ಆನ್-ಲೈನ್ ಕನ್ನಡ ಆರಂಭಿಸಲು ಹಂಪಿ ವಿವಿ ಚಿಂತನೆ

Posted By:

ಆನ್-ಲೈನ್ ಮೂಲಕ ಕನ್ನಡ ಶಿಕ್ಷಣ ನೀಡಲು ಹಂಪಿ ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ. ಅನಿವಾಸಿ ಕನ್ನಡಿಗರ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಗೆ ಮುಂದಾಗಿದ್ದು, ಶೀಘ್ರದಲ್ಲೇ ಆನ್-ಲೈನ್ ಕನ್ನಡ ಕಲಿಕೆ ಶುರುವಾಗಲಿದೆ.

ಇದಕ್ಕಾಗಿ ಮೂರರಿಂದ ಆರು ತಿಂಗಳ ಆನ್‌ಲೈನ್‌ ಕೋರ್ಸ್‌ ನಡೆಸಲು ಯೋಜನೆ ರೂಪಿಸಿದ್ದು, ಈ ಯೋಜನೆಗೆ, ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ, ಚಿತ್ರದುರ್ಗದ ಎಂಜಿನಿಯರ್‌ ನಾಗರಾಜ್‌ ಎಂಬುವವರ ಸಹಾಯ ಪಡೆಯಲು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಆನ್-ಲೈನ್ ಕನ್ನಡ

ಇತ್ತೀಚೆಗೆ ವಿ.ವಿ.ಗೆ ಭೇಟಿ ನೀಡಿದ್ದ ಅವರು, ಕೋರ್ಸ್‌ ಸ್ವರೂಪದ ಬಗ್ಗೆ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರೊಂದಿಗೆ ಚರ್ಚಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾಗರದಾಚೆಯ ಕನ್ನಡಿಗರ ಮಕ್ಕಳಲ್ಲಿ ಭಾಷೆಯ ಬಗ್ಗೆ ಪ್ರೀತಿ ಬೆಳೆಸುವುದು ಯೋಜನೆಯ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಭಾಷಾತಜ್ಞರಾಗಿದ್ದ ಪ್ರೊ. ಲಿಂಗದೇವರು ಹಳೆಮನೆ, ಹಲವು ವರ್ಷಗಳ ಹಿಂದೆಯೇ ಅನಿವಾಸಿ ಕನ್ನಡಿಗರಿಗೆ ಕನ್ನಡ ಕಲಿಸುವ ಸಂಬಂಧ ಪಠ್ಯಕ್ರಮ ರೂಪಿಸಿದ್ದರು. ಇದೀಗ ಅದನ್ನೂ ಮರುಪರಿಶೀಲಿಸಿ, ಅದರಲ್ಲಿನ ಕೆಲವು ಆಯ್ದ ಭಾಗಗಳನ್ನು ಕೋರ್ಸ್‌ಗೆ ಆಯ್ಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ಪಠ್ಯದ ಸ್ವರೂಪವನ್ನು ಅಂತಿಮಗೊಳಿಸಿದ ನಂತರ ತಂತ್ರಾಂಶ ರೂಪಿಸಿ ಕೋರ್ಸ್‌ ಆರಂಭಿಸುವುದಾಗಿ ಕುಲಪತಿಗಳು ತಿಳಿಸಿದ್ದಾರೆ. .

ಆನ್‌-ಲೈನ್‌ ಗ್ರಂಥಾಲಯ

ಆನ್‌-ಲೈನ್‌ ಕೋರ್ಸ್‌ ಜೊತೆಗೆ ಆನ್-ಲೈನ್ ಗ್ರಂಥಾಲಯ ಕೂಡ ವಿ.ವಿ.ಯಿಂದ ರೂಪುಗೊಳ್ಳಲಿದೆ. ವಿ.ವಿ.ಯ ಅಕ್ಷರ ಗ್ರಂಥಾಲಯದಲ್ಲಿರುವ 2.4 ಲಕ್ಷ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ತಂತ್ರಜ್ಞಾನ ಕ್ರಾಂತಿಯಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ನಮ್ಮ ವಿ.ವಿ.ಯ ಪ್ರಸಾರಾಂಗ ಹೊರತಂದಿರುವ ಪುಸ್ತಕಗಳ ಜೊತೆಗೆ ನಮ್ಮ ಗ್ರಂಥಾಲಯದಲ್ಲಿರುವ ಎಲ್ಲ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಓದಲು ವ್ಯವಸ್ಥೆ ಮಾಡಲಾಗುವುದು. ತಂತ್ರಾಂಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ' ಎಂದು ಪ್ರೊ. ಮಲ್ಲಿಕಾ ಘಂಟಿ ವಿವರಿಸಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಕೆಲಸ, ಸಾಂಸ್ಕೃತಿಕ, ಸಾಹಿತ್ಯಕ ಅನನ್ಯತೆಯನ್ನು ಪರಿಚಯಿಸಿಕೊಡಲಾಗುವುದು. ಪುಸ್ತಕ ಓದುವ ಪ್ರೀತಿ ಬೆಳೆಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

English summary
Hampi University to launch Online Kannada course to non residential kannadiga children very soon.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia