Happy Birthday Narendra Modi: ಪ್ರಧಾನಿ ಮೋದಿಯ ಜನ್ಮದಿನದಂದು ಮೋದಿಯವರ ಕುತೂಹಲಕಾರಿ ಸಂಗತಿಗಳು ಇಲ್ಲಿವೆ

ಭಾರತದ ಪ್ರಧಾನ ಮಂತ್ರಿ ಮೋದಿಯವರು ನಾಳೆ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮೋದಿಯವರು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಟ್ರೆಂಡ್‌ಸೆಟರ್ ಆಗಿದ್ದಾರೆ. ಮೋದಿಯವರು ವಿಶೇಷವಾಗಿ ಯುವಕರಲ್ಲಿ ಪ್ರಭಾವ ಬೀರಿದ ಜನಪ್ರಿಯ ನಾಯಕರಾಗಿದ್ದಾರೆ ಮತ್ತು ಉತ್ತಮ ಭಾಷಣ ಕೌಶಲ್ಯವನ್ನು ಹೊಂದಿರುವ ಜನನಾಯಕರೂ ಹೌದು.

 

ಪ್ರಧಾನಿ ಮೋದಿಯ ಬಗ್ಗೆ ನೀವು ತಿಳಿದಿರದ ಕುತೂಹಲಕಾರಿ ಸಂಗತಿಗಳಿವು

ದಾಮೋದರ್ ದಾಸ್ ಮುಲ್ಚಂದ್ (ತಂದೆ) ಮತ್ತು ಹೀರಾಬೆನ್ ಮೋದಿ (ತಾಯಿ) ದಂಪತಿಗೆ ಮೂರನೇ ಮಗುವಾಗಿ (ಆರರಲ್ಲಿ) ಜನಿಸಿದ ನರೇಂದ್ರ ದಾಮೋದರ್ ದಾಸ್ ಮೋದಿ ಅವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಭಾರತದಲ್ಲಿ 14 ನೇ ಪ್ರಧಾನಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮೋದಿಯವರ ಬಗ್ಗೆ ನೀವು ತಿಳಿದಿರದ ಕೆಲವು ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ತಿಳಿಸಲಾಗಿದೆ.

ಪ್ರಧಾನಿ ಮೋದಿಯ ಬಗ್ಗೆ ನೀವು ತಿಳಿದಿರದ ಕುತೂಹಲಕಾರಿ ಸಂಗತಿಗಳಿವು

ನರೇಂದ್ರ ಮೋದಿಯವರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

* ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಸೆಪ್ಟೆಂಬರ್ 17, 1950 ರಂದು ಜನಿಸಿದರು. ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿಯಾಗಿದ್ದಾರೆ.
* ಮೋದಿಯವರು ಅಕ್ಟೋಬರ್ 3, 1972 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸೇರಿದರು.

ಪ್ರಧಾನಿ ಮೋದಿಯ ಬಗ್ಗೆ ನೀವು ತಿಳಿದಿರದ ಕುತೂಹಲಕಾರಿ ಸಂಗತಿಗಳಿವು

* 1987ರಲ್ಲಿ ಅಹಮದಾಬಾದ್ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತು ಅದೇ ವರ್ಷವೇ ಅವರು ಬಿಜೆಪಿಗೆ ಸೇರಿದರು. ಅಂದಿನಿಂದ 2000 ರಲ್ಲಿ ಹೊರತುಪಡಿಸಿ, ಅಹಮದಾಬಾದ್‌ನಲ್ಲಿ ನಡೆದ ನಾಗರಿಕ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವು ಎಂದಿಗೂ ಸೋತಿಲ್ಲ. ವಿಪರ್ಯಾಸವೆಂದರೆ ಆ ಸಮಯದಲ್ಲಿ ಮೋದಿ ಗುಜರಾತ್ ಹೊರಗಿದ್ದರು.
* ಅಕ್ಟೋಬರ್ 2001 ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನರೇಂದ್ರ ಮೋದಿಯವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ನೇಮಿಸಿದರು.
* ಮೋದಿಯವರು ಟೈಮ್ ಮ್ಯಾಗ್ ಜಿನ್ ಓದುಗರ ಸಮೀಕ್ಷೆಯನ್ನು ಗೆದ್ದು 2014 ರಲ್ಲಿ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದರು.
* 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದಾಗ ಸತತ ಎರಡು ಬಾರಿ ಪೂರ್ಣ ಬಹುಮತ ಪಡೆದ ಮೊದಲ ಕಾಂಗ್ರೆಸ್ ಅಲ್ಲದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ಮೋದಿಯವರು ಸ್ವಾಮಿ ವಿವೇಕಾನಂದರ ಉತ್ತಮ ಅನುಯಾಯಿ.
* ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ನಂತರ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ ವಿಶ್ವದ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ನಾಯಕರಾಗಿದ್ದಾರೆ. ಟ್ವಿಟ್ಟರ್ ನಲ್ಲಿ 50 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
* ನರೇಂದ್ರ ಮೋದಿಯವರನ್ನು ಭಾರತದ ಅತ್ಯಂತ ಟೆಕ್ನೋ-ಬುದ್ಧಿವಂತ ನಾಯಕ ಎಂದು ಪರಿಗಣಿಸಲಾಗಿದೆ. ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಲಿಂಕ್ಡ್‌ಇನ್ ಮತ್ತು ವೀಬೊ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Narendra Modi birthday; Here we are giving interesting facts about prime minister of india in Kannada
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X