HCL First Careers Program For Freshers: ಐಟಿ ಸಂಸ್ಥೆಗಳಲ್ಲಿ ಹೊಸಬರು ಉದ್ಯೋಗ ಪಡೆಯಲು ಹೆಚ್‌ಸಿಎಲ್ ತರಬೇತಿ ಕಾರ್ಯಕ್ರಮ

ನೀವು ಎಚ್‌ಸಿಎಲ್ ಟೆಕ್ನಾಲಜೀಸ್‌ ನಂತಹ ಐಟಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆಯಲು ಆಲೋಚಿಸುತ್ತಿದ್ದರೆ ನಿಮಗಾಗಿಯೇ ಒದಗಿದೆ ಒಂದು ಉತ್ತಮ ಅವಕಾಶ. ಐಟಿ ವಲಯದಲ್ಲಿ ಬಹು ಪ್ರಖ್ಯಾತಿ ಹೊಂದಿರುವ ಎಚ್‌ಸಿಎಲ್ ಮೊದಲ ವೃತ್ತಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಐಟಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವುದು ಹೇಗೆ  ಹೆಚ್‌ಸಿಎಲ್ ತರಬೇತಿ

ಏನಿದು ವೃತ್ತಿ ತರಬೇತಿ ಕಾರ್ಯಕ್ರಮ:

ಐಟಿ ಸೇವೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಆಲೋಚಿಸುತ್ತಿರುವ ಆಕಾಂಕ್ಷಿಗಳಿಗೆ ಕಂಪನಿಯ ಆಂತರಿಕ ತರಬೇತಿ ಕಾರ್ಯಕ್ರಮ ಇದಾಗಿದೆ.

ಈ ತರಬೇತಿ ಕಾರ್ಯಕ್ರಮ ಹೇಗಿರತ್ತೆ ?:

ಎಂಜಿನಿಯರಿಂಗ್ ಪದವೀಧರರಿಗೆ ಐಟಿ ಉದ್ಯಮದಲ್ಲಿ ಬೇಡಿಕೆಯಿರುವ ಪ್ರಮುಖ ಕೌಶಲ್ಯಗಳನ್ನು ತರಬೇತಿ ನೀಡಲಾಗುತ್ತದೆ. ಐಟಿ ಉದ್ಯಮದಲ್ಲಿ ಉದ್ಯೋಗಕ್ಕೆ ಅಗತ್ಯವಾದ ತಾಂತ್ರಿಕ, ಪ್ರಾಯೋಗಿಕ ಮತ್ತು ವ್ಯಕ್ತಿತ್ವ ವಿಕಸನ ಕೌಶಲಗಳನ್ನು ಹೊಸಬರು ಕರಗತ ಮಾಡಿಕೊಳ್ಳುವ ಮಾಹಿತಿಯನ್ನು ಈ ತರಬೇತಿ ಒಳಗೊಂಡಿದೆ. ಒಟ್ಟಾರೆ ಅಭ್ಯರ್ಥಿಗಳು ಶುಲ್ಕ ಪಾವತಿಸಿ ಈ ತರಬೇತಿಗೆ ಹಾಜರಾಗಬಹುದು.

ಎಚ್‌ಸಿಎಲ್ ತರಬೇತಿ ಕಾರ್ಯಕ್ರಮ ಶುಲ್ಕದ ವಿವರ:

ಹೆಚ್‌ಸಿಎಲ್ ಮೊದಲ ವೃತ್ತಿ ತರಬೇತಿ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳು ಶುಲ್ಕವಾಗಿ ರೂ 1.5 ಲಕ್ಷ ಮತ್ತು ಅನ್ವಯವಾಗುವ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಕೋರ್ಸ್ ಮುಂದುವರಿಸಲು ಬಯಸುವ ಅಭ್ಯರ್ಥಿಗಳಿಗೆ ಎಚ್‌ಸಿಎಲ್ ಬ್ಯಾಂಕ್ ಸಾಲದ ನೆರವು ನೀಡುತ್ತದೆ.

ತರಬೇತಿಗೆ ಆಯ್ಕೆ ಪ್ರಕ್ರಿಯೆ:

ಆರು ತಿಂಗಳ ಅವಧಿಯ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳನ್ನು ನಾಲ್ಕು ಹಂತದ ಸಂದರ್ಶನ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು ನಂತರ ಕೌನ್ಸೆಲಿಂಗ್ ಸೆಶನ್‌ಗಳು ನಡೆಯಲಿವೆ ಮತ್ತು ಆನ್‌ಲೈನ್ ಆಪ್ಟಿಟ್ಯೂಡ್ ಪರೀಕ್ಷೆಯನ್ನು ಬರೆಯಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಂತಿಮ ಸಂದರ್ಶನ ಸುತ್ತಿಗೆ ಆಹ್ವಾನಿಸಲಾಗುವುದು.

ತರಬೇತಿ ನಂತರ ಮುಂದೇನು ?

ತರಬೇತಿ ಕಾರ್ಯಕ್ರಮ ಯಶಸ್ವಿಯಾದ ನಂತರ ಅಭ್ಯರ್ಥಿಗಳಿಗೆ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಒಂದು ಕ್ಯಾಂಪಸ್‌ನಲ್ಲಿ ಖಾತರಿಯ ಉದ್ಯೋಗಗಳನ್ನು ನೀಡಲಾಗುತ್ತದೆ. ಎಚ್‌ಸಿಎಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.

ಎಚ್‌ಸಿಎಲ್ ಮೊದಲ ವೃತ್ತಿ ಕಾರ್ಯಕ್ರಮಕ್ಕೆ ಯಾರು ಸೇರಬಹುದು?

ಐಟಿ ಅಥವಾ ಕಂಪ್ಯೂಟರ್ ಸೈನ್ಸ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಎಚ್‌ಸಿಎಲ್ ಮೊದಲ ವೃತ್ತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಅವರು ಪರೀಕ್ಷೆಗೆ ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸಲು ಬಿಇ / ಬಿಟೆಕ್ / ಎಂಸಿಎ / ಎಂಟೆಕ್ / ಎಂಎಸ್ಸಿ (ಐಟಿ / ಕಂಪ್ಯೂಟರ್ ಸೈನ್ಸ್) ನಲ್ಲಿ ಪದವಿ ಹೊಂದಿರಬೇಕು.

ಇದಲ್ಲದೆ, ಅಭ್ಯರ್ಥಿಗಳು HCL ಮೊದಲ ವೃತ್ತಿ ಕಾರ್ಯಕ್ರಮಕ್ಕೆ ಅರ್ಹತೆ ಪಡೆಯಲು ತಮ್ಮ 10+2 ಮತ್ತು ಪದವಿ ಅಥವಾ ಸ್ನಾತಕೋತ್ತರ ಪರೀಕ್ಷೆಗಳಲ್ಲಿ 65% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು. 2018, 2019, 2020 ಮತ್ತು 2021 ರ ಪಾಸ್‌ಔಟ್‌ಗಳು ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
HCL going to conduct first careers program to train the freshers how to get jobs in IT firms.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X