರಬೇಕು
ಅವಧಿ3 ತಿಂಗಳು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಮಾರ್ಚ್ 27, 2018

ಅರ್ಜಿ ಸಲ್ಲಿಸುವುದು ಹೇಗೆ?

ಗೂಗಲ್ ಸಮ್ಮರ್ ಕೋಡ್‌ಗೆ ಹೇಗೆ ಅರ್ಜಿ ಸಲ್ಲಿಸಬಹುದು ಎಂಬ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಸ್ಟೆಪ್ 1

ಆಫೀಶಿಯಲ್ ಪೇಜ್‌ಗೆ ಲಾಗ್ ಇನ್ ಆಗಿ

ಸ್ಟೆಪ್ 2

Students Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನ ಭರ್ತಿ ಮಾಡಿ

ಸ್ಟೆಪ್ 4

Next Step ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿ

ಸ್ಟೆಪ್ 6

Next ಕ್ಲಿಕ್ ಮಾಡಿ

ಸ್ಟೆಪ್7

ಅಗ್ರೀಮೆಂಟ್ ಓದಿದ ಬಳಿಕ , ರಿಜಿಸ್ಟ್ರೇಶನ್ ಪ್ರೊಸಿಜರ್ ಕಂಪ್ಲೀಟ್ ಮಾಡಲು ಒಪ್ಪಿಗೆ ನೀಡಿ

ಗೂಗಲ್ ಸಮ್ಮರ್ ಕೋಡ್‌ ಬಗ್ಗೆ ಒಂದಿಷ್ಟು

2005ರಲ್ಲಿ ಗೂಗಲ್ ಸಮ್ಮರ್ ಕೋಡ್‌ ರಚಿಸಲಾಯಿತು. ಸುಮಾರು13000 ವಿದ್ಯಾರ್ಥಿಗಳು ಹಾಗೂ 12000 ಮೆಂಟರ್ಸ್ ಇದರ ಪ್ರಯೋಜನ ಪಡೆದಿದ್ದಾರೆ. ಗೂಗಲ್ ಇಂಟರ್ನ್ ಶಿಪ್ ಆಫೀಶಿಯಲ್ ವೆಬ್‌ಸೈಟ್‌ನಿಂದ ವಿದ್ಯಾರ್ಥಿಗಳು ಸಂಸ್ಥೆಯನ್ನ ಆಯ್ಕೆ ಮಾಡಬಹುದು. ಅವರ ಪ್ರೊಜೆಕ್ಟ್ ನ್ನು ಅವರೇ ಆಯ್ಕೆ ಮಾಡಿಕೊಳ್ಳಬಹುದು. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಅರ್ಜಿ ಅಪ್ರೂವ್ ಆದ್ರೆ ಅಂದಿನಿಂದಲೇ ವರ್ಕ್ ಮಾಡಲು ಪ್ರಾರಂಭಿಸಬಹುದು

English summary
In order to encourage students to learn better and be productive during summer holidays, Google is offering a summer code programme titled Google Summer of Code 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia