ಎಸ್ ಎಸ್ ಎಲ್ ಸಿ ಪರೀಕ್ಷೆ: ಹಿಂದಿ ಪ್ರಶ್ನೆಪತ್ರಿಕೆ ಸೋರಿಕೆ

Posted By:

ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಮೂಡಲಗಿಯಲ್ಲಿ ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆ ನಡೆದಿದೆ. ಇಂದು ತೃತಿಯ ಭಾಷೆಯ ಪರೀಕ್ಷೆಗಳು ನಡೆಯುತ್ತಿದ್ದು ಹಿಂದಿ ಪ್ರಶ್ನೆಪತ್ರಿಕೆಯ ಅಕ್ರಮ ನಡೆದಿದೆ.

ಇಂದು ರಾಜ್ಯಾದ್ಯಂತ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, 20 ಅಂಕಗಳ ಪ್ರಶ್ನೆಗಳನ್ನ ಬಿಳಿಹಾಳೆಯಲ್ಲಿ ಬರೆದು ಲೀಕ್ ಮಾಡಲಾಗಿದೆ. ಸೋರಿಕೆಯಾದ 20 ಅಂಕಗಳ ಪ್ರಶ್ನೆಗಳಿಗೆ ಉತ್ತರ ಸಿದ್ದಪಡಿಸಿ ಕಿಡಿಗೇಡಿಗಳು ಹಣಕ್ಕೆ ಮಾರಾಟ ಮಾಡಿರುವುದಾಗಿ ವರದಿಯಾಗಿದೆ.

20 ಅಂಕಗಳ ಪ್ರಶ್ನೆ ಸೋರಿಕೆ

20 ಅಂಕಗಳ ಪ್ರಶ್ನೆಗಳನ್ನು ಕೈಯಲ್ಲಿ ಬರೆದು ಬಹಿರಂಗಗೊಳಿಸಲಾಗಿದೆ. 'ಸಾಲು ಮರದ ತಿಮ್ಮಕ್ಕ'ನ ಕುರಿತಾದ ಒಂದು ಪ್ರಶ್ನೆ ಮತ್ತು 'ಸಾಮಾಜಿಕ ಜಾಲತಣಗಳಿಂದ ಸಮಾಜದ ಮೇಲಿನ ದುಷ್ಪರಿಣಾಮ' ಕುರಿತಾದ ಪ್ರಶ್ನೆಗಳು ಬಹಿರಂಗವಾಗಿವೆ. ಪ್ರಬಂಧ ರೂಪದ ಪ್ರಶ್ನೆಗಳು ಇದಾಗಿದ್ದು ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಗಳಿಸಬಹುದಾಗಿದೆ.

 ಹಿಂದಿ ಪ್ರಶ್ನೆಪತ್ರಿಕೆ ಸೋರಿಕೆ

ಕೇವಲ ಪ್ರಶ್ನೆಗಳನ್ನು ಸೋರಿಕೆ ಮಾಡಿರುವುದು ಮಾತ್ರವಲ್ಲದೇ ಆ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಕೊಠಡಿಗಳಿಗೆ ರವಾನಿಸಲಾಗಿದೆ. ಅಲ್ಲದೆ ಆ ಉತ್ತರಗಳನ್ನು ಹಣಕ್ಕಾಗಿ ಮಾರಾಟ ಕೂಡ ಮಾಡಿರುವುದಾಗಿ ವರದಿಯಾಗಿದೆ.

ಪರೀಕ್ಷೆ ಶುರುವಾಗಿ ಒಂದು ಗಂಟೆಯಲ್ಲೇ ಅಂದರೆ ಬೆಳಗ್ಗೆ 10:30 ರಲ್ಲಿ  ಈ ಘಟನೆ  ನಡೆದಿದ್ದು ಸ್ಥಳೀಯರಿಂದಲೇ ಮಾರಾಟವಾಗಿದೆ ಎನ್ನಲಾಗುತ್ತಿದೆ. ಕೈಬರಹದಲ್ಲಿರುವ ಪ್ರಶ್ನೆಗಳು ಮತ್ತು ಉತ್ತರಗಳ ಹಾಳೆಯ ಫೋಟೋಗಳನ್ನು  ಕ್ಲಿಕ್ಕಿಸಿ ಮೊಬೈಲ್ ಮೂಲಕವೂ ರವಾನೆ ಮಾಡಲಾಗಿದೆ. ಇನ್ನು ಈ ಸೋರಿಕೆ ಪ್ರಕಣದಲ್ಲಿ ಶಾಲಾ ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. 

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸ್ಥಳೀಯ ಪೊಲೀಸರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

English summary
SSLC examination Hindi language question paper leaked in mudalagi govt school today

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia