ಎಸ್ಎಸ್ಎಲ್ಸಿ ಮೌಲ್ಯಮಾಪನ: ವಿದ್ಯಾರ್ಥಿಗಳ ಉತ್ತರಕ್ಕೆ ಸುಸ್ತಾದ ಶಿಕ್ಷಕರು

Posted By:

ಉತ್ತರ ಪತ್ರಿಕೆಗಳಲ್ಲಿ ಸಿನಿಮಾ ಹಾಡು ಬರೆಯುವುದು, ಬೇಕಾಬಿಟ್ಟಿ ತಮಗೆ ತೋಚಿದ್ದನ್ನು ಗೀಚುವುದು ಹೀಗೆ ಪರೀಕ್ಷೆಗೆ ಸಂಬಂಧಿಸಿದ ಕೆಲವು ವಿಚಿತ್ರ ಸುದ್ದಿಗಳನ್ನು ಎಲ್ಲೋ ಕೇಳಿದ್ದೆವು ಮತ್ತು ಸಿನಿಮಾಗಳಲ್ಲಿ ನೋಡಿದ್ದೆವು. ಆದರೆ ರಾಮನಗರದ ಮೌಲ್ಯ ಮಾಪನ ಕೇಂದ್ರಕ್ಕೆ ಬಂದಿದ್ದ ಉತ್ತರ ಪತ್ರಿಕೆಗಳಲ್ಲಿದ್ದ ಉತ್ತರ ರೀತಿಯ ಬರಹಗಳು ಅವೆಲ್ಲವನ್ನು ನಿಜ ಮಾಡಿವೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಬಹುಮುಖ್ಯವಾದ ಘಟ್ಟ. ಪರೀಕ್ಷೆಯಲ್ಲಿ ಉತ್ತಮವಾಗಿ ಅಂಕಗಳಿಸಬೇಕೆಂದು ಹಗಲು ರಾತ್ರಿ ಓದುವವರಿದ್ದಾರೆ. ಒಂದು ಚೂರು ತಪ್ಪಾದರೆ ಎಲ್ಲಿ ಅಂಕಗಳು ಕಡಿಮೆಯಾಗುತ್ತವೆ ಎಂದು ಕೊರಗುವವರಿದ್ದಾರೆ. ಆದರೆ ಇನ್ನೂ ಕೆಲವರು ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಗಳ ಮಾನವನ್ನು ಹರಾಜಾಕುವ ರೀತಿ ಉತ್ತರಿಸಿ ಮೌಲ್ಯಮಾಪಕರಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ.

ಸಿನಿಮಾ ಹಾಡು, ಲವ್ ಲೆಟರ್, ದಯನೀಯವಾದ ಬೇಡಿಕೆ..ಇಂಥವನ್ನೆಲ್ಲ ಉತ್ತರ ಪತ್ರಿಕೆಗಳಲ್ಲಿ ಬರೆದಿದ್ದಾರೆ ವಿದ್ಯಾರ್ಥಿಗಳು. ತಮ್ಮ ಮನಸ್ಸಿಗೆ ಬಂದದ್ದನ್ನು ಬರೆದು ಪರೀಕ್ಷೆಯನ್ನೇ ಸಮರ್ಪಕವಾಗಿ ಮಾಡದೆ, ತಮಗೆ ತೋಚಿದಂತೆ ಗೀಚಿದ, ಮೌಲ್ಯಮಾಪಕರಿಗೆ ಮನವಿ ಮಾಡುವ ಬರಹಗಳು ಕಂಡು ಬಂದಿವೆ, ಅಷ್ಟೇ ಅಲ್ಲದೇ ಈ ಉತ್ತರಗಳು ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿವೆ.

ಕಿಂಗ್ ಎಂದರೆ ಸಿಗರೇಟ್!

ಆಂಗ್ಲಪದದ ಕನ್ನಡ ಅರ್ಥ ಬರೆಯಿರಿ ಎಂಬುದಕ್ಕೆ ಮೂರರ ಪೈಕಿ ಒಂದಕ್ಕೆ ಮಾತ್ರ ಬರೆದಿರುವ ವಿದ್ಯಾರ್ಥಿ ಕಿಂಗ್ ಎಂಬುದಕ್ಕೆ ಕನ್ನಡದಲ್ಲಿ ಸಿಗರೇಟ್ ಎಂದು ಬರೆದಿದ್ದರೆ.

ಉತ್ತರಗಳನ್ನು ನೋಡಿ ಸುಸ್ತಾದ ಶಿಕ್ಷಕರು

ಉತ್ತರ ಪತ್ರಿಕೆಯಲ್ಲಿ ಮುಂಗಾರು ಮಳೆಯ ಹಾಡು!

ವಿಜ್ಞಾನದ ವಿಷಯದ ಸಂಗ್ರಹಮೂಲ ಮತ್ತು ವಿನಿಮಯ ಮೂಲಗಳ ನಡುವಣ ಯಾವುದಾದರೂ ಎರಡು ವ್ಯತ್ಯಾಸಗಳನ್ನು ಬರೆಯಿರಿ ಎಂಬ ಪ್ರಶ್ನೆಗೆ "ಅನಿಸುತಿದೆ ಯಾಕೋ ಇಂದು...." ಎಂಬ ಸಿನಿಮಾದ ಹಾಡನ್ನು ಬರೆದಿಟ್ಟಿದ್ದಾರೆ.

ಉತ್ತರಗಳನ್ನು ನೋಡಿ ಸುಸ್ತಾದ ಶಿಕ್ಷಕರು

ಐ ಲವ್ ಯೂ, ಐ ಮಿಸ್ ಯೂ!

ನೆಹರು ಅವರು ಅಂಬೇಡ್ಕರ್ ರನ್ನು ಕಾನೂನು ಸಚಿವರನ್ನಾಗಿ ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ "ಐ ಲವ್ ಯು ಫಸ್ಟ್ ಲೋ ಮಿನಿಸ್ಟರ್ ಆಫ್ ಇಂಡಿಯಾ ಎಂದು ಇಂಗ್ಲಿಷ್ ನಲ್ಲಿ ಬರೆದು ಕನ್ನಡದಲ್ಲಿ ಮತ್ತೆ ಬನ್ನಿ ಪ್ರೀತಿಸೋಣ" ಎಂದು ಉತ್ತರಿಸಿದ್ದಾರೆ.

ಉತ್ತರಗಳನ್ನು ನೋಡಿ ಸುಸ್ತಾದ ಶಿಕ್ಷಕರು

ದಯವಿಟ್ಟು ಪಾಸು ಮಾಡಿ

ಶಾಲೆಯಲ್ಲಿ ಗಣಿತ ಶಿಕ್ಷಕರಿಲ್ಲ, ಅಪ್ಪ ತೀರಿಕೊಂಡಿದ್ದಾರೆ ದಯವಿಟ್ಟು  ಅರವತ್ತು ನಂಬರು ಕೊಟ್ಟು ಪಾಸು ಮಾಡಿ ಎಂಬ ಮನವಿ ಕೂಡ ಉತ್ತರ ಪತ್ರಿಕೆಗಳಲ್ಲಿ ಕಂಡು ಬಂದಿದೆ. 

ಉತ್ತರಗಳನ್ನು ನೋಡಿ ಸುಸ್ತಾದ ಶಿಕ್ಷಕರು

ಒಟ್ಟಾರೆ ವಿಭಿನ್ನ ಮತ್ತು ವಿಚಿತ್ರವಾಗಿ ಬರೆದಿರುವ ಉತ್ತರ ಪತ್ರಿಕೆಗಳನ್ನು ಕಂಡ ಮೌಲ್ಯಮಾಪಕರು ಮಾತ್ರ ಸುಸ್ತಾಗಿದ್ದಾರೆ. ಪರೀಕ್ಷೆ ಬಗೆಗಿನ ಗಂಭೀರತೆ ಮತ್ತು ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಈ ಉತ್ತರ ಪತ್ರಿಕೆಗಳು ಸಾಕ್ಷಿ ಎಂಬಂತಿವೆ.

ರಾಜ್ಯಾದ್ಯಂತ ಎಷ್ಟು ಸಿಕ್ಕಿವೆಯೋ ರಾಜ್ಯಾದ್ಯಂತ ಇಂತಹ ಅದೆಷ್ಟು ಉತ್ತರ ಪತ್ರಿಕೆಗಳು ಮೌಲ್ಯಮಾಪಕರಿಗೆ ಸಿಕ್ಕಿವೆಯೋ? ಒಂದರಿಂದ ಹತ್ತನೇ ತರಗತಿವರೆಗೆ ಹೇಗೋ ತಳ್ಳಿಕೊಂಡು ಬರುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವಾಗ ಏನೇನೋ ಬರೆದಿಟ್ಟು ಹೋಗುತ್ತಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಅಣಕ ಮಾಡುವಂತಿದೆ.

English summary
evaluators shocked by the hilarious answers written by crazy students in SSLC answer booklets

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia