ಮದರಸ ಪರೀಕ್ಷೆಯಲ್ಲಿ ಹಿಂದೂ ವಿದ್ಯಾರ್ಥಿನಿ ಸಾಧನೆ

Posted By:

ಮದರಸ ಪರೀಕ್ಷೆಯಲ್ಲಿ ಹಿಂದೂ ವಿದ್ಯಾರ್ಥಿನಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಪಶ್ಚಿಮ ಬಂಗಾಳ ಪರೀಕ್ಷಾ ಮಂಡಳಿಯ ಮದರಸ ಪರೀಕ್ಷೆಯಲ್ಲಿ 16ರ ಹರೆಯದ ಪ್ರಶಮಾ ಸಸ್ಮಾಲ್ ಎಂಬ ಹಿಂದೂ ವಿದ್ಯಾರ್ಥಿನಿ 10 ನೇ ತರಗತಿಯಲ್ಲಿ 8ನೇ ರ‍್ಯಾಂಕ್‌ ಪಡೆದಿದ್ದು ಅಚ್ಚರಿಗೆ ಕಾರಣವಾಗಿದ್ದಾಳೆ.

ಹೌರಾ ಜಿಲ್ಲೆಯ ಖಲಾತ್‍ಪುರ್ ಹೈ ಮದರಸದಲ್ಲಿ ಕಲಿಯುತ್ತಿರುವ ಪ್ರಶಮಾ 800 ಅಂಕಗಳ ಪರೀಕ್ಷೆಯಲ್ಲಿ 729 ಅಂಕಗಳನ್ನು (ಶೇ.91.9) ಗಳಿಸಿದ್ದಾಳೆ.

ಹಿಂದೂ ವಿದ್ಯಾರ್ಥಿನಿ ಸಾಧನೆ

ಮದರಸದಲ್ಲಿ 8ನೇ ರ್ಯಾಂಕ್ ಪಡೆದಿರುವ ಪ್ರಶಮಾ ಸಸ್ಮಾಲ್ ಇದೇ ಶಾಲೆಯಲ್ಲಿ 12ನೇ ತರಗತಿವರೆಗೆ ಓದನ್ನು ಮುಂದುವರೆಸುವುದಾಗಿ ಹೇಳಿದ್ದಾಳೆ. ಅವರ ಹಳ್ಳಿಯಲ್ಲಿ ಹಿಂದೂ ಶಾಲೆ ಇದ್ದರೂ  ತನ್ನ ತಂದೆಯ ಸ್ನೇಹಿತರ ನೆರವಿನಿಂದ ನಾನು ಮದರಸ ಸೇರಿದೆ ಎನ್ನುವ ಸಸ್ಮಾಲ್ ಅಲ್ಲಿಯ ಶಿಕ್ಷಕರನ್ನು ಕೊಂಡಾಡಿದ್ದಾಳೆ.

ಪ್ರಶಮಾ ತಂದೆಯ ಹರ್ಷ

ಇನ್ನೂ ಅಂಕಪಟ್ಟಿಯನ್ನೇ ನೋಡದ ಪ್ರಶಮಾ ಕುಟುಂಬದವರು ಇಸ್ಲಾಂ ಪರಿಚಯ್ ನಲ್ಲಿ 97 ಅಂಕ ಮತ್ತು ಅರೇಬಿಕ್‍ನಲ್ಲಿ 64 ಅಂಕಗಳು ಸಿಕ್ಕಿರುವ ಸುದ್ದಿ ಕೇಳಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಸ್ಥಳೀಯ ಪಂಚಾಯತ್ ಅಧಿಕಾರಿಯಾಗಿರುವ ಪ್ರಶಮಾ ತಂದೆಮಗಳ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಅವರ ಕುಟುಂಬದಲ್ಲಿ ಯಾರೂ ಕೂಡ ಮದರಸ ವಿಷಯಗಳನ್ನು ಕಲಿತಿಲ್ಲ ಎಂದು ಹೇಳುವ ಪ್ರಶಮಾ ತಂದೆ, ಅವರ ಮಗ ಪ್ರಮಿತ್ ನನ್ನು ಮದರಸ ಸೇರಿಸಿದ್ದಾರೆ. ಪ್ರಶಮಾ ಸಹೋದರ ಪ್ರಮಿತ್ ಕೂಡಾ ಇದೇ ಮದರಸದಲ್ಲಿ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ಬಾಲಕಿಯರೇ ಮೇಲುಗೈ

ಮತ್ತೊಂದು ಅಚ್ಚರಿಯ ವಿಷಯವೆಂದರೆ ಈ ಬಾರಿಯ ಮದರಸ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಅಷ್ಟೇ ಅಲ್ಲದೇ ಒಟ್ಟು 52,115 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು ಇದರಲ್ಲಿ 36,276 (ಶೇ.69) ಬಾಲಕಿಯರಾಗಿದ್ದಾರೆ. ಇನ್ನು ಶೇ. 4.3ರಷ್ಟು  ಮುಸ್ಲಿಮೇತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

English summary
A 16-year-old Hindu girl sprang a surprise by making it to the merit list in the results of the West Bengal Board of Madrasah Education Examination 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia