'ಸ್ವಯಂ' ಶಿಕ್ಷಣ: 2018ರ ವೇಳೆಗೆ ಒಂದು ಕೋಟಿ ವಿದ್ಯಾರ್ಥಿಗಳ ನೋಂದಣಿ

Posted By:

ಮುಕ್ತ ಮತ್ತು ಆನ್‌ಲೈನ್‌ ಕೋರ್ಸ್‌ ಗೆ ಸಂಬಂಧಿಸಿದಂತೆ ಆರಂಭವಾದ ಕೇಂದ್ರ ಸರ್ಕಾರದ ಮಹತ್ವದ 'ಸ್ವಯಂ' ಯೋಜನೆ ಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತಯಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದೆ.

ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ 'ಸ್ವಯಂ' ಮನೆ ಪಾಠ

ಐದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಈ ಆನ್‌ಲೈನ್‌ ವೇದಿಕೆಯಲ್ಲಿ ವಿವಿಧ ವಿಷಯಗಳ ವರ್ಚ್ಯುವಲ್‌ (ವಾಸ್ತವವನ್ನೇ ಹೋಲುವ) ತರಗತಿಗಳಿಗೆ ಹಾಜರಾಗಲು 18 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 2018 ರ ವೇಳೆಗೆ ಒಂದು ಕೋಟಿ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವ ಗುರಿ ಇದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಸ್ವಯಂ ಶಿಕ್ಷಣ

ಕನ್ನಡ ಸೇರಿದಂತೆ 10 ಪ್ರಾದೇಶಿಕ ಭಾಷೆಗಳಲ್ಲಿ 300 ಕೋರ್ಸ್‌ಗಳನ್ನು ಶೀಘ್ರ ಆರಂಭಿಸುವುದಾಗಿ ಸಚಿವಾಲಯ ತಿಳಿಸಿದ್ದು, ಸ್ವಯಂ  ಮೂಲಕ ವಿದೇಶಿ ವಿಶ್ವವಿದ್ಯಾಲಯಗಳ ಕೋರ್ಸ್‌ಗಳನ್ನು ಭಾರತೀಯ ಭಾಷೆಗಳಲ್ಲಿ ಆರಂಭಿಸಲು ಸಚಿವಾಲಯ ಯೋಚಿಸುತ್ತಿದೆ.

ಕನ್ನಡ, ಇಂಗ್ಲಿಷ್‌, ಹಿಂದಿ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳ, ಬಂಗಾಳಿ, ಮರಾಠಿ, ಒಡಿಯಾ, ಗುಜರಾತಿ, ಪಂಜಾಬಿ ಮತ್ತು ಅಸ್ಸಾಮಿ ಭಾಷೆಗಳಲ್ಲೂ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.‌

ಸ್ವಯಂ ಆನ್-ಲೈನ್ ಕೋರ್ಸ್

ಸ್ವಯಂ ಆನ್-ಲೈನ್ ಶಿಕ್ಷಣ ಮೂಲಕ ಯಾರು ಬೇಕಾದರೂ, ದೇಶದ ಯಾವ ಮೂಲೆಯಿಂದಲೂ ಆನ್‌ಲೈನ್‌ ಮೂಲಕ ಅಲ್ಪ ಖರ್ಚಿನಲ್ಲಿ ಈ ಕೋರ್ಸ್‌ಗಳನ್ನು ಮಾಡಬಹುದು.

ಸ್ವಯಂ ಆನ್-ಲೈನ್ ಶಿಕ್ಷಣ ಮೂಲಕ ಪ್ರಮಾಣ ಪತ್ರ, ಡಿಪ್ಲೊಮಾ ಮತ್ತು ಪದವಿ ಪಡೆಯಲು ಬಯಸುವವರು ಅದರ ಪೋರ್ಟಲ್‌ಗೆ ಭೇಟಿ ಕೊಟ್ಟು ನೋಂದಣಿ ಮಾಡಿಸಿಕೊಂಡು, ಸಣ್ಣ ಮೊತ್ತದ ಶುಲ್ಕ ಪಾವತಿಸಬೇಕು. ಕೋರ್ಸ್‌ ಮುಗಿದು ಪದವಿ, ಡಿಪ್ಲೊಮಾ ಪ್ರಮಾಣಪತ್ರ ನೀಡುವುದಕ್ಕೂ ಮುನ್ನ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಪಡೆದಿರುವ ಅಂಕ/ಗ್ರೇಡ್‌ಗಳನ್ನು ಆ ಅಭ್ಯರ್ಥಿಯ ಶೈಕ್ಷಣಿಕ ದಾಖಲೆಗಳಿಗೆ ವರ್ಗಾಯಿಸಲಾಗುತ್ತದೆ.

ಒಂದು ವೇಳೆ ವಿದ್ಯಾರ್ಥಿಗಳು ಯಾವುದಾದರೂ ವಿ.ವಿ ಮತ್ತು ಕಾಲೇಜುಗಳಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರ ಅಂಕಗಳು ಮತ್ತು ಗ್ರೇಡ್‌ಗಳನ್ನು ಅವರ ಮಾತೃ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ.

English summary
Union Human Resource Development (HRD) Minister Prakash Javadekar said that by 2018, the HRD ministry is targeting 1 crore student enrolment in Swayam programme – an indigenously developed educational platform by the government.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia