ಗಣಿತ ವಿಷಯದಲ್ಲಿ 100 ಅಂಕ ಸ್ಕೋರ್ ಮಾಡುವುದು ಹೇಗೆ?

Written By: Nishmitha B

ಸಿಬಿಎಸ್ ಇ ಅಥವಾ 12ನೇ ತರಗತಿಯ ಗಣಿತ ಪೇಪರ್‌ನಲ್ಲಿ ಅತೀ ಹೆಚ್ಚು ಮಾರ್ಕ್ ಸ್ಕೋರ್ ಮಾಡುವುದೆಂದ್ರೆ ಅದು ಸುಲಭದ ಮಾತಲ್ಲ. ಇನ್ನು ಈ ಸಬ್‌ಜೆಕ್ಟ್ ಬಗ್ಗೆ ಹೇಳುವುದಾದ್ರೆ ಬರೀ ಅಂಕ ಸ್ಕೋರ್ ಮಾಡಲು ಮಾತ್ರವಲ್ಲ ಕೆರಿಯರ್ ಲೈಫನಲ್ಲಿ ಎದುರಾಗುವ ಕಾಂಪಿಟೇಟೀವ್ ಪರೀಕ್ಷೆಗೂ ಈ ಸಬ್‌ಜೆಕ್ಟ್ ಮುಖ್ಯ.

ಇನ್ನೇನೋ ಮಾರ್ಚ 21 ರಂದು ಗಣಿತ ಪರೀಕ್ಷೆ ಎದುರಿಸಲಿದ್ದಾರೆ ವಿದ್ಯಾರ್ಥಿಗಳು. ಈ ಪರೀಕ್ಷೆ ಎದುರಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಸ್ವಲ್ಪ ಪರಿಶ್ರಮ ಹಾಗೂ ಸಲಹೆ ಇದ್ರೆ ಮಾರ್ಕ್ ಸ್ಕೋರ್ ಮಾಡುವುದು ಕಷ್ಟವಲ್ಲ. ಹೇಗೆ ಈ ಸಬ್‌ಜೆಕ್ಟ್ ಹ್ಯಾಂಡಲ್ ಮಾಡಬೇಕು ಎಂದು ನಾವು ತಿಳಿಸಿಕೊಡುತ್ತೇವೆ ಓದಿ

ಯುನಿಟ್ ಹೆಸರು ಅಂಕ 
 1ರಿಲೇಶನ್ಸ್‌ ಆಂಡ್ ಫಂಕ್ಷನ್ಸ್   10
 2ರೇಖಾಗಣಿತ   13
 3ಕ್ಯಾಲ್ಕುಲಸ್   44
 4ವಾಹಕಗಳು ಮತ್ತು ಮೂರು ಆಯಾಮದ ರೇಖಾಗಣಿತ   17
 5ಲೀನಿಯರ್ ಪ್ರೊಗ್ರಾಮಿಂಗ್   06
 6ಪ್ರೊಬಾಬಿಲಿಟಿ   10
 ಒಟ್ಟು   100

ಪರ್ಫೆಕ್ಟ್ ಅಂಕ ಸ್ಕೋರ್ ಮಾಡಲು ಇಲ್ಲಿ ಕೆಳಗೆ ಕೆಲವೊಂದು ಸಲಹೆ ನೀಡಲಾಗಿದೆ

ಗಣಿತ ವಿಷಯದಲ್ಲಿ 100 ಅಂಕ ಸ್ಕೋರ್ ಮಾಡುವುದು ಹೇಗೆ?

ಪರೀಕ್ಷೆ ಹಾಲ್‌ನಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇವು

1 ಮ್ಯಾಟ್ರಿಕ್ಸ್ ಎಲಿಮೆಂಟರಿ ಆಪರೇಷನ್ ಸಮ್ ನಲ್ಲಿ ಕಾಲಮ್ಸ್ ಹಾಗೂ ರಾವ್ಸ್ ನ್ನ ಬದಲಾಯಿಸಬೇಡಿ. ಕಾಲಂ ರೂಪಾಂತರಿಸಬೇಕಾದ್ರೆ ಕೇವಲ ಕಾಲಂನ್ನು ಮಾತ್ರ ಬದಲಾಯಿಸಿ. ಇದೇ ವಿಧಾನ ರಾವ್ಯ್ ಗೂ ಅನ್ವಯಿಸುತ್ತದೆ

2 ಫುಲ್ ಅಂಕ ಪಡೆಯಲು ವಿದ್ಯಾರ್ಥಿಗಳು ನಿರ್ಣಾಯಕ ಮೊತ್ತದ ಪ್ರಾಪರ್ಟಿಗಳನ್ನು ಬಳಸಿಕೊಳ್ಳಬೇಕು

3 ಲೈನರ್ ಪ್ರೋಗ್ರಾಮಿಂಗ್ ಗೆ ಸಂಬಂಧಪಟ್ಟ ಪ್ರಶ್ನೆಗಳು ಬಂದ್ರೆ ಫೀಸಿಬಲ್ ರೀಜನ್ ಅಗತ್ಯವಿರುತ್ತದೆ

4 ವೆಕ್ಟರ್ ಅಲ್‌ಜೀಬ್ರಾ ಹಾಗೂ ೩ಡಿ ಜೊಮೆಟ್ರಿ ಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ವಿಕ್ಟರ್ ಸೈನ್ ಅಗತ್ಯ ವೆಂಬುವುದು ಯಾವತ್ತೂ ಮರೆಯಬೇಡಿ

5 ಒಂದು ಅಂಕದ ಪ್ರಶ್ನೆಗೆ ಅಗತ್ಯವಿದ್ದಷ್ಟು ಮಾಹಿತಿ ಜತೆ ಸರಿಯಾಗಿ ಉತ್ತರಿಸಿ. ನಿಮ್ಮ ಉತ್ತರ ಕಂಡು ಹಿಡಿದ ಸ್ಟೆಪ್ಸ್ ಕೂಡಾ ಅಗತ್ಯ

6 ಕ್ಯಾಲ್ಕಸ್ ಹಾಗೂ ಬೀಜಗಣಿತಕ್ಕೆ ಸಂಬಂಧಪಟ್ಟ ಲೆಕ್ಕ ಮಾಡುವಾಗ ಬಳಸಿದ ಪ್ರಾಪರ್ಟೀ ಬಗ್ಗೆಯೂ ಬರೆಯಿರಿ

7 ಇನ್ನೂ ಪರೀಕ್ಷೆ ವೇಳೆ ಪದೇ ಪದೇ ಸಮಯವನ್ನ ಕೂಡಾ ಪರಿಶೀಲಿಸುತ್ತಾ ಇರಿ. ಯಾಕೆಂದ್ರೆ ಕೊಟ್ಟಂತಹ ಸಮಯದೊಳಗೆ ನೀವು ಪರೀಕ್ಷೆ ಬರೆದು ಮುಗಿಸಬೇಕು

8 ಪರೀಕ್ಷೆ ವೇಳೆ ಉತ್ತರ ಹಾಳೆಯಲ್ಲಿ ಗ್ರಾಫ್ ಹಾಗೂ ನಕ್ಷೆಗಳನ್ನ ಅಂದವಾಗಿ ಯಾವುದೇ ಚಿತ್ತು ಇಲ್ಲದೇ ಚಿತ್ರಿಸಿ

9 ಪ್ರಶ್ನೆಗೆ ಉತ್ತರಿಸುವ ಸ್ಕಿಲ್‌ ಗೆ ಇಲ್ಲಿ ಯಾವುದೇ ಸ್ಟಾಟಜಿ ಇಲ್ಲ. ಹಾಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನ ಸ್ಟಡಿ ಮಾಡುವುದೊಂದೇ ದಾರಿ

10 ಇನ್ನು ಸ್ಟಡಿ ಮಾಡುವಾಗ ಫ್ಲಾಶ್ ಕಾರ್ಡ್ ಬಳಸಿ ಸ್ಟಡಿ ಮಾಡಿ. ಇದು ಕಲಿಕೆಗೆ ಸುಲಭವಾಗುತ್ತದೆ

ಗಣಿತ ವಿಷಯದಲ್ಲಿ 100 ಅಂಕ ಸ್ಕೋರ್ ಮಾಡುವುದು ಹೇಗೆ?

ಕೊನೆಯದಾಗಿ ಸಲಹೆ:

1 ಎಲ್ಲಾ ಪರೀಕ್ಷೆಗೆ ಇರುವಂತೆ ಗಣಿತ ಪೇಪರ್‌ ಗೂ ಟೈಂ ಮ್ಯಾನೇಜ್‌ ಮೆಂಟ್ ಅಗತ್ಯ. ಉತ್ತಮ ಅಂಕಕ್ಕೆ ವಿದ್ಯಾರ್ಥಿಗಳು ತಮ್ಮದೇ ಆದ ಸ್ಟಾಟಜಿಯಲ್ಲಿ ಸ್ಟಡಿ ಮಾಡಬೇಕು. ಇನ್ನು ಎಕ್ಸಾಂ ಟೈಂನಲ್ಲಿ ಕೊನೆಯ ೧೦ ನಿಮಿಷ ಉತ್ತರ ಪತ್ರಿಕೆ ಚೆಕ್ ಮಾಡಲು ಮೀಸಲಿಡಿ

2 ಇನ್ನು ಉತ್ತರ ಹಾಳೆಯಲ್ಲಿ ಚಿತ್ತು, ಪೆನ್‌ ಇಂಕ್ ಮಾರ್ಕ್ ಎಲ್ಲಾ ಹಾಕಿ ಗಲೀಜು ಮಾಡಬೇಡಿ. ಯಾವಾಗಲೂ ಫ್ರೆಶ್ ಹಾಳೆಯಿಂದ ಉತ್ತರ ಬರೆಯಲು ಪ್ರಾರಂಭಿಸಿ. ಇನ್ನು ಉತ್ತರಗಳಿಗೆ ಸರಿಯಾದ ಪ್ರಶ್ನಾ ಸಂಖ್ಯೆ ಹಾಕಲು ಮರೆಯದಿರಿ. ಇನ್ನು ನಿಮಗೆ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ , ನಿಮಗೆ ಗೊತ್ತಿರುವ ಸ್ಟೆಪ್ ತನಕ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿ. ಯಾಕೆಂದ್ರೆ ಈ ಸಬ್‌ಜೆಕ್ಟ್ ನಲ್ಲಿ ಲೆಕ್ಕದ ಹಂತ ಹಂತಕ್ಕೂ ಮಾರ್ಕ್ ನೀಡಲಾಗುತ್ತದೆ

3 ಕೊನೆಯದಾಗಿ ನೆನಪಿನಲ್ಲಿಟ್ಟು ಕೊಳ್ಳಬೇಕಾದುದು ಏನಂದ್ರೆ ಈ ಹಂತದ ಪರೀಕ್ಷೆಗಳು ನಮ್ಮ ಕೆರಿಯರ್ ಲೈಫನ್ನು ನಿರ್ಧರಿಸುತ್ತದೆ. ಹಾಗಾಗಿ ಈ ಹಂತದಲ್ಲಿ ಸ್ವಲ್ಪ ಸೀರಿಯಸ್ ಆಗಿ ಓದಿ ಎಕ್ಸಾಂ ಬರೆಯಿರಿ. ನಿಮ್ಮ ಮುಂಬರುವ ಎಕ್ಸಾಂ ಗೆ ಆಲ್ ದಿ ಬೆಸ್ಟ್

English summary
The Mathematics paper in the CBSE Class 12 is not only the scoring one but also the subject that travels with you in the competitive exams. This mega paper is scheduled on Mar 21, 2018

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia