ಗ್ರೂಪ್ ಸ್ಟಡಿಗೆ ಸಹಕಾರಿಯಾಗುವ ಸೋಷಿಯಲ್ ಮೀಡಿಯಾ

Posted By:

ಹಿಂದೆಲ್ಲ ಗ್ರೂಪ್ ಸ್ಟಡಿ ಎಂದರೆ ವಿದ್ಯಾರ್ಥಿಗಳು ಗುಂಪಾಗಿ ಒಂದೆಡೆ ಸೇರಿ ಚರ್ಚಿಸುತ್ತಾ ಓದುತ್ತಿದ್ದರು. ಆದರೆ ತಂತ್ರಜ್ಞಾನ ಮುಂದುವರೆದಿದೆ. ಅದರ ಸದುಪಯೋಗ ಮಾಡಿಕೊಂಡರೆ ನಮ್ಮ ಕಲಿಕೆ ಮತ್ತಷ್ಟು ಹೆಚ್ಚುತ್ತದೆ.

ಇಂದು ಬಹುತೇಕ ಎಲ್ಲರ ಬಳಿಯಲ್ಲೂ ಸ್ಮಾರ್ಟ್ ಪೋನ್ ಗಳಿವೆ, ದಿನದ ಬಹುತೇಕ ಸಮಯವನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿಯೇ ಕಳೆಯುತ್ತಾರೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ಕಲಿಕೆ ಹೆಚ್ಚು ಉಪಯೋಗವಾಗಬಹುದು.

2018 ಇ-ಲರ್ನಿಂಗ್ ಯುಗ: ಇಂಟರ್ನೆಟ್, ಸ್ಮಾರ್ಟ್ ಫೋನ್ ನಿಂದ ಬದಲಾಗುತ್ತಿದೆ ಶಿಕ್ಷಣ

ಸೋಷಿಯಲ್ ಮೀಡಿಯಾ ಗ್ರೂಪ್ ಸ್ಟಡಿ

ಸೋಷಿಯಲ್ ಮೀಡಿಯಾ ಮೂಲಕ ವಿದ್ಯಾರ್ಥಿಗಳು ಓದಿನಲ್ಲಿ ತೊಡಿಗಿಸಿಕೊಳ್ಳಬಹುದಾಗಿದೆ. ಇಂದಿನ ಪ್ರಮುಖ ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್, ವಾಟ್ಸಪ್, ಟೆಲಿಗ್ರಾಂ ನಂತಹ ಅಪ್ಲಿಕೇಶನ್ ಮೂಲಕ ವಿದ್ಯಾರ್ಥಿಗಳು ಕಲಿಯಬಹುದಾಗಿದೆ.

ಕಲಿಕೆ ಹೇಗೆ?

ಮೊದಲಿಗೆ ನಿಮ್ಮ ಸಮಾನ ಮನಸ್ಕರನ್ನು ಒಳಗೊಂಡ ನಿಮ್ಮದೇ ಆದ ಒಂದು ಗ್ರೂಪ್ ಮಾಡಿಕೊಳ್ಳಿ, ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಹೆಚ್ಚೋ ಆ ವಿಷಯದ ಬಗ್ಗೆಯೇ ಆ ಗುಂಪಿನಲ್ಲಿ ಚರ್ಚಿಸಿ. ಅನವಶ್ಯಕ ವಿಚಾರಗಳ ಬಗ್ಗೆ ಸಂದೇಶವನ್ನು ಗುಂಪಿನಲ್ಲಿ ಬರದಂತೆ ನಿಮ್ಮ ಗುಂಪಿನ ಸದಸ್ಯರಿಗೆಲ್ಲ ತಿಳಿಸಿ ಇದರಿಂದ ನಿಮ್ಮ ವಿಚಾರ ಬೇರೆಡೆ ಹರಿಯುವುದಿಲ್ಲ. ಅನಗತ್ಯ ಗುಡ್ ಮಾರ್ನಿಂಗ್/ಗುಡ್ ನೈಟ್ ಮೆಸೇಜ್ ಗಳನ್ನು ಗುಂಪಿನಲ್ಲಿ ಹಾಕದಂತೆ ಎಲ್ಲರಿಗೂ ತಿಳಿಸಿ.

ನೀವು ಎಲ್ಲೇ ಇದ್ದರು ನಿಮ್ಮ ಕಲಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಗುಂಪಿನಲ್ಲಿ ಚರ್ಚಿಸಬಹುದು. ಅಲ್ಲದೇ ನಿಮಗಿರುವ ಗೊಂದಲಗಳನ್ನು ಅಲ್ಲಿ ಬಗೆಹರಿಸಕೊಳ್ಳಬಹುದು.

ಸಾಧ್ಯವಾದರೆ ನಿಮಗೆ ಸೂಕ್ತ ಮಾರ್ಗದರ್ಶಕರನ್ನು ಗುಂಪಿನ ಸದಸ್ಯರನ್ನಾಗಿ ಮಾಡಿಕೊಳ್ಳುವುದು ಉತ್ತಮ.

ಇಂಟರ್ನೆಟ್ ಮೂಲಕ ವಿಷಯಗಳ ಆಳವಾದ ಅಧ್ಯಯನ ಮಾಡಬಹುದಾಗಿದೆ. ನಿಮ್ಮ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದಾದರು ವೆಬ್ಸೈಟ್ ನಲ್ಲಿ ಅದರ ಮಾಹಿತಿ ಇದ್ದರೆ, ಆ ಲಿಂಕ್ ಅನ್ನು ಗುಂಪಿನಲ್ಲಿ ಶೇರ್ ಮಾಡಿ ಚರ್ಚಿಸಬಹುದು.

ಸೋಷಿಯಲ್ ಮೀಡಿಯಾಗಳಲ್ಲಿ ಇಮೇಜ್, ವೀಡಿಯೋ, ಆಡಿಯೋ, ಪಿಡಿಎಫ್ ಮತ್ತು ಡಾಕ್ಯುಮೆಂಟ್ ಫೈಲ್ ಗಳನ್ನು ಕಳುಹಿಸುವ ಅವಕಾಶ ಇರುವುದರಿಂದ ನಿಮಗೆ ಮಾಹಿತಿಯನ್ನು ಹಂಚಿಕೊಳ್ಳಲು ಯಾವುದೇ ತೊಂದರೆಯಾಗುವುದಿಲ್ಲ.

ಇನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಈ ರೀತಿಯ ಸೋಷಿಯಲ್ ಮೀಡಿಯಾ ಗುಂಪುಗಳು ಸಾಕಷ್ಟು ಸಹಕಾರಿಯಾಗಿದೆ. ದಿನ ನಿತ್ಯ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಹಾಕಿಕೊಂಡು ಅದರ ಬಗ್ಗೆ ಚರ್ಚಿಸುವುದರಿಂದ ಮಾಹಿತಿಯು ದೀರ್ಘವಾಗಿ ನೆನಪಿನಲ್ಲಿ ಉಳಿಯುವುದು.

ಪತ್ರಿಕೆಗಳಲ್ಲಿ ಬರುವ ಮಾಹಿತಿಗಳನ್ನು ಚರ್ಚಿಸುವುದರಿಂದ ಸಾಮಾನ್ಯ ಜ್ಞಾನ ಹೆಚ್ಚುವುದು ಅಲ್ಲದೇ ನಿಮ್ಮ ಜ್ಞಾನವು ವೃದ್ಧಿಸುವುದು.

English summary
Today almost everyone has smart phones, students spend most of the day on their mobile phones. Learning can be more useful if used properly.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia