ದಸರಾ ಪ್ರಯುಕ್ತ ಮುಂದಕ್ಕೆ ಹೋದ ಮೌಲ್ಯಾಂಕನ ಪರೀಕ್ಷೆ

Posted By:

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 4ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅ.27 ಮತ್ತು 28ರಂದು ನಡೆಯಬೇಕಿದ್ದ ಮೌಲ್ಯಾಂಕನ ಪರೀಕ್ಷೆಯನ್ನು ಮುಂದೂಡಲಾಗಿದೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 27 ಮತ್ತು 28ರಂದು ನಡೆಯಬೇಕಿದ್ದ ಪರಿಕ್ಷೆಯನ್ನು ನವೆಂಬರ್ 3 ಮತ್ತು 4ರಂದು ನಡೆಸಲು ತೀರ್ಮಾನಿಸಲಾಗಿದೆ.

ಮೌಲ್ಯಾಂಕನ ಪರೀಕ್ಷೆ ಮುಂದೂಡಿಕೆ

ದಸರಾ ರಜೆ ಅ.11ರಿಂದ 25ರವರೆಗೆ ಇರುತ್ತದೆ. ಶಾಲೆ ಆರಂಭವಾದ ತಕ್ಷಣ ಪರೀಕ್ಷೆ ನಡೆಸುವ ಕ್ರಮ ಸರಿಯಲ್ಲ. ಇದರಿಂದ ಮಕ್ಕಳು ಪರೀಕ್ಷೆ ತಪ್ಪಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಪರೀಕ್ಷೆ ಮುಂದೂಡಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಮೌಲ್ಯಾಂಕನ ಪರೀಕ್ಷೆ

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುವ ಮಕ್ಕಳ ಕಲಿಕಾ ಮಟ್ಟವನ್ನು ಅಳೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಈ ಮೌಲ್ಯಾಂಕನ ಪರೀಕ್ಷೆಯನ್ನು ನಡೆಸುತ್ತಿದೆ. ರಾಜ್ಯದಾದ್ಯಂತ ಒಟ್ಟಾರೆ 36,96,791 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ದಾವಣಗೆರೆ ವಿವಿ ನೇಮಕಾತಿ: ರದ್ದಾದ ಪರೀಕ್ಷೆ, ದಿನಾಂಕ ಮುಂದೂಡಿಕೆ

2017-18ನೇ ಸಾಲಿನ 4 ರಿಂದ 9ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಎರಡು ದಿನ ಈ ಪರೀಕ್ಷೆ ನಡೆಸಿ ಸಮೀಕ್ಷೆ ನಡೆಸಲಾಗುವುದು.

ಎರಡು ದಿನ ನಡೆಯುವ ಪರೀಕ್ಷೆ

4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ನಾಲ್ಕು ವಿಷಯಗಳು ಹಾಗೂ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಆರು ವಿಷಯಗಳಿಗೆ ರಾಜ್ಯ ಕಲಿಕಾ ಸಾಧನಾ ಮಟ್ಟದ ಸಮೀಕ್ಷೆ ನಡೆಸಲಾಗುವುದು.

ಮೊದಲ ದಿನ 4 ಮತ್ತು 5ನೇ ತರಗತಿಗೆ ಪ್ರಥಮ ಹಾಗೂ ದ್ವಿತೀಯ ಭಾಷೆಗಳ ಪ್ರಶ್ನೆಗಳನ್ನೊಳಗೊಂಡ ಒಂದು ಪ್ರಶ್ನೆ ಪತ್ರಿಕೆಯ ಬುಕ್‌ಲೆಟ್‌ ನೀಡಿದರೆ 6 ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಭಾಷೆಗಳ ಪ್ರಶ್ನೆಗಳನ್ನೊಳಗೊಂಡ ಒಂದು ಪ್ರಶ್ನೆ ಪತ್ರಿಕೆಯ ಬುಕ್‌ಲೆಟ್‌ ನೀಡಲಾಗುವುದು.

ಎರಡನೇ ದಿನ 4 ಹಾಗೂ 5ನೇ ತರಗತಿಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಯ ಬುಕ್‌ಲೆಟ್‌ ಗಣಿತ ಹಾಗೂ ಪರಿಸರ ಅಧ್ಯಯನ ವಿಷಯಗಳನ್ನೊಳಗೊಂಡರೆ, 6 ರಿಂದ 9ನೇ ತರಗತಿಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಯ ಬುಕ್‌ಲೆಟ್‌ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನೊಳಗೊಂಡಿರುತ್ತದೆ.

ಪರೀಕ್ಷೆಗಳ ನಂತರ ಆಯಾ ಶಾಲೆಗಳಲ್ಲೇ ಮೌಲ್ಯಮಾಪನ ನಡೆಸಿ ವಿದ್ಯಾರ್ಥಿಗಳ ಗ್ರಹಿಕೆ, ಸಾಮರ್ಥ್ಯ ಮತ್ತು ಅರ್ಹತೆಯನ್ನು ಅಳೆದು ಮಾಹಿತಿ ಪಡೆಯಲಾಗುವುದು.

ಪರೀಕ್ಷಾ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳ ಅರ್ಹತಾ ಮಟ್ಟ ತಿಳಿಯಲಾಗುತ್ತದೆ. ಪಾಲಕರನ್ನು ಕರೆದು ಅವರಿಗೂ ಮಕ್ಕಳ ಕಲಿಕಾ ಮಟ್ಟದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಯಾವುದೇ ವಿಷಯದ ಕಲಿಕೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಹಿಂದುಳಿದಿದ್ದರೆ ಅಲ್ಲಿನ ಶಿಕ್ಷಕರ ಬೋಧನಾ ಪ್ರಕ್ರಿಯೆ ಬದಲಾವಣೆ ಮಾಡಲು ಅವಕಾಶವಿದೆ.

English summary
The eligibility examination scheduled for 27th and 28th of the 4th and 9th standard of government and aided schools has been postponed and will be held on 3rd and 4th of November.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia