ಭಾರತೀಯ ಸೇನೆ ಇತಿಹಾಸ ಮಾತ್ರ ರೋಚಕ!

ಬ್ರಿಟೀಷರು ಭಾರತೀಯರನ್ನೇ ತಮ್ಮ ಸೇನೆಗೆ ಬಳಸಿಕೊಳ್ಳುತ್ತಿದ್ದರು, 1947ರಲ್ಲಿ ಭಾರತದ ವಿಭಜನೆಯಾಗುವುದಕ್ಕಿಂತ ಮುನ್ನ ಬ್ರಿಟಿಷ್‌‌‌ ಭಾರತೀಯ‌ ಸೇನೆ ಯು ಭಾರತದಲ್ಲಿನ ಬ್ರಿಟಿಷ್‌‌‌ ರಾಜ್ ಆಢಳಿತದ ಪ್ರಧಾನ ಸೇನೆಯಾಗಿತ್ತು.

By Kavya

ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬ್ರಿಟೀಷರ ದಾಸ್ಯದಿಂದ ಮುಕ್ತಿ ಹೊಂದಿದ ಸ್ವತಂತ್ರವಾಗಿ ರೂಪುಗೊಳ್ಳುವುದರಲ್ಲಿ ಅಸಂಖ್ಯಾತ ಮಂದಿಯ ತ್ಯಾಗ ಬಲಿಧಾನಗಳಿವೆ.

ಸ್ವಾತಂತ್ರ್ಯ ದಿನಾಚರಣೆ ದಿನದಂದು ನಮ್ಮನ್ನು ಹೆಚ್ಚು ಸೆಳೆಯುವುದು ಭಾರತೀಯ ಸೇನೆಯ ಪೆರೇಡ್, ಪೊಲೀಸ್ ಪೆರೇಡ್, ವಿದ್ಯಾರ್ಥಿಗಳ ಎನ್ ಎಸ್ ಎಸ್, ಎನ್ ಸಿ ಸಿ ಮತ್ತು ಸೇವಾದಳದ ಪೆರೇಡ್ ಗಳು.

ಪೆರೇಡ್ ಗಳನ್ನು ನಾವು ಎಷ್ಟು ಖುಷಿ ಯಿಂದ ನೋಡುತ್ತೇವೆಂದರೆ ನಮಗೂ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂದೆನಿಸುತ್ತದೆ. ಇಂದು ನಾವೆಲ್ಲ ಸಂಭ್ರಮದಲ್ಲಿರಲು ಕಾರಣ ನಮ್ಮ ಭಾರತೀಯ ಸೇನೆ. ಗಡಿಯಲ್ಲಿ ನಿಂತು ಶತ್ರು ರಾಷ್ಟ್ರಗಳಿಂದ ನಮಗೆ ಯಾವ ರೀತಿಯು ತೊಂದರೆ ಆಗಬಾರದೆಂದು ನಮ್ಮ ಕಾಯುವ ಸೈನಿಕರ ಸಾಹಸಕ್ಕೆ ನಾವು ತಲೆಬಾಗಲೇಬೇಕು.

ಭಾರತೀಯ ಸೇನೆ ಹುಟ್ಟಿದ ಪರಿ

ಇಂದು ಇಷ್ಟು ಶಕ್ತಿಯುತವಾಗಿ ಬೆಳೆದಿರುವ ಭಾರತೀಯ ಸೇನೆ ಇತಿಹಾಸ ಮಾತ್ರ ರೋಚಕಗೊಳಿಸುವಂತದ್ದು. ಏಕೆಂದರೆ ಬ್ರಿಟೀಷರು ಈ ದೇಶದಲ್ಲಿ ಇರುವವರೆಗೂ ಭಾರತೀಯರನ್ನೇ ತಮ್ಮ ಸೇನೆಗೆ ಬಳಸಿಕೊಳ್ಳುತ್ತಿದ್ದರು. 1947ರಲ್ಲಿ ಭಾರತದ ವಿಭಜನೆಯಾಗುವುದಕ್ಕಿಂತ ಮುನ್ನ ಬ್ರಿಟಿಷ್‌‌‌ ಭಾರತೀಯ‌ ಸೇನೆ ಯು ಭಾರತದಲ್ಲಿನ ಬ್ರಿಟಿಷ್‌‌‌ ರಾಜ್‌ನ/ಆಡಳಿತದ ಪ್ರಧಾನ ಸೇನೆಯಾಗಿತ್ತು.

ಇದನ್ನು ಬ್ರಿಟಿಷ್‌‌‌ ಭಾರತೀಯ‌ ಸೇನೆ ‌ಎಂಬ ಅಂಕಿತದಿಂದ ನಿಯುಕ್ತಗೊಳಿಸಿರಲಿಲ್ಲ ಬದಲಿಗೆ ಭಾರತೀಯ‌ ಸೇನೆ ‌ಎಂದೇ ಅಂಕಿತಗೊಳಿಸಲಾಗಿತ್ತು.

ಐಎನ್ಎ ಮೊದಲ ಭಾರತೀಯ ಸೇನೆ

ಇಂಡಿಯನ್ ನ್ಯಾಷನಲ್ ಆರ್ಮಿ- ಈ ಹೆಸರಿನ ಪ್ರಸಿದ್ಧ ಸೈನ್ಯವನ್ನು ಕಟ್ಟಿದವರು ಸುಭಾಸ್‍ಚಂದ್ರ ಬೋಸ್. ಮೊದಲಿಗೆ ಈ ಸೇನೆಯನ್ನು ಮೋಹನ್ ಸಿಂಗ್ ಸಿಂಗಾಪುರದಲ್ಲಿ ಸ್ಥಾಪಿಸಿದ್ದರು, ರಾಸ್ ಬಿಹಾರಿ ಬೋಸ್ ಜೊತೆ ಸೇರಿದ ಸುಭಾಷ್ ಚಂದ್ರ ಬೋಸ್ ಭಾರತದಲ್ಲಿ ಈ ಸೇನೆಯ ಜವಾಬ್ದಾರಿ ಹೊತ್ತು ಬಲಿಷ್ಠಗೊಳಿಸಿದರು.

ಸುಭಾಷರು ಆಜಾದ್ ಹಿಂದ್ ಫೌಜ್ ಎಂಬ ಸೈನ್ಯ ಕಟ್ಟಿ ಅದರ ಪ್ರಧಾನ ದಂಡಾಧಿಕಾರಿಯಾದರು. ನನಗೆ ನಿಮ್ಮ ಶಕ್ತಿ ಕೊಡಿ, ನಾನು ನಿಮಗೆ ಸ್ವತಂತ್ರ ಭಾರತವನ್ನು ನೀಡುತ್ತೇನೆ, ಸ್ವಾತಂತ್ರ್ಯ ಬೇಡಿ ಪಡೆಯುವ ವಸ್ತುವಲ್ಲ, ರಕ್ತ ಹರಿಸಿ ಬಲಿದಾನ ಮಾಡಿ ಪಡೆಯುವ ವಸ್ತು ಎಂದು ಹೇಳಿದ ಬೋಸ್, 'ಜೈ ಹಿಂದ್‌' ಘೋಷಣೆ ಕೊಟ್ಟರು.

ದಿ ಇಂಡಿಯನ್ ನ್ಯಾಷನಲ್ ಆರ್ಮಿ ಅಥವಾ ಆಝಾದ್ ಹಿಂದ್ ಫೌಜ್ ಎರಡನೆಯ ಮಹಾಯುಧ್ಧದಲ್ಲಿ ಇಂಪೀರಿಯಲ್ ಜಪಾನ್ ಆರ್ಮಿ ಯೊಂದಿಗೆ ಮಿತ್ರಸೈನ್ಯದ ವಿರುದ್ಧ ಹೋರಾಡಿದ ಭಾರತೀಯ ಸಂಸ್ಥೆ. ಎರಡನೆಯ ಮಹಾಯುಧ್ಧದ ಸಮಯದಲ್ಲಿ ಜಪಾನಿಯರಿಂದ ಯುಧ್ಧ ಕೈದಿಗಳಾದ ಬ್ರಿಟಿಷ್ ಸೈನ್ಯದ ಭಾರತೀಯರನ್ನು ಸಂಘಟಿಸಿ ಈ ಸೈನ್ಯವನ್ನು ರಚಿಸಲಾಯಿತು. ಅತ್ಯಂಥ ದಕ್ಷ ಸೈನ್ಯವಾಗಿ ರೂಪುಗೊಂಡ ಆಜಾದ್ ಹಿಂದ್ ಸೇನೆ ಇಂಡಿಯನ್ ನ್ಯಾಷನಲ್ ಆರ್ಮಿ(I.N.A.)ಯಾಗಿ ರೂಪುಗೊಂಡಿತು.

ಐಎನ್‌ಎ ಬೆಳೆಯುತ್ತಾ ಹೋಗಿ 60,000 ಬಲಾಢ್ಯ ಯೋಧರನ್ನು ಒಳಗೊಂಡಿತು. ನಾಲ್ಕು ರೆಜಿಮೆಂಟ್‌ಗಳನ್ನು ಅದು ಒಳಗೊಂಡಿತ್ತು. ತನ್ನದೇ ಆದ ಅಧಿಶಾಸನ ಹೊರಡಿಸುವ ಅಂಗ ರಚಿಸಿಕೊಂಡಿತ್ತು. ವೈದ್ಯಕೀಯ, ಹಣಕಾಸು, ನೇಮಕಾತಿ ಹಾಗೂ ತರಬೇತಿ ವಿಭಾಗಗಳೂ ಇದ್ದವು. ಆಗ್ನೇಯ ಏಷ್ಯಾದ ವಿವಿಧ ದೇಶಗಳಲ್ಲಿ 13 ಶಾಖೆಗಳನ್ನು ಅದು ಸ್ಥಾಪಿಸಿತ್ತು. ತನ್ನದೇ ಶೌರ್ಯ ಪ್ರಶಸ್ತಿ 'ಸರ್ದಾರ್-ಎ-ಜಂಗ್' ನೀಡುವ ನಿರ್ಧಾರವನ್ನೂ ಮಾಡಿತ್ತು.

ಐಎನ್‌ಎ ಮಹಿಳಾ ಬ್ರಿಗೇಡ್ ಸ್ಥಾಪಿಸುವುದಾಗಿ ನೇತಾಜಿ ಪ್ರಕಟಿಸಿದರು. ಅಂಥದ್ದೊಂದು ಸಾಧ್ಯತೆಯ ಕುರಿತು ಜಪಾನ್‌ಗೆ ಅನುಮಾನವಿತ್ತಾದರೂ ನೇತಾಜಿ ಆ ರೀತಿ ಯೋಚಿಸಿದ್ದರು. ಮಹಿಳಾ ಸಬಲೀಕರಣದ ಕುರಿತು ನೇತಾಜಿ ಅವರಿಗೆ ಒಲವಿತ್ತು. ಆದ್ದರಿಂದ ರಾಣಿ ಝಾನ್ಸಿ ರೆಜಿಮೆಂಟ್ ಸ್ಥಾಪಿಸಿದರು. ಅದನ್ನು ಲೆಫ್ಟಿನೆಂಟ್ ಕರ್ನಲ್ ಲಕ್ಷ್ಮಿ ಸ್ವಾಮಿನಾಥನ್ ಮುನ್ನಡೆಸಿದರು.

ಐಎನ್‌ಎ ಯೋಧರಿಗೆ ಜಪಾನ್ ಹಾಗೂ ಬರ್ಮ ಸೇನೆಯವರು ತೀವ್ರವಾದ ತರಬೇತಿ ನೀಡುತ್ತಿದ್ದರು. ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿಯಷ್ಟೇ ಅಲ್ಲದೆ ನಿಸ್ತಂತು ಸೇವೆಯ ಉಪಯೋಗದ ಬಗೆಗೂ ಹೇಳಿಕೊಡಲಾಗುತ್ತಿತ್ತು. ಅವುಗಳನ್ನು ಬಳಸಿಕೊಂಡು ಪ್ರಚಾರ ನಡೆಸುವುದು ಹೇಗೆ ಎನ್ನುವುದನ್ನು ಕಲಿಸಲಾಗುತ್ತಿತ್ತು. ಸ್ಫೋಟಕಗಳ ತಯಾರಿಕೆ, ಉಪಯೋಗದ ಕುರಿತೂ ತಿಳಿಸಿಕೊಟ್ಟ ತರಬೇತಿ ಅದು. ಶತ್ರುಗಳ ಯೋಜನೆಗಳನ್ನು ಅರಿಯುವ ಮಾರ್ಗೋಪಾಯಗಳು ಹಾಗೂ ಅವರ ಕಾರ್ಯತಂತ್ರವನ್ನು ಮಟ್ಟಹಾಕುವ ಬಗೆಗಳ ಕುರಿತು ಐಎನ್ಎನಲ್ಲಿ ಹೇಳಿಕೊಡಲಾಗುತ್ತಿತ್ತು.

For Quick Alerts
ALLOW NOTIFICATIONS  
For Daily Alerts

English summary
The Indian National Army (INA) was originally founded by Capt Mohan Singh in Singapore in September 1942 with Japan's Indian POWs . This was along the concept of- and with support of- what was then known as the Indian Independence League,headed by expatriate nationalist leader Rash Behari Bose. The idea of a liberation army was revived with the arrival of Subhas Chandra Bose in the Far East in 1943.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X