ಜಿಎಸ್‌ಟಿ ಜಾರಿಯಿಂದ ಹೆಚ್ಚಲಿರುವ ಉದ್ಯೋಗಾವಕಾಶ

ಜಿಎಸ್‌ಟಿ ಯ ಲಭಾ ನಷ್ಟ ಲೆಕ್ಕಾಚಾರವನ್ನು ಹಾಕುತ್ತಿರವ ಈ ಹೊತ್ತಿನಲ್ಲಿ ಉದ್ಯೋಗದ ಮೇಲೂ ಜಿಎಸ್‌ಟಿ ಭಾರೀ ಪ್ರಭಾವ ಬೀರಲಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

ಇಂದು ಮಧ್ಯ ರಾತ್ರಿಯಿಂದ ದೇಶಾದ್ಯಂತ ಉದ್ಯಮ ಮತ್ತು ಉದ್ಯೋಗ ವಲಯದಲ್ಲಿ ಸಂಚಲನ ಮೂಡಲಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬರುತ್ತಲಿದ್ದು ದೇಶದ ನಾಗರೀಕರಲ್ಲಿ ಅನೇಕ ವಿಚಾರಗಳು ಸುಳಿದಾಡುತ್ತಿವೆ.

ಜಿಎಸ್‌ಟಿಯ ಲಭಾ ನಷ್ಟ ಲೆಕ್ಕಾಚಾರವನ್ನು ಹಾಕುತ್ತಿರವ ಈ ಹೊತ್ತಿನಲ್ಲಿ ಉದ್ಯೋಗದ ಮೇಲೂ ಜಿಎಸ್‌ಟಿ ಭಾರೀ ಪ್ರಭಾವ ಬೀರಲಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಜಿಎಸ್‌ಟಿ ಜಾರಿಗೆ ಬಂದ ನಂತರ ದೇಶದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಆರ್ಥಿಕ ಪಂಡಿತರು ತಿಳಿಸಿದ್ದಾರೆ.

ಜಿಎಸ್‌ಟಿ ಇಂದ ಉದ್ಯೋಗ ಸೃಷ್ಟಿ

ಜಿಎಸ್‌ಟಿ ಮೂಲಕ ದೇಶಿ ಉದ್ಯೋಗ ಮಾರುಕಟ್ಟೆಗೆ ಭಾರಿ ಉತ್ತೇಜನ ದೊರೆಯಲಿದೆ. ಪರಿಣತ ಕ್ಷೇತ್ರಗಳಾದ ತೆರಿಗೆ, ಲೆಕ್ಕಪತ್ರ ಮತ್ತು ದತ್ತಾಂಶ ವಿಶ್ಲೇಷಣೆ ವಲಯಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ. ಅರ್ಥ ವ್ಯವಸ್ಥೆಯ ವಿವಿಧ ವಲಯಗಳಲ್ಲಿನ ಉದ್ಯೋಗ ಅವಕಾಶಗಳು ವಾರ್ಷಿಕ ಶೇ 10ರಿಂದ 13ರಷ್ಟು ಬೆಳವಣಿಗೆ ದಾಖಲಿಸಲಿವೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಉದ್ಯೋಗಾವಕಾಶ ಹೆಚ್ಚಿಸುವ ಜಿಎಸ್‌ಟಿ

ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ಮೂರು ತಿಂಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ನಂತರದ ದಿನಗಳಲ್ಲಿ ಜಿಎಸ್‌ಟಿಯ ನಿರ್ದಿಷ್ಟ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 50ರಿಂದ 60 ಸಾವಿರದಷ್ಟು ಉದ್ಯೋಗಗಳು ಲಭ್ಯವಾಗಲಿವೆ.

ಉದ್ಯೋಗಾವಕಾಶ ಹೇಗೆ?

ಜಿಎಸ್‌ಟಿ ಜಾರಿಯಾದರ ನಂತರ ಉದ್ಯಮಗಳಲ್ಲಿ ಭಾರಿ ಬದಲಾವಣೆ ಆಗಲಿದೆ. ಸರಕುಗಳ ಸಂಗ್ರಹ ಮತ್ತು ಸಾಗಾಣಿಕೆಯು ತ್ವರಿತಗೊಳ್ಳಲಿದೆ. ನಗದು ಹರಿವಿನ ಚಿತ್ರಣ ಸ್ಪಷ್ಟಗೊಳ್ಳಲಿದೆ. ಲಾಭದ ಪ್ರಮಾಣ ಹೆಚ್ಚಲಿದೆ. ವಹಿವಾಟಿನ ಪಾರದರ್ಶಕತೆಯು ಸಂಘಟಿತ ಸ್ವರೂಪದ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ. ಹಾಗಾಗಿ ಇದಕ್ಕೆಲ್ಲ ಹೆಚ್ಚು ಮಾನವ ಸಂಪನ್ಮೂಲದ ಅವಶ್ಯಕತೆಯು ಹೆಚ್ಚಲಿದೆ.

ವರ್ತಕರು, ಕೈಗಾರಿಕೋದ್ಯಮಿಗಳು ಜಿಎಸ್‌ಟಿ ನಿರ್ವಹಣೆ, ಮಾಹಿತಿ ನವೀಕರಣ ಮತ್ತು ಸಮನ್ವಯಗೊಳಿಸಲು ವೃತ್ತಿನಿರತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ಹೊಸದಾಗಿ ಉದ್ಯೋಗಗಳು ಸೃಷ್ಟಿಯಾಗಲಿವೆ.

For Quick Alerts
ALLOW NOTIFICATIONS  
For Daily Alerts

English summary
The job market is looking forward to a big boost from the new GST regime and expects over one lakh immediate new employment opportunities coming days.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X