ಎಚ್-1ಬಿ ವೀಸಾ ಗೊಂದಲ: ಐದು ಲಕ್ಷ ಭಾರತೀಯರಿಗೆ ಸಂಕಷ್ಟ

Posted By:

ಅಮೆರಿಕಾದ ವೀಸಾ ನೀತಿ ಮತ್ತೊಮ್ಮೆ ಭಾರತೀಯರ ನಿದ್ದೆಗೆಡಿಸಿದೆ. ಎಚ್-1ಬಿ ವಿಸ್ತರಣೆಯ ಕುರಿತು ಅಮೆರಿಕ ಯಾವ ತೀರ್ಮಾನ ಕೈಗೂಳ್ಳುತ್ತದೆ ಎನ್ನುವುದರ ಮೇಲೆ ಅಲ್ಲಿನ ಭಾರತೀಯರ ಭವಿಷ್ಯ ನಿಂತಿದೆ.

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದ್ಯದ ಪರಿಸ್ಥಿತಿ ಗಮನಿಸಿದರೆ ಅಮೆರಿಕದಲ್ಲಿರುವ 5 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಉದ್ಯೋಗ ನಷ್ಟದ ಭೀತಿ ಎದುರಾಗಿದೆ.
ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೆ ಅಗತ್ಯವಿರುವ ಗ್ರೀನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿರುವವರ ಎಚ್-1ಬಿ ವೀಸಾ ಅವಧಿಯನ್ನು ವಿಸ್ತರಿಸದಿರಲು ಡೊನಾಲ್ಡ್ ಟ್ರಂಪ್ ಆಡಳಿತ ತೀರ್ಮಾನಿಸಿದ್ದೇ ಆದಲ್ಲಿ ಇಲ್ಲಿರುವ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ.

ಶಿಕ್ಷಕರು ಸರಿಯಾಗಿ ಪಾಠ ಮಾಡದಿದ್ದರೆ ಹಳ್ಳಿಗೆ ವರ್ಗಾವಣೆ

ಎಚ್-1ಬಿ ವೀಸಾ ಗೊಂದಲ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೇ ಹೆಚ್ಚು ಉದ್ಯೋಗ ನೀಡುವ, ಅಮೆರಿಕ ಪ್ರಜೆಗಳನ್ನು ಹೆಚ್ಚು ಆರ್ಥಿಕವಾಗಿ ಭದ್ರಗೊಳಿಸುವ ಉದ್ದೇಶ ಹೊಂದಿರುವುದರಿಂದ ಹೊಸ ನಿಯಮವನ್ನು ಜಾರಿಗೆ ತರುವ ಯೋಚನೆಯಲ್ಲಿದ್ದಾರೆ.
ಈ ಹೊಸ ನಿಯಮ ಜಾರಿಗೆ ಬಂದರೆ ಭಾರತೀಯರಿಗೆ ಅಮೆರಿಕದಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಎಚ್-1ಬಿ ವೀಸಾ ಅವಧಿಯನ್ನು ವಿಸ್ತರಿಸಲು ಸಾಧ್ಯವಾಗುವುದಿಲ್ಲ ಎಂದು ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಮಾಹಿತಿ ನೀಡಿದೆ.

ಎಚ್-1ಬಿ ನಿಯಮ

ಈಗಿರುವ ನಿಯಮದ ಪ್ರಕಾರ ಎಚ್-1ಬಿ ವೀಸಾ ಹೊಂದಿರುವ ವಿದೇಶಿಯರಿಗೆ ಮೂರು ವರ್ಷಗಳ ಕಾಲ ವೀಸಾ ಕಾಲಾವಧಿ ನಿಗದಿಯಾಗಿರುತ್ತದೆ. ನಂತರ ಅದನ್ನು ಮತ್ತೆ ಮೂರು ವರ್ಷದವರೆಗೆ ವಿಸ್ತರಿಸಬಹುದು. ಈ ಆರು ವರ್ಷದ ನಂತರ ವ್ಯಕ್ತಿ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈಗ ಜಾರಿ ಮಾಡಲು ಹೊರಟಿರುವ ನಿಯಮದ ಪ್ರಕಾರ ಗ್ರೀನ್ ಕಾರ್ಡ್ ಪಡೆಯುವವರೆಗೆ ಅನಿರ್ದಿಷ್ಟಾವಧಿ ಈ ಎಚ್-1ಬಿ ವೀಸಾ ಕಾಲಾವಧಿಯನ್ನು ಇಷ್ಟು ದಿನ ವಿಸ್ತರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಯಾವುದೇ ರೀತಿಯಲ್ಲಿ ಇದನ್ನು ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ.

ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಅವಕಾಶ

ಗ್ರೀನ್ ಕಾರ್ಡ್ ಪ್ರಕ್ರಿಯೆ ಪ್ರಗತಿಯಲ್ಲಿದೆಯೋ ಅವರು ಗ್ರೀನ್ ಕಾರ್ಡ್ ಪಡೆಯುವವರೆಗೂ ಅಮೆರಿಕದಲ್ಲಿ ನೆಲೆಸಲು ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ ಚೀನಾ ಮತ್ತು ಭಾರತದಿಂದ ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಸಾಕಷ್ಟಿದೆ. ಅವರೆಲ್ಲ 10-12 ವರ್ಷಗಳಿಂದ ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ.

English summary
Trump administrations new proposal to not extend H-1B visa of those waiting for permanent residency or green card is likely to affect more than 5 lakh Indians working in the US.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia