ಗುಲ್ಬರ್ಗಾ ಗಿಮ್ಸ್: ನೇರ ಸಂದರ್ಶನದ ಮೂಲಕ ನೇಮಕಾತಿ

ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಗಿಮ್ಸ್), ಕಲಬುರಗಿಯಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿಯನ್ನು ಭರ್ತಿ ಮಾಡಲು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

 

ಒಟ್ಟು 71 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ನೋಂದಾಯಿಸಿ ತಮ್ಮ ಸ್ವವಿವರ ಮತ್ತು ದಾಖಲಾತಿಗಳೊಂದಿಗೆ ನಿಗದಿತ ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.

ಬೆಂಗಳೂರು ನಿಮ್ಹಾನ್ಸ್ ನಲ್ಲಿ 66 ನರ್ಸ್ ಹುದ್ದೆಗಳ ನೇಮಕಾತಿ

ಗುಲ್ಬರ್ಗಾ ಗಿಮ್ಸ್ ನೇಮಕಾತಿ

ಹುದ್ದೆಗಳ ವಿವರ

ಪ್ರಾಧ್ಯಾಪಕರು-02 ಹುದ್ದೆಗಳು
ಸಹ ಪ್ರಾದ್ಯಾಪಕರು-9 ಹುದ್ದೆಗಳು
ಸಹಾಯಕ ಪ್ರಾಧ್ಯಾಪಕರು-07 ಹುದ್ದೆಗಳು
ಸೀನಿಯರ್ ರೆಸಿಡೆಂಟ್-18 ಹುದ್ದೆಗಳು
ಜೂನಿಯರ್ ರೆಸಿಡೆಂಟ್-32 ಹುದ್ದೆಗಳು
ಟ್ಯುಟೋರ್-03 ಹುದ್ದೆಗಳು

ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ದಿನಾಂಕ 09-11-2017 ಬೆಳಿಗ್ಗೆ 9.00 ಗಂಟೆಯ ಒಳಗೆ ನೋಂದಣಿ ಮಾಡಿಸತಕ್ಕದ್ದು.
ವಿದ್ಯಾರ್ಹತೆ, ಬೋಧನಾ ಅನುಭವ, ಸಂಶೋಧನಾ ಪ್ರತಿ ಹಾಗು ಇತರೆ ಮೂಲ ದಾಖಲಾತಿಗಳನ್ನು ಸಂದರ್ಶನದ ವೇಳೆ ಹಾಜರು ಪಡಿಸತಕ್ಕದ್ದು ಹಾಗು ಸಂದರ್ಶನಕ್ಕೆ ಹಾಜರಾಗಬಯಸುವ ಅಭ್ಯರ್ಥಿಗಳು ಅಗತ್ಯವಾದ ಎಲ್ಲ ಮೂಲ ದಾಖಲಾತಿಗಳ ಜೊತೆಗೆ ಎರಡು ಸೆಟ್ ಜೆರಾಕ್ಸ್ ಪ್ರತಿಗಳು ಮತ್ತು ಎರಡು ಪಾಸ್ ಪೋರ್ಟ್ ಫೋಟೋಗಳೊಂದಿಗೆ ಹಾಜರಾಗಬೇಕು.

 

ಈ ಹುದ್ದೆಗಳು ಎಐಸಿಟಿಐ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಒಳಗೊಂಡಿರುತ್ತದೆ.

ಕನ್ನಡ ಭಾಷೆ ಪರೀಕ್ಷೆ

ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ವಿನಾಯಿತಿ ನೀಡಲಾಗುವುದು. ಇಲ್ಲದಿದ್ದರೆ 150 ಅಂಕಗಳ ಕನ್ನಡ ಭಾಷೆ ಪರೀಕ್ಷೆಯನ್ನು 9.11.2017 ರಂದು ಬೆಳಿಗ್ಗೆ 8.00 ಗಂಟೆಗೆ ನಡೆಸಲಾಗುವುದು. ಕನ್ನಡ ಭಾಷೆ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇದ್ದಲ್ಲಿ ಸಂದರ್ಶನಕ್ಕೆ ಅರ್ಹರು ಇರುವುದಿಲ್ಲ.

ಅರ್ಜಿ ಸಲ್ಲಿಕೆ

ನಿಗದಿತ ಅರ್ಜಿ ನಮೂನೆಯನ್ನು ಸಂಸ್ಥೆಯ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ರೂ.500/- ಮೊತ್ತದ ಡಿಡಿಯನ್ನು "ನಿರ್ದೇಶಕರು, ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಲಬುರಗಿ" ಇವರ ಹೆಸರಿಗೆ ಪಡೆದ ಮುಖ್ಯ ಆಡಳಿತಾಧಿಕಾರಿಗಳು ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಲಬುರಗಿ ಇವರಿಗೆ ಸ್ಪೀಡ್ ಪೋಸ್ಟ್ ಮೂಲಕ ಅಥವಾ ಖುದ್ದಾಗಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸಿ ದಿನಾಂಕ: 08.11.2017 ರಂದು ಸಂಜೆ 5.00 ಗಂಟೆ ಒಳಗಡೆ ತಲುಪಿಸತಕ್ಕದ್ದು. ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಯಾವ ಹುದ್ದೆಗೆ ಮತ್ತು ವಿಭಾಗಕ್ಕೆ ಅರ್ಜಿಯನ್ನು ಹಾಕಿದೆ ಎಂದು ನಮೂದಿಸಬೇಕು.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The Gulbarga Institute of Medical Sciences, Gulbarga invites applications from eligible candidates for various teaching posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X